ಮೇಕಪ್​ ಮಾಡುವಾಗಲೇ ನಟಿ ಸೋನಲ್​ ಅರಿಶಿಣದ ಕೊಂಬು ಮಾಯ! ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

By Suchethana D  |  First Published Sep 15, 2024, 4:34 PM IST

ಮದುವೆಯಾದ ಮೇಲೂ ಬೇರೆಯ ನಟಿಯರಂತೆ ವರ್ತಿಸದೇ ಅರಿಶಿಣದ ಕೊಂಬನ್ನು ಕೊರಳಿನಲ್ಲಿಯೇ ಇಟ್ಟುಕೊಂಡಿದ್ದ ನಟಿ ಸೋನಲ್​ ಮೊಂಥೆರೋಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಮೇಕಪ್​ ಆದ ಬಳಿಕ ಅದು ಕಾಣೆಯಾಗಿದೆ! ಏನಿದು ವಿಷ್ಯ?
 


ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್​ 11ರಂದು ಬೆಂಗಳೂರಿನ ನಡೆದಿದೆ.  ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ  ತಮ್ಮ ನಾಲ್ಕು ವರ್ಷದ  ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ.  ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು  ವಿಶೇಷವೇ. ಈ ವಿವಾಹಕ್ಕೆ ಕನ್ನಡದ ಸ್ಟಾರ್ ಕಲಾವಿದರ ದಂಡು, ರಾಜಕೀಯ ಗಣ್ಯರು ಭಾಗಿಯಾದರು.  ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿತ್ತು. ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪ ನಿರ್ಮಾಣ ಮಾಡಲಾಗಿತ್ತು. ಕಲಾಂಜನಿ ವೆಡ್ಡಿಂಗ್ಸ್ ನ ಕಿರಣ್  ನೇತೃತ್ವದಲ್ಲಿ ಧಾರೆ ಮುಹೂರ್ತದ ಸೆಟ್  ಹಾಕಲಾಗಿತ್ತು. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು.

ಇದೀಗ ಇವರ ವಿವಾಹವಾಗಿ ಒಂದು ತಿಂಗಳು ಕಳೆದ ಮೇಲೆ ಅವರಿಗೆ ಮೇಕಪ್​ ಮಾಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ಅಷ್ಟಕ್ಕೂ ಸೋನಲ್​ ಅವರು ಮದುವೆಯಾದ ಮೇಲೆ ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಮಾಡರ್ನ್​ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದರೂ ಮದುವೆಯ ಸಂದರ್ಭದಲ್ಲಿ ಕಟ್ಟಿದ್ದ ಅರಿಶಿಣದ ಕೊಂಬನ್ನು ಹಾಗೆಯೇ ಉಳಿಸಿಕೊಂಡಿದ್ದರು. ಇಂದು ಸೆಲೆಬ್ರಿಟಿಗಳು ಮಾತ್ರವಲ್ಲದೇ ಹಲವು ಯುವತಿರಿಗೆ ಮಂಗಳಸೂತ್ರ ಎನ್ನುವುದು ಫ್ಯಾಷನ್​ ಆಗಿದೆ. ಹಿಂದೂ ಧರ್ಮದಲ್ಲಿ ಮಂಗಳಸೂತ್ರಕ್ಕೆ ತುಂಬಾ ಮಹತ್ವ ಇದ್ದರೂ, ಇಂದಿನ ಬಹುತೇಕರು ಅದನ್ನು ಕೇವಲ ಫ್ಯಾಷನ್​ ಆಗಿಯೇ ಪರಿಗಣಿಸುವುದು ಇದೆ. ಇದೇ ಕಾರಣಕ್ಕೆ ಮದುವೆಯಾಗುತ್ತಿದ್ದಂತೆಯೇ ಮಂಗಳಸೂತ್ರ ತೆಗೆದು ಇಡುತ್ತಾರೆ. ಇದೊಂದು ರೀತಿಯಲ್ಲಿ ಅವರಿಗೆ ಇದು ಹೆಮ್ಮೆಯ ವಿಷಯ ಕೂಡ. ಇದೇ ಕಾರಣಕ್ಕೆ, ಸೋನಲ್​ ಅವರನ್ನು ಸೋಷಿಯಲ್​ ಮೀಡಿಯಾದಲ್ಲಿ ಬಹಳ ಪ್ರಶಂಸೆ ಮಾಡಲಾಗಿತ್ತು. 

Latest Videos

ಎಐ ತಂತ್ರಜ್ಞಾನದಲ್ಲಿ ಕಾಣಿಸಿಕೊಂಡ ನಟ ಸುಧೀರ್‌! ಕಳೆದುಕೊಂಡ ಅಪ್ಪನನ್ನು ನೋಡಿ ತರುಣ್‌ ಕಣ್ಣೀರು

ಆದರೆ ಅವರ ಮೇಕಪ್ ವಿಡಿಯೋ ವೈರಲ್​ ಆಗುತ್ತಲೇ ಅರಿಶಿಣದ ಕೊಂಬು ಮಾಯವಾಗಿದ್ದನ್ನು ನೋಡಿರುವ ಅಭಿಮಾನಿಗಳು ನಟಿಯನ್ನು ಹಾಡಿ ಹೊಗಳಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ! ಅಷ್ಟಕ್ಕೂ ಸೋನಲ್​ ಅವರು ಮೊದಲು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಆ ಸಂದರ್ಭದಲ್ಲಿ ಅವರ ಕೊರಳಿನಲ್ಲಿ ಮದುವೆಯ ಸಂದರ್ಭದಲ್ಲಿನ ಅರಿಶಿಣದ ಕೊಂಬು ಹಾಗೆಯೇ ಇತ್ತು. ನಂತರ ಅವರಿಗೆ ಮೇಕ್​ ಓವರ್​ ಮಾಡಲಾಗಿದೆ. ಇದರಲ್ಲಿ ನಟಿ ಕ್ರೈಸ್ತರ ಮದುಮಗಳಂತೆ ಕಂಗೊಳಿಸುತ್ತಿದ್ದಾರೆ. ಆಗ ಅವರ ಕೊರಳಿನಲ್ಲಿದ್ದ ಅರಿಶಿಣದ ಕೊಂಬೂ ಮಾಯವಾಗಿದೆ. ಆಗಿದ್ದು ಇಷ್ಟೇ. ಆದರೆ ಈ ವಿಡಿಯೋ ವೈರಲ್​ ಆಗುತ್ತಲೇ ಇದರ ವಿರುದ್ಧ ಸಾಕಷ್ಟು ಟ್ರೋಲ್​ಗಳ ಸುರಿಮಳೆಯಾಗುತ್ತಿದೆ. 

 ಅಂದಹಾಗೆ ತರುಣ್​ ಮತ್ತು ಸೋನಲ್​  ನಡುವಿನ ವಯಸ್ಸಿನ ಅಂತರ  11 ವರ್ಷ. ತರುಣ್ ಸುಧೀರ್‌ಗೆ 41 ವರ್ಷ ವಯಸ್ಸಾಗಿದೆ. ಇನ್ನು ನಟಿ ಸೋನಲ್ ಮೊಂಥೆರೋಗೆ 29 ವರ್ಷ ವಯಸ್ಸಾಗಿದೆ. ಸೋನಲ್‌  ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು.  ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.  

ಬೆಳಕಿನ ಕವಿತೆ... ಎನ್ನುತ್ತಲೇ ಡಾನ್ಸ್ ವೇದಿಕೆ ಮೇಲೆ ಪ್ರೇಮಕಾವ್ಯ ಬರೆದ ತರುಣ್-ಸೋನಲ್ ನವದಂಪತಿ

click me!