
ಬೆಂಗಳೂರು: ಕನ್ನಡ ಚಲನಚಿತ್ರರಂಗದ ಅಪ್ರತಿಮ ನಟ, "ಸಾಹಸ ಸಿಂಹ" ಡಾ. ವಿಷ್ಣುವರ್ಧನ್ ಅವರ ಸಮಾಧಿ ತೆರವು ವಿಚಾರ ರಾಜ್ಯದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೈಕೋರ್ಟ್ ಆದೇಶದಂತೆ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಸಮಾಧಿಯನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಷ್ಣು ಕುಟುಂಬದ ಪರವಾಗಿ ನಟ ಅನಿರುದ್ಧ್ ಅವರು ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಅಭಿಮಾನಿಗಳ ಪ್ರಶ್ನೆ ವೇಳೆ ಗದ್ದಲ ನಡೆದ ಘಟನೆಯೂ ನಡೆಯಿತು. ಈ ಸಭೆಯಲ್ಲಿ ಅಭಿಮಾನಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಎದುರು ಮಾತನಾಡಿದ ಅನಿರುದ್ಧ್ ಅವರು, ಸಮಾಧಿ ವಿಚಾರದಲ್ಲಿ ಕುಟುಂಬದ ಮೇಲೆ ಹಲವಾರು ಅಪವಾದಗಳು, ಆರೋಪಗಳು ಕೇಳಿಬರುತ್ತಿವೆ. ಎಲ್ಲವನ್ನೂ ಶಾಂತಿಯುತವಾಗಿ ಚರ್ಚಿಸಲು ನಾನು ಈ ಸಭೆಗೆ ಕರೆದಿದ್ದೇನೆ. ಪ್ರತಿಭಟನೆ ಮಾಡುವಂತ ಪರಿಸ್ಥಿತಿ ಇಲ್ಲ, ಏಕೆಂದರೆ ಕೋರ್ಟ್ ಆದೇಶವಿದೆ. ಆದ್ದರಿಂದ ಎಲ್ಲರೂ ಶಾಂತವಾಗಿರೋಣ" ಎಂದು ಮನವಿ ಮಾಡಿದರು.
ಸಭೆಯ ಕೊನೆಯಲ್ಲಿ ಅಭಿಮಾನಿಗಳಿಂದ ಗದ್ದಲ ಎದ್ದಿತು. ವಿಷ್ಣುವರ್ಧನ್ ಸಮಾಧಿಯನ್ನು ಉಳಿಸಲು ನೀವು ಏನು ಮಾಡಿದ್ದೀರಿ?" ಎಂಬ ಅಭಿಮಾನಿಯ ಪ್ರಶ್ನೆಗೆ ಅನಿರುದ್ಧ್ ತಕ್ಷಣ ಉತ್ತರಿಸದೆ ಮನೆಯೊಳಗೆ ಹೋಗಲು ಮುಂದಾದರು. ಇದರಿಂದ ಅಸಮಾಧಾನಗೊಂಡ ಅಭಿಮಾನಿಗಳು "ಪ್ರಶ್ನೆಗಳಿಗೆ ಉತ್ತರಿಸದೆ ಹೇಗೆ ಹೋಗ್ತೀರಿ?" ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ವೇದಿಕೆಗೆ ಮರಳಿದ ಅನಿರುದ್ಧ್ ಅವರು ಅಭಿಮಾನಿಗಳಿಗೆ ಶಾಂತಗೊಳಿಸುವ ಪ್ರಯತ್ನ ಮಾಡಿದರೂ, ಕೆಲವರು ವಿಷ್ಣುವರ್ಧನ್ ಜೊತೆ ಯಶ್ ಮಾತ್ರ ನಿಂತಿದ್ದಾರೆ ಎಂದು ಹೇಳಿದಾಗ ಮತ್ತಷ್ಟು ಗದ್ದಲ ಸೃಷ್ಟಿಯಾಯಿತು.
ವಿಷ್ಣವರ್ಧನ್ ಸಮಾಧಿ ಸಂಬಂಧ ಅಭಿಮಾನಿಗಳ ಜೊತೆ ಸಭೆಯಲ್ಲಿ ಹೈಡ್ರಾಮ ನಡೆಯಿತು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸದೆ ಮನೆಯೊಳಗೆ ಹೋಗಲು ತೆರಳಲು ಅನಿರುದ್ಧ್ ಮುಂದಾದರು. ಈ ವೇಳೆ ಅಭಿಮಾನಿಗಳಿಂದ ಗದ್ದಲ ಆರಂಭವಾಯ್ತು. ಪ್ರಶ್ನೆಗಳಿಗೆ ಉತ್ತರಿಸದೆ ಹೇಗೆ ಹೋಗ್ತೀರಿ ಅಂತ ಪ್ರಶ್ನೆ ಎತ್ತಿದರು. ಬಳಿಕ ಅನಿರುದ್ಧ್ ವೇದಿಕೆಗೆ ಮರಳಿದರು. ಅಭಿಮಾನಿಗಳು ಮಾತನಾಡಬೇಕಾದರೆ ಎಡವಟ್ಟಾಗಿದೆ. ವಿಷ್ಣುವರ್ಧನ್ ಜೊತೆ ಯಶ್ ಮಾತ್ರ ನಿಂತಿದ್ದು ಎಂದು ಅಭಿಮಾನಿಯೊಬ್ಬರು ಹೇಳಿದಾಗ ಅಲ್ಲಿಂದ ಗದ್ದಲ ಶುರುವಾಯ್ತು. ಷ್ಣುವರ್ಧನ್ ಸಮಾಧಿ ಉಳಿಸಿಕೊಳ್ಳಲು ನೀವು ಏನು ಮಾಡಿದ್ದೀರಿ ಎಂದು ಅಭಿಮಾನಿ ಅನಿರುದ್ಧ್ ಗೆ ಕೇಳಿದರು. ವಿಷ್ಣುವರ್ಧನ್ ಸಮಾಧಿ ಮಾಡೋದಾದ್ರೆ ಯಾರು ಬೇಕಾದರೂ ಮಾಡಿ. ನಮ್ಮ ಅಭ್ಯಂತರ ಇಲ್ಲ, ಆದ್ರೆ ನಾವು ಸಪೋರ್ಟ್ ಮಾಡಲ್ಲ. ಸಮಾಧಿ ಒಂದೇ ಸ್ಥಳದಲ್ಲಿ ಇರಬೇಕು ಎಂದು ಅನಿರುದ್ಧ್ ಹೇಳಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದರು. ಮಳೆಯ ನಡುವೆಯೇ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ವಿಷ್ಣುವರ್ಧನ್ ನಿವಾಸದ ಮುಂದೆ ಪ್ರತಿಭಟನೆ ನಡೆಯಿತು.
ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅನಿರುದ್ಧ್, "ಇಷ್ಟು ಮಂದಿ ಬಂದು ಅಪ್ಪಾವ್ರಿಗೆ ಗೌರವ ಸಲ್ಲಿಸಿರುವುದು ನನಗೆ ಸಂತೋಷ. ನೀವೆಲ್ಲಾ ನಮ್ಮ ಸಿಂಹಗಳು, ಸಿಂಹಿಣಿಯರು. ಅಭಿಮಾನ ಸ್ಟುಡಿಯೋದಲ್ಲಿ ನಡೆದ ಘಟನೆ ನಮಗೆಲ್ಲರಿಗೂ ನೋವುಂಟುಮಾಡಿದೆ. ಆದರೆ ಈ ವಿವಾದದ ಹಿಂದೆ ಅನೇಕ ಕಾರಣಗಳಿವೆ. ಅವುಗಳನ್ನು ನಿಮಗೆ ಸ್ಪಷ್ಟಪಡಿಸಬೇಕಾಗಿದೆ ಎಂದರು. ಅವರು ಅಭಿಮಾನಿಗಳಿಗೆ ಹಳೆಯ ಸಭೆಗಳ ಎರಡು ವಿಡಿಯೋಗಳನ್ನು ತೋರಿಸಲು ಮುಂದಾಗಿದ್ದರು. ಮೈಸೂರಿನಲ್ಲಿ ಸ್ಮಾರಕ ಉದ್ಘಾಟನೆಯ ಮೊದಲು ಹಾಗೂ ತಮ್ಮ ಹಳೆಯ ಮನೆಯಲ್ಲಿ ನಡೆದ ಸಭೆಯ ದೃಶ್ಯಾವಳಿಗಳನ್ನು ತೋರಿಸಿ, "ಇದು ನಾನು ಫಸ್ಟ್ ಟೈಂ ಸಭೆ ಕರೆದಿಲ್ಲ. ಇತ್ತೀಚೆಗೆ ಮಾತ್ರವಲ್ಲ, ಹಲವು ಬಾರಿ ಸಭೆ ಮಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದೇನೆ" ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.