ಹಂಸಲೇಖ ವಿವಾದದ ಹೇಳಿಕೆ ನೀಡಿದ 'ಚಿಂತನಗಂಗಾ' ಪುಸ್ತಕ ಯಾರದು? ಅದರಲ್ಲೇನಿದೆ?

By Bhavani Bhat  |  First Published Aug 29, 2024, 4:22 PM IST

ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿ ಮಾಡುತ್ತಿರುವ ಹಂಸಲೇಖ, ಇನ್ನೊಂದು ವಿವಾದದ ಹೇಳಿಕೆ ನೀಡಿದ್ದಾರೆ. ಈ ವಿವಾದದಲ್ಲಿ 'ಚಿಂತನಗಂಗಾ' ಎಂಬ ಪುಸ್ತಕದ ಉಲ್ಲೇಖ ಮಾಡಿದ್ದಾರೆ. ಚಿಂತನಗಂಗಾ ಪುಸ್ತಕ ಯಾರದು, ಅದು ಹಂಸಲೇಖಾ ಹೇಳಿದಂತೆ 'ಭಯೋತ್ಪಾದಕ' ಪುಸ್ತಕವೇ? ನೋಡೋಣ.


ಹಂಸಲೇಖ ತಮ್ಮ ಚಿತ್ರಸಂಗೀತ ಹಾಗೂ ಹಾಡುಗಳಿಂದಾಗಿ 'ನಾದಬ್ರಹ್ಮ' ಎಂದು ಕರೆಸಿಕೊಂಡವರು. ಆದರೆ ಇತ್ತೀಚೆಗೆ ಅವರ ಹೇಳಿಕೆಗಳನ್ನು ನೋಡಿದರೆ ಅವರನ್ನು 'ವಿವಾದಬ್ರಹ್ಮ' ಎಂದು ಸಲೀಸಾಗಿ ಕರೆಯಬಹುದು ಅನಿಸುತ್ತದೆ. ಹಿಂದೆ ಪೇಜಾವರ ಶ್ರೀಗಳ ವಿರುದ್ಧ 'ಕುರಿಮಾಂಸ'ದ ಹೇಳಿಕೆ ನೀಡಿದ್ದವರು, ಈಗ ಬ್ರಾಹ್ಮಣರು ಹಾಗೂ 'ಚಿಂತನಗಂಗಾ' ಕೃತಿಯ ಕುರಿತು ಮಾತನಾಡಿದ್ದಾರೆ. ಏನಿದು ಚಿಂತನಗಂಗಾ? ಇದು ಅವರು ಹೇಳಿಕೊಂಡಿರುವಂತೆ ಭಯೋತ್ಪಾದಕ ಪುಸ್ತಕವೇ? 

ಮೊದಲು ಹಂಸಲೇಖ ಅವರ ಹೇಳಿಕೆ ಏನಿತ್ತು ಎಂದು ಪರಿಶೀಲಿಸೋಣ. "ದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆ ಜೊತೆಗೆ ಆರ್ಎಸ್ಎಸ್‌ನ 'ಚಿಂತನ ಗಂಗಾ' ಪುಸ್ತಕ ಇರುತ್ತೆ. 40 ವರ್ಷದ ಹಿಂದೆ ನಾನು ಚಿಂತನ ಗಂಗಾ ಪುಸ್ತಕ ಓದಿದ್ದೆ, ಅದು ಆರ್ ಎಸ್ ಎಸ್ ಅವರ ಸಂವಿಧಾನ. ಬ್ರಾಹ್ಮಣರು ಭಗವದ್ಗೀತೆಯನ್ನೂ ಓದುತ್ತಾರೆ, ಚಿಂತನಗಂಗಾವನ್ನೂ ಓದುತ್ತಾರೆ. ಆ ಪುಸ್ತಕ ಹೇಗೆ ಕೆಲಸ ಮಾಡುತ್ತೆ ಎಂದರೆ, ರಾಷ್ಟ್ರದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧವಾದ ಪ್ರತಿದಾಳಿ ಹೇಗೆ ಮಾಡಬೇಕು ಅಂತ ಆ ಚಿಂತನಾ ಗಂಗಾ ಪುಸ್ತಕ ಓದಿ ಕಲಿಯುತ್ತಾರೆ'' ಎಂದು ಹಂಸಲೇಖ ಹೇಳಿದ್ದರು. 

Tap to resize

Latest Videos

ಅವರ ಮಾತಿನ ಪ್ರಕಾರ ಭಗವದ್ಗೀತೆ ಹಾಗೂ ಚಿಂತನಗಂಗಾ ಎರಡೂ ರಾಷ್ಟ್ರವಿರೋಧಿ ಹಾಗೂ ಸಂವಿಧಾನ ವಿರೋಧಿ. ಚಿಂತನಗಂಗಾ ಓದಿದವರು ರಾಷ್ಟ್ರದ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕರಾಗುತ್ತಾರೆ. ಹೌದಾ? ಹಾಗಾದರೆ ಏನಿದೆ ಆ ಪುಸ್ತಕದಲ್ಲಿ? 

ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಮಗೆ ಗೊತ್ತೇ ಇದೆ. ಇದರ ಎರಡನೇ ಸರಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಲ್ವಾಲ್ಕರ್ ಎಂಬವರು ಬರೆದ ಕೃತಿ 'ಚಿಂತನಗಂಗಾ'. ಇವರನ್ನು ಪ್ರೀತಿಯಿಂದ ಗುರೂಜಿ ಎಂದೂ ಕರೆಯಲಾಗುತ್ತದೆ. ಈ ಕೃತಿಯ ಮೊದಲಲ್ಲೇ ಬರೆದಿರುವಂತೆ ಚಿಂತನಗಂಗಾ ಅಥವಾ "ಬಂಚ್ ಆಫ್ ಥಾಟ್ಸ್" ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಇವರು ಇದನ್ನು ಬರೆದುದು, ಹೊಸದಾಗಿ ಆರೆಸ್ಸೆಸ್ಸನ್ನು ಸೇರುವವರಿಗೆ ಹಾಗೂ ಈಗಾಗಲೇ ಸಂಘದಲ್ಲಿ ಇರವವರಿಗೆ ಸಂಘದ ಚಿಂತನೆಗಳ ಬಗೆಗೆ ಮಾಹಿತಿ ಇರಲಿ ಎಂಬ ಕಾರಣಕ್ಕಾಗಿ. ಆದರೆ ಇದೊಂದೇ ಸಂಘದ ಸಂವಿಧಾನ ಎಂದು ಯಾವ ಆರೆಸ್ಸೆಸ್‌ನವರೂ ಹೇಳಿಲ್ಲ ಹಾಗೂ ಹೇಳುವುದಿಲ್ಲ. ಈಗಿನ ಸರಸಂಘಚಾಲಕರು ಕೂಡ ಆರೆಸ್ಸೆಸ್‌ನ ಸಂವಿಧಾನ ಚಿಂತನಗಂಗಾ ಎಂಬ ಮಾತನ್ನು ಒಪ್ಪುವುದಿಲ್ಲ. ಸಂಘಕ್ಕೆ ಹಾಗೊಂದು ಸಂವಿಧಾನವೇ ಇಲ್ಲ. ದೇಶಭಕ್ತಿಯೇ ಆರೆಸ್ಸೆಸ್‌ನ ಸಂವಿಧಾನ ಹೊರತು ಬೇರ್ಯಾವುದೂ ಅಲ್ಲ. 

ಆರ್‌ಎಸ್‌ಎಸ್‌, ಭಗವದ್ಗೀತೆ ಹಾಗೂ ಬ್ರಾಹ್ಮಣರ ವಿರುದ್ಧ ಹಂಸಲೇಖ ವಿವಾದಾತ್ಮಕ ಹೇಳಿಕೆ

ಇನ್ನು ಚಿಂತನಗಂಗಾದಲ್ಲಿರುವ ಚಿಂತನೆಗಳು ಗುರೂಜಿ ಕಾಲಕ್ಕೆ ಕ್ರಾಂತಿಕಾರಿಯಾಗಿದ್ದವು. ಆದರೆ ಇಂದು ಹೆಚ್ಚಿನ ರಾಷ್ಟ್ರೀಯವಾದಿ ಚಿಂತಕರು ಈ ಚಿಂತನೆಗಳನ್ನು ದೇಶಾದ್ಯಂತ ಪ್ರಚಾರ ಮಾಡಿದ್ದಾರೆ. ಮುಖ್ಯವಾಗಿ, ಈ ದೇಶದಲ್ಲಿರುವ ಎಲ್ಲ ಮತೀಯರೂ ದೇಶಭಕ್ತಿಯನ್ನು ಹೊಂದಿರಬೇಕು ಎಂದು ಚಿಂತನಗಂಗಾ ಪ್ರತಿಪಾದಿಸುತ್ತದೆ. ಭಾರತೀಯ ಪ್ರಜೆ ಭಾರತದ ಮೇಲೆ ಪ್ರೀತಿ, ಗೌರವ ಹೊಂದದೆ ಇರುವುದು ತಪ್ಪು ಎಂದು ಹೇಳಿದರೆ ಅದು ರಾಷ್ಟ್ರದ್ರೋಹಿ ಚಿಂತನೆ ಹೇಗಾಗುತ್ತದೆ? ಹಿಂದೂಗಳು ಈ ದೇಶದಲ್ಲಿ ಬಹುಸಂಖ್ಯಾತರು. ಆದರೆ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದು ತಪ್ಪು. ಹಿಂದೂಗಳಿಗೆ ಆಗುವ ಅನ್ಯಾಯ ನಿಲ್ಲಬೇಕು. ಇದನ್ನು ಸ್ವಯಂಸೇವಕರು ಪ್ರಶ್ನಿಸಬೇಕು ಎಂದು ಗುರೂಜಿ ಪ್ರತಿಪಾದಿಸಿದರು.

ಇನ್ನು ಭಾಷೆಯ ವಿಚಾರದಲ್ಲಿ, ಎಲ್ಲ ಭಾಷೆಗಳೂ ಇರಬೇಕು. ಆದರೆ ಇಡೀ ದೇಶವನ್ನು ಒಂದುಗೂಡಿಸುವ ಭಾಷೆಯಾಗಿ ಹಿಂದಿ ಕಾಣಿಸಿಕೊಳ್ಳುತ್ತದೆ. ಪ್ರಾದೇಶಿಕತಾವಾದ ಹೆಚ್ಚಾದಷ್ಟೂ ಪ್ರತ್ಯೇಕತಾವಾದ ಹೆಚ್ಚುತ್ತದೆ. ನಾವೆಲ್ಲರೂ ಮೊದಲಿಗೆ ಭಾರತೀಯರು, ಹಿಂದೂಗಳು. ನಂತರ ಬೇರೆ ಬೇರೆ ರಾಜ್ಯದವರು. ಇದೂ ಕೃತಿಯಲ್ಲಿದೆ. ಆದರೆ ಎಂದೂ ಈ ಕೃತಿ ಅನ್ಯ ಮತಗಳನ್ನು ಬಗ್ಗು ಬಡಿಯುವುದು ಹೇಗೆ, ಅವರ ಮೇಲೆ ಏರಿ ಹೋಗುವುದು ಹೇಗೆ ಎಂದೆಲ್ಲ ಮಾತನಾಡಿಲ್ಲ. ಹೀಗಾಗಿ, ಹಂಸಲೇಖ ಅವರ ಮಾತುಗಳು ಪೂರ್ವಗ್ರಹ ಪೀಡಿತ ಮಾತುಗಳಂತೆ ಕಾಣಿಸುತ್ತವೆ. 

ಹಂಸಲೇಖ ಮಾತಿಗೆ ನೂರಾರು ನೆಟ್ಟಿಗರು ಕಿಡಿಕಾರಿದ್ದಾರೆ. "ಇವರು ಎಷ್ಟು ಜನರ ಮನೆಗೆ ಹೋಗಿ ನೋಡಿದಾರಂತೆ? ನಾನು ಫಸ್ಟ್ ಟೈಮ್ ಆ ಬುಕ್ ಬಗ್ಗೆ ಕೇಳಿದ್ದು.. ಈ ಸಾಮಾಜಿಕ ತಾಣದ ಯುಗದಲ್ಲಿ ಈ ಪರಿ ಸುಳ್ಳು ಹೇಳ್ತಾರಲ್ಲ, ನಿಜವಾಗ್ಲೂ ಇವರು ತಿಳುವಳಿಕೆ ಇರೋವ್ರಾ?" ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ.

ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ' ಚಿತ್ರದಲ್ಲಿ ಆರತಿ, ಅಂಬರೀಷ್ ನಟಿಸಿಲ್ಲ ಯಾಕೆ?
 

click me!