ಸಾಯಿಕುಮಾರ್ ಡ್ಯೂಪ್ ಆಗಿದ್ರು ಶಿವರಾಜ್‌ಕುಮಾರ್, ಯಾವ ಸಿನಿಮಾ & ಯಾಕೆ ಆಗಿದ್ದು ಗೊತ್ತಾ?

By Shriram Bhat  |  First Published Aug 29, 2024, 4:20 PM IST

ನಟ ಶಿವರಾಜ್‌ಕುಮಾರ್ ಜೋಡಿಯಾಗಿ 'ಎಕೆ 47' ಚಿತ್ರದಲ್ಲಿ 'A' ಚಿತ್ರದ ಖ್ಯಾತಿಯ ನಟಿ ಚಾಂದನಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರವು, ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಎನ್ನಿಸಿತ್ತು. ಬಾಲಿವುಡ್‌ ನಟ ಓಂ ಪುರಿ..


ಕನ್ನಡದ ಹ್ಯಾಟ್ರಿಕ್ ಹೀರೋ ಖ್ಯಾತಿಯ ನಟ ಶಿವರಾಜ್‌ಕುಮಾರ್ (Shiva Rajkumar) ಅವರು ಓಂ ಪ್ರಕಾಶ್ ರಾವ್ ನಿರ್ದೇಶನದ ಎಕೆ 47' ಚಿತ್ರದಲ್ಲಿ ನಾಯಕರಾಗಿದ್ದು ಗೊತ್ತೇ ಇದೆ. ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಸಾಲಿಗೆ ಸೇರಿದ್ದು, ಅಂದು ಹೊಸ ಇತಿಹಾಸ ಸೃಷ್ಟಿಸಿತ್ತು. ಈ ಚಿತ್ರದಲ್ಲಿ ಕನ್ನಡದಲ್ಲಿ ನಟ ಶಿವರಾಜ್‌ಕುಮಾರ್ ನಟಿಸುತ್ತಿದ್ದರೆ ತೆಲುಗಿನಲ್ಲಿ ಸಾಯಿಕುಮಾರ್ (Saikumar) ಇದೇ ಸಿನಿಮಾದ ತೆಲುಗು ವರ್ಷನ್‌ನಲ್ಲಿ ನಟಿಸುತ್ತಿದ್ದಾರೆ. ಆ ವೇಳೆ ಒಮ್ಮೆ ಶೂಟಿಂಗ್‌ನಲ್ಲಿ ನಟ ಸಾಯಿಕುಮಾರ್ ಗಾಯಗೊಂಡು ಆಸ್ಪತ್ರೆ ಸೇರಿದ್ದರು. 

ನಟ ಸಾಯಿಕುಮಾರ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದರೂ ತಕ್ಷಣಕ್ಕೆ ಯಾವುದೇ ವಿಪರೀತ ಎನ್ನುವಂಥ ಸಾಹಸದೃಶ್ಯಗಳಲ್ಲಿ ಪಾಲ್ಗೊಳ್ಳುವಂತೆ ಇರಲಿಲ್ಲ. ಹೀಗಾಗಿ ಅತ್ಯಗತ್ಯವಿದ್ದ ಲಾಂಗ್‌ ಶಾಟ್‌ನ ಕೆಲವು ಸೀನ್‌ಗಳಲ್ಲಿ ಸಾಯಿಕುಮಾರ್ ಬದಲು ಶಿವಣ್ಣ ಅವರನ್ನು ಡ್ಯೂಪ್ ಆಗಿ ಬಳಸಿಕೊಳ್ಳಲಾಗಿತ್ತು. ಈ ಸಂಗತಿ ಅಂದು ಹೆಚ್ಚಾಗಿ ಯಾರಿಗೂ ತಿಳಿದಿರಲಿಲ್ಲ. ಆದರೆ, ಇಂದು ಸೋಷಿಯಲ್ ಮೀಡಿಯಾ ಪರಿಣಾಮ ಇವೆಲ್ಲವೂ ಜಗಜ್ಜಾಹೀರು ಆಗುತ್ತಿದೆ. 

Tap to resize

Latest Videos

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್‌, ಆಪ್ತರ ಬಳಿ ಬೇಸರ ಹೊರಹಾಕಿದ ಪತ್ನಿ ವಿಜಯಲಕ್ಷ್ಮೀ..!

ನಟ ಶಿವರಾಜ್‌ಕುಮಾರ್ ಜೋಡಿಯಾಗಿ 'ಎಕೆ 47' ಚಿತ್ರದಲ್ಲಿ 'A' ಚಿತ್ರದ ಖ್ಯಾತಿಯ ನಟಿ ಚಾಂದನಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಚಿತ್ರವು, ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಎನ್ನಿಸಿತ್ತು. ಬಾಲಿವುಡ್‌ ನಟ ಓಂ ಪುರಿ ಕೂಡ ಈ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರವು ಅಂದು ಬಿಗ್ ಬಜೆಟ್ ಸಿನಿಮಾ ಎನ್ನಿಸಿಕೊಂಡಿತ್ತು. ಬಜೆಟ್ ಮೀರಿ ಈ ಸಿನಿಮಾ ಬಹಳಷ್ಟು ಗಳಿಕೆ ಕಂಡು ಅಂದು ಇಡೀ ತಂಡಕ್ಕೆ ಹೊಸ ಹುಮ್ಮಸ್ಸು ನೀಡಿತ್ತು. 

ನಟ ಸಾಯಿಕುಮಾರ್ ಅವರು ಕನ್ನಡದ ಬಹಳಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲತಃ ಸಾಯಿಕುಮಾರ್ ಅವರು ತೆಲುಗು ನಟರು. ಆದರೆ, ಪೊಲೀಸ್ ಸ್ಟೋರಿ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿ ಇಲ್ಲಿ ಯಶಸ್ಸು ಕಂಡಿದ್ದಾರೆ. ಜೊತೆಗೆ, ತೆಲುಗಿನಿಂದ ರೀಮೇಕ್ ಆದ ಹಲವು ಕನ್ನಡ ಚಿತ್ರಗಳಲ್ಲಿ ನಟ ಸಾಯಿಕುಮಾರ್ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್ ತಮ್ಮ ರವಿಶಂಕರ್ ಕೂಡ 'ಕೆಂಪೇಗೌಡ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಇಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ. 

ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ' ಚಿತ್ರದಲ್ಲಿ ಆರತಿ, ಅಂಬರೀಷ್ ನಟಿಸಿಲ್ಲ ಯಾಕೆ?

click me!