ಜೀ ಕನ್ನಡ 'ಸರಿಗಮಪ 17'ರಲ್ಲಿ ಪಾಲ್ಗೊಂಡ ಅಂಧ ಗಾಯಕಿಯರ ನೋವಿಗೆ ಸ್ಪಂದಿಸಿದ ನವರಸ ನಾಯಕ ಜಗ್ಗೇಶ್ ಈ ಸಹೋದರಿಯರಿಗೆ ತುಮಕೂರಿನಲ್ಲಿ ಮನೆ ಕಟ್ಟಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ವ್ಯಕ್ತ ಪಡಿಸಿದ್ದಾರೆ.
ದಶಕಗಳ ಕಾಲ ವಿಭಿನ್ನ ಹಾಸ್ಯ ಮತ್ತು ನಟನೆಯ ಮೂಲಕವೇ ಪ್ರೇಕ್ಷಕರ ಮನ ಗೆದ್ದಿರುವ ನಟ ನವರಸ ನಾಯಕ ಜಗ್ಗೇಶ್. ಚಿತ್ರರಂಗದಲ್ಲಿ ಮಿಂಚುತ್ತಾ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಜಗ್ಗೇಶ್ ಯಾವುದೇ ಕಲಾವಿದರು ನೋವಿನಲ್ಲಿದ್ದರೂ ಅತ್ಯುತ್ತಮವಾಗಿ ಸ್ಪಂದಿಸುತ್ತಾರೆ.
ಕಲಾವಿದರು ಕಷ್ಟದಲ್ಲಿರಬಾರದು, ಅಂಧ ಗಾಯಕಿಯರಿಗೆ ಜಗ್ಗೇಶ್ ಸೂರಿನ ವಾಗ್ದಾನ
ಇತ್ತೀಚಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಶೋ 'ಸರಿಗಮಪ-17'ರಲ್ಲಿ ಅಂಧ ಗಾಯಕ ಸಹೋದರಿಯರಾದ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರು ತಮ್ಮ ಧ್ವನಿ ಮೂಲಕ ಪ್ರೇಕ್ಷಕರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ. ಕಷ್ಟದಲ್ಲಿರುವ ಈ ಗಾಯಕಿಯರ ನೆರವಿಗೆ ಜಗ್ಗೇಶ್ ಮುಂದಾಗಿದ್ದು, ಸ್ವಂತ ಸೂರು ನಿರ್ಮಿಸಿಕೊಟ್ಟಿದ್ದಾರೆ.
ಕೊಟ್ಟ ಮಾತಿಗೆ ಬದ್ಧರಾದ ಜಗ್ಗೇಶ್:
'ಸರಿಗಮಪ'ದ ಅಂಧ ಪ್ರತಿಭೆಗಳಿಗಾಗಿ ನಿರ್ಮಿಸಿರುವ ನೂತನ ಗೃಹ ಕೀಲಿ ಕೈಗೊಪ್ಪಿಸಲು ಮಾರ್ಚ್ 12 ನಾನು ಮತ್ತು ಮಡದಿ ಪರಿಮಳ ಹೋಗುತ್ತೇವೆ. ತಿಂಗಳಲ್ಲಿ ನನ್ನ ಇಚ್ಛೆಯನ್ನು ಕಾರ್ಯರೂಪಕ್ಕೆ ತಂದು ಮುಗಿಸಿದ ನನ್ನ ಆತ್ಮೀಯ ಕೊರಟಗರೆ ಅಭಿಮಾನಿಗಳ ಸಂಘದ ರವಿ ಹಾಗೂ ಮಿತ್ರರಿಗೆ ಧನ್ಯವಾದಗಳು. ನಿಮ್ಮ ಕಾರ್ಯ ರಾಯರ ಹೃದಯಕ್ಕೆ ಅರ್ಪಣೆ' ಎಂದು ಬರೆದುಕೊಂಡಿದ್ದಾರೆ.
ತೀವ್ರ ಅನಾರೋಗ್ಯ, ಚಿಕಿತ್ಸೆಗೂ ಹಣವಿಲ್ಲ; ಹಿರಿಯ ನಟನ ಬೆನ್ನಿಗೆ ನಿಂತ ಜಗ್ಗೇಶ್
ಅಷ್ಟೇ ಅಲ್ಲದೇ ಕೆಲವು ದಿನಗಳ ಹಿಂದೆ ಕಿಲ್ಲರ್ ವೆಂಕಟೇಶ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯಕ್ಕೆ ತುತ್ತಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಜಗ್ಗೇಶ್ ಅವರು ಕುಟುಂಬದವರ ಜೊತೆ ಕೈ ಜೋಡಿಸಿ ಈ ಹಿರಿಯ ಕಲಾವಿದನ ಸಹಾಯಕ್ಕೆ ಧಾವಿಸಿದ್ದರು. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿಯೂ ಈ ಕಲಾವಿದನಿಗೆ ನೆರವು ನೀಡುವಂತೆ ಆಗ್ರಹಿಸಿದ್ದರು. ಈ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಚಿಕಿತ್ಸೆಗೆ ಅಗತ್ಯ ಆರ್ಥಿಕ ನೆರವು ನೀಡಿದ್ದರು.