ಹೀರೋ ಆದ್ರು ಜಿಮ್ ಟ್ರೈನರ್; 'ಖದೀಮ'ನಾಗಿ ನಟ ಚಂದನ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

Published : Mar 09, 2024, 03:09 PM ISTUpdated : Mar 09, 2024, 03:13 PM IST
ಹೀರೋ ಆದ್ರು ಜಿಮ್ ಟ್ರೈನರ್; 'ಖದೀಮ'ನಾಗಿ ನಟ ಚಂದನ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಸಾರಾಂಶ

ಟೀಸರ್ ನೋಡಿದ್ದೀರ. ಅತಿ ಶೀಘ್ರದಲ್ಲೇ ಆಡಿಯೋ ಲಾಂಚ್, ಟ್ರೇಲರ್ ಲಾಂಚ್ ಆಗುತ್ತದೆ. ಆದಷ್ಟು ಬೇಗ ಬೆಳ್ಳಿ ಪರದೆಗೆ ಬರಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ. ಖದೀಮ ಒಳ್ಳೆ ಸಿನಿಮಾ, ಪದ ಬಳಕೆ ಹಾಗೂ ದೃಶ್ಯಗಳಲ್ಲಿ ಅಸಭ್ಯ ಹಾಗೂ ಅಸಹ್ಯ ಬರುವುದಿಲ್ಲ. ಚಿಕ್ಕ‌ಮಕ್ಕಳಿಂದ ದೊಡ್ಡವರು ನೋಡಬಹುದಾದ ಕನ್ನಡ ಸಿನಿಮಾ..

ಕನ್ನಡ ಚಿತ್ರರಂಗದಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಹಲವು ಹೊಸಬರು ಕ್ವಾಲಿಟಿ ಜೊತೆಗೆ, ಕಂಟೆಂಟ್ ವುಳ್ಳ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ದೊಡ್ಡ ಗೆಲುವು ಸಾಧಿಸದಿದ್ದರೂ ಪ್ರಶಂಸೆಯನ್ನು ಪಡೆದು ಪ್ರೇಕ್ಷಕರ ಆದರಣೆಗೆ ಪಾತ್ರರಾಗುತ್ತಿದ್ದಾರೆ. ಹೊಸ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೊಂದು ಹೊಸಬರ ಸಿನಿಮಾ ಬಿಡುಗಡೆಗೆ ತಯಾರಾಗಿದೆ.

ಶಿವೇಶು ಪ್ರೊಡಕ್ಷನ್ ಚೊಚ್ಚಲ ಹೆಜ್ಜೆ ಖದೀಮ (Khadeema) ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಬಿಡುಗಡೆಗೆ ಹಂತಕ್ಕೆ ಬಂದಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ಈ ಚಿತ್ರಕ್ಕೆ ಟಿ ಶಿವಕುಮಾರನ್ ಹಣ ಹಾಕಿದ್ದು, ಇದು ಇವರ ಮೊದಲ ಪ್ರಯತ್ನವಾಗಿದೆ. ಇವರ ಈ ಸಾಹಸಕ್ಕೆ ಸಹ ನಿರ್ಮಾಪಕಿಯಾಗಿ ಯಶಸ್ವಿನಿ ಸಾಥ್ ಕೊಟ್ಟಿದ್ದಾರೆ. ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ಇವರು ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು,‌ ನೋಡುಗರ ಗಮನಸೆಳೆಯುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಟೀಸರ್ ಕಾರ್ಯಕ್ರಮದಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ‌ ಹಂಚಿಕೊಂಡಿದೆ.

ನಿರ್ದೇಶಕ ಸಾಯಿ ಪ್ರದೀಪ್ (Sai Pradeep) ಮಾತನಾಡಿ, ಟೀಸರ್ ನೋಡಿದ್ದೀರ. ಅತಿ ಶೀಘ್ರದಲ್ಲೇ ಆಡಿಯೋ ಲಾಂಚ್, ಟ್ರೇಲರ್ ಲಾಂಚ್ ಆಗುತ್ತದೆ. ಆದಷ್ಟು ಬೇಗ ಬೆಳ್ಳಿ ಪರದೆಗೆ ಬರಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ. ಖದೀಮ ಒಳ್ಳೆ ಸಿನಿಮಾ, ಪದ ಬಳಕೆ ಹಾಗೂ ದೃಶ್ಯಗಳಲ್ಲಿ ಅಸಭ್ಯ ಹಾಗೂ ಅಸಹ್ಯ ಬರುವುದಿಲ್ಲ. ಚಿಕ್ಕ‌ಮಕ್ಕಳಿಂದ ದೊಡ್ಡವರು ನೋಡಬಹುದಾದ ಕನ್ನಡ ಸಿನಿಮಾ ಎಂದರು.

ನಟ ಚಂದನ್ (Chandan) ಮಾತನಾಡಿ, 'ನಿನ್ನೆವರೆಗೂ ನಾನು ಚಂದನ್. ಈಗ ಖದೀಮ. ಸಿನಿಮಾ ನೋಡಿದ ಮೇಲೆ ಚಂದನ್ ಅನ್ನುವುದನ್ನು ಮರೆತು ಖದೀಮ ಎಂದು ಕರೆಯುತ್ತಾರೆ. ಸಿನಿಮಾದಲ್ಲಿ ನಾನು ಕದೀಯುತ್ತೇನೆ. ಏನು ಕದಿದ್ದೇನೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನಮ್ಮ ಗುರುಗಳು ದಯಾನಂದ್ ಅಂಕಲ್‌ಗೆ ಧನ್ಯವಾದ. ಶಶಾಂಕ್ ಸರ್ ಇಲ್ಲ ಅಂದಿದ್ದರೆ ಖದೀಮ ಸ್ವಲ್ಪ ಕಷ್ಟವಾಗುತಿತ್ತು. ಟೈಟಲ್ ನನ್ನ ಪಾತ್ರ. ಖದೀಮ ಎಂಬ ಪಾತ್ರಕ್ಕೆ ಕಷ್ಟಪಟ್ಟಿದ್ದೇನೆ. ಸಿಕ್ಸ್ ಪ್ಯಾಕ್ ಮಾಡಿ ರೆಡಿಯಾಗ್ಲಾ ಎಂದು ಡೈರೆಕ್ಟರ್ ಕೇಳಿದೆ. ಅವರು ರೋಡಲ್ಲಿ ಬಿಟ್ಟಿರುವ ಹೋರಿಯಂಗೆ ಕಾಣಬೇಕು' ಎಂದರು.

ಟೈಟಲ್ ಹೇಳುವಂತೆ ಖದೀಮನ ಕಥೆ ಜೊತೆ ಆಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾ ಮೂಲಕ ಜಿಮ್ ಟ್ರೈನರ್ ಚಂದನ್ ಹೀರೋ ಸ್ಯಾಂಡಲ್ ವುಡ್ ಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಯುಐ ಸಿನಿಮಾದ ಟ್ರೋಲ್ ಹಾಡಿನಲ್ಲಿ ಕಾಣಿಸಿಕೊಂಡಿರುವ ಅನುಷಾ ನಾಯಕಿಯಾಗಿ ನಟಿಸಿದ್ದಾರೆ. ಶೋಭಾರಾಜ್, ಮಿಮಿಕ್ರಿ ದಯಾನಂದ್, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಗಿರಿಜಾ‌ ಲೋಕೇಶ್ ಅವರಂತಹ ಹಿರಿಯ ಹಾಗೂ ಅನುಭವಿ ಕಲಾದಂಡು ಚಿತ್ರದಲ್ಲಿದೆ.

ಶುರುವಾಯ್ತು 'ಸೋಮು ಸೌಂಡ್ ಇಂಜಿನಿಯರ್' ಹವಾ; ಶಿಷ್ಯ ಅಭಿಗೆ ಸುಕ್ಕ ಸೂರಿ ಸಾಥ್

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಒಂದಷ್ಟು  ಸಿನಿಮಾಗಳಲ್ಲಿ ದುಡಿದಿರುವ ಸಾಯಿ ಪ್ರದೀಪ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ , ವಿಕ್ರಂ ಮೋರ್ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ, ರಾಜು ನೃತ್ಯ ಸಂಯೋಜನೆ, ನಾಗಾರ್ಜುನ್ ಛಾಯಾಗ್ರಹಣ ಹಾಗೂ ಉಮೇಶ್ ಸಂಕಲನ ಖದೀಮ ಸಿನಿಮಾಕ್ಕಿದೆ.

ಸದ್ಯದಲ್ಲೇ ಮೋಡಿ ಮಾಡಲಿರುವ ಅನಿರುದ್ಧ ಜತ್ಕರ್-ಸುರಭಿ ಜೋಡಿ; ಕಿರುತೆರೆಯಲ್ಲಿ ಸೂರ್ಯವಂಶ!

ಚೇತನ್ ಕುಮಾರ್, ಪ್ರಮೋದ್ ಮರವಂತೆ ಹಾಗೂ ವೆಂಕಟೇಶ್ ಕುಲಕರ್ಣಿ ಹಾಗು ಕವಿರಾಜ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್, ವಾಸುಕಿ ವೈಭವ್, ಚಂದನ್ ಶೆಟ್ಟಿ ಹಾಗೂ ಮಲಯಾಳಂನ ಯಾಸಿನ್ ನಾಜಿರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬೆಂಗಳೂರು ಸುತ್ತಮುತ್ತ,  ಬೆಂಗಳೂರಿನ ಸಿಟಿ ಮಾರ್ಕೆಟ್ ಹಾಗೂ ಕೇರಳದಲ್ಲಿ ಒಂದನ್ನು ಹಾಡನ್ನು ಚಿತ್ರೀಕರಿಸಲಾಗಿದೆ.‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್