ಇಂಥ ಅಪರೂಪ ಎನಿಸಿದ್ದ ನಟಿ ಕಲ್ಪನಾ, ಅದೊಮ್ಮೆ ತಮ್ಮ ಸಹನಟ ಕೆಎಸ್‌ಎಲ್ ಸ್ವಾಮಿ ಅವರಿಗೆ ಹೇಳಿದ್ದ ಒಂದು ಮಾತು ಅಂದಿನ ಕಾಲದಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತ್ತು ಎನ್ನಲಾಗಿದೆ. ಕೆಎಸ್‌ಎಲ್ ಸ್ವಾಮಿ ಅವರನ್ನು 'ಲಲಿತಾ ರವಿ' ಹಾಗು 'ರವಿ' ಎಂ ಹೆಸರಿನೊಂದಿಗೆ ಕೂಡ ಕರೆಯಲಾಗುತ್ತದೆ.
ಕನ್ನಡ ಚಿತ್ರರಂಗ ಕಂಡ ಅಪರೂಪದಲ್ಲಿ ಅಪರೂಪ ಎಂಬ ನಟಿ ಕಲ್ಪನಾ (Kalpana) ಬದುಕಿದ್ದು ಕೇವಲ 35 ವರ್ಷ. ಆದರೆ ಅಷ್ಟರಲ್ಲಿಯೇ ಅವರು ಬರೋಬ್ಬರಿ 78 ಸಿನಿಮಾಗಳಲ್ಲಿ ನಟಿಸಿ 'ಮಿನುಗುತಾರೆ' ಎಂಬ ಬಿರುದನ್ನು ಸಂಪಾದಿಸಿದ್ದರು. 'ಬೆಳ್ಳಿ ಮೋಡ (Belli Moda)' ಚಿತ್ರದ 'ಬೆಳ್ಳಿಮೋಡದ ಅಂಚಿನಿಂದ ಓಡಿಬಂದಾ ಮಿನುಗುತಾರೆ' ಎಂಬ ಹಾಡಿನ ಮೂಲಕ ಕಲ್ಪನಾ ಅವರಿಗೆ ಮಿನುಗು ತಾರೆ ಎಂಬ ಹೆಸರು ಬಂದಿದ್ದು. ಅಂಥ ನಟಿ ಕಲ್ಪನಾ ಅವರ ಸಾವು ಮಾತ್ರ ದೊಡ್ಡ ದುರಂಥ ಎನ್ನಬಹುದು. ಟನಿ ಕಲ್ಪನಾ ಅವರು ನೀದನ ಹೊಂದಿದ್ದು 1979 ಮೇ 10ರಂದು. ಅದು ಆತ್ಮಹತ್ಯೆ ಎಂದವರು ಕೆಲವರು, ಅದು ಕೊಲೆ ಎಂದವರು ಹಲವರು.
ನಟಿ ಕಲ್ಪನಾ ಸಾವು (Death) ಕೊಲೆಯೋ ಅಥವಾ ಅತ್ಮಹತ್ಯೆಯೋ ಎಂಬುದು ಇವತ್ತಿಗೂ ನಿಗೂಢವಾಗಿಯೇ ಇದೆ. ಆದರೆ ಬದುಕಿದ್ದಾಗಲೇ ಅವರ ಜೀವನದ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿತ್ತು ಎಂಬುದು ಅಷ್ಟೇ ನಿಜ. 18 ಜುಲೈ 1943ರಲ್ಲಿ ಜನಿಸಿದ್ದ ಕಲ್ಪನಾ ಮೂಲ ಹೆಸರು ಶರತ್ ಲತಾ (Sharat Lata).ಅಂದಿನ ಮದ್ರಾಸ್ ಪ್ರೆಸಿಡೆನ್ಸಿ, ಅಂದರೆ ಇಂದಿನ ದಕ್ಷಣ ಕನ್ನಡದಲ್ಲಿ ಜನಿಸಿದ್ದ ನಟಿ ಕಲ್ಪನಾ ಕನ್ನಡ, ತುಳು, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬದುಕಿದ್ದ ಅಷ್ಟೇ ವರ್ಷಗಳಲ್ಲಿ ನಟಿ ಕಲ್ಪನಾ ಡಾ ರಾಜ್‌ಕುಮಾರ್ (Dr Rajkumar) ಸೇರಿದಂತೆ ಅಂದಿನ ಎಲ್ಲ ಘಟಾನುಘಟಿ ನಟರೊಂದಿಗೆ ನಟಿಸಿದ್ದರು.
undefined
ಹೀರೋ ಆದ್ರು ಜಿಮ್ ಟ್ರೈನರ್; 'ಖದೀಮ'ನಾಗಿ ನಟ ಚಂದನ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ
ಇಂಥ ಅಪರೂಪ ಎನಿಸಿದ್ದ ನಟಿ ಕಲ್ಪನಾ, ಅದೊಮ್ಮೆ ತಮ್ಮ ಸಹನಟ ಕೆಎಸ್‌ಎಲ್ ಸ್ವಾಮಿ (KSL Swamy)ಅವರಿಗೆ ಹೇಳಿದ್ದ ಒಂದು ಮಾತು ಅಂದಿನ ಕಾಲದಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತ್ತು ಎನ್ನಲಾಗಿದೆ. ಕೆಎಸ್‌ಎಲ್ ಸ್ವಾಮಿ ಅವರನ್ನು 'ಲಲಿತಾ ರವಿ' ಹಾಗು 'ರವಿ' ಎಂ ಹೆಸರಿನೊಂದಿಗೆ ಕೂಡ ಕರೆಯಲಾಗುತ್ತದೆ. ಅದೊಮ್ಮೆ ಕಲ್ಪನಾ ನಟಿಸುತ್ತಿದ್ದ ಶೂಟಿಂಗ್ ಸ್ಪಾಟ್ ಸನಿಹದಲ್ಲೇ ರವಿ ನಟನೆಯ ಸಿನಿಮಾ ಶೂಟಿಂಗ್ ಸಹ ನಡೆಯುತ್ತಿತ್ತು. ಆಗ ಶೂಟಿಂಗ್ ಮಧ್ಯೆ ವಿಶ್ರಾಂತಿ ವೇಳೆ ನಟಿ ಕಲ್ಪನಾ ಪುಸ್ತಕವೊಂದನ್ನು ಹಿಡಿದುಕೊಂಡು ಓದುತ್ತಿದ್ದರಂತೆ.
ಅಬ್ಬಾ, ಹಾಲಿವುಡ್‌ಗೆ ಹಾರಿ ಹೋಗಿರುವ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಗ್ಗೆ ಹೀಗೆ ಹೇಳ್ಬಿಟ್ರಾ!
ಅದನ್ನು ದೂರದಿಂದ ನೋಡಿದ ರವಿ ಅವರಿಗೆ ಕಲ್ಪನಾ ಮಗುವನ್ನು ಎತ್ತಿಕೊಂಡಂತೆ ಕಾಣಸಿತ್ತು. ತಮ್ಮ ವಿಶ್ರಾಂತಿ ವೇಳೆ ನಟಿ ಕಲ್ಪನಾ ಬಳಿ ಬಂದ ಕೆಎಸ್‌ಎಲ್ ಸ್ವಾಮಿಯವರು 'ನೀವು ಪುಸ್ತಕವನ್ನು ಹಿಡಿದುಕೊಂಡಿದ್ದೀರಾ? ನನಗೆ ದೂರದಿಂದ ನೀವು ಮಗುವನ್ನು ಎತ್ತಿಕೊಂಡಿರುವಂತೆ ಕಾಣಿಸುತ್ತಿತ್ತು' ಎನ್ನಲು ಕಲ್ಪನಾ ಅವರು 'ಅಯ್ಯೋ, ನಮ್ಮಂಥವರಿಗೆಲ್ಲ ಮಗು ಇರಬಾರದು' ಎಂದಿದ್ದರಂತೆ. ತಕ್ಷಣವೇ ಕಲ್ಪನಾ ಕಿವಿ ಹಿಂಡಿದ ನಟ ರವಿ ಅವರು 'ನಿಮ್ಮ ಬಾಯಿಂದ ಇಂಥ ಮಾತುಗಳೆಲ್ಲ ಬರಬಾರದು' ಎಂದಿದ್ದರಂತೆ. ಕಲ್ಪನಾ ಯಾಕೆ ಹಾಗೆ ಹೇಳಿದ್ದು ಎಂದು ರವಿ ಆವರು ಆಗ ಶಾಕ್‌ಗೆ ಒಳಗಾಗಿದ್ದರಂತೆ.
ಸಲ್ಮಾನ್ ಖಾನ್ ಅಳಿಯ, ಕಾಂಗ್ರೆಸ್ ಧುರೀಣರ ಮೊಮ್ಮಗನಾಗಿದ್ದೂ ಬಾಲಿವುಡ್‌ನಲ್ಲಿ ಚಾನ್ಸ್ ಗಗನಕುಸುಮ!
ಬಳಿಕ, ಸುದ್ದಿ ಮೂಲಗಳಿಂದ ರವಿ ಅವರಿಗೆ ತಿಳಿದ ಸಂಗತಿ ಏನೆಂದರೆ, 'ನಟಿ ಕಲ್ಪನಾಗೂ ಅವರ ಪತಿ ಬಿಎನ್ ವಿಶ್ವನಾಥ್‌ಗೂ ಅದಾಗಲೇ ವೈಮನಸ್ಯ ಮೂಡಿತ್ತು. ಜತೆಗೆ ಕಲ್ಪನಾ ಅವರಿಗೆ ಇಸುಬು ಮತ್ತು ಇನ್ನೇನೋ ಒಂದು ಬಗೆಯ ಚರ್ಮರೋಗ ಕಾಡುತ್ತಿತ್ತು ಎನ್ನಲಾಗಿದೆ. ಅಷ್ಟು ಸಾಲದು ಎಂಬಂತೆ, ಪುಟ್ಟಣ್ಣ ಅವರಿಂದ ದೂರವಾದ ನಟಿ ಕಲ್ಪನಾ ಅವರಿಗೆ ಸಿನಿಮಾಗಳ ಅವಕಾಶ ಸಹ ಸಾಕಷ್ಟು ಕಡಿಮೆಯಾಗಿತ್ತು ಎನ್ನಲಾಗಿದೆ. ಹೀಗಾಗಿ ಕಲ್ಪನಾ ಆ ಮಾತಿಗೆ ಇಷ್ಟೆಲ್ಲ ಕಾರಣಗಳು ಜತೆಗೂಡಿದ್ದವು ಎನ್ನಲಾಗಿದೆ.