ಕನ್ನಡಿಗರಿಗೆ 'ಯಾವಾಗಲೂ ನೌತಾ ಇರಿ' ಎಂದ ರಶ್ಮಿಕಾ: ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ಬಿದ್ದ ಕಿರಿಕ್ ಬೆಡಗಿ

Published : Jul 10, 2023, 05:59 PM ISTUpdated : Jul 12, 2023, 03:02 PM IST
ಕನ್ನಡಿಗರಿಗೆ 'ಯಾವಾಗಲೂ ನೌತಾ ಇರಿ' ಎಂದ ರಶ್ಮಿಕಾ: ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ಬಿದ್ದ ಕಿರಿಕ್ ಬೆಡಗಿ

ಸಾರಾಂಶ

ಕನ್ನಡವನ್ನು ತಪ್ಪಾಗಿ ಮಾತನಾಡಿದ ರಶ್ಮಿಕಾ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಇಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ರಶ್ಮಿಕಾ ಕನ್ನಡದಲ್ಲಿ ಮಾತನಾಡಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. 

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇಂದು ಕೊಂಚ ಬಿಡುವು ಮಾಡಿಕೊಂಡು ಬಿಡುವು ಮಾಡಿಕೊಂಡು ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಕೇಳಿ ಎಂದು ಅಭಿಮಾನಿಗಳ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ರಶ್ಮಿಕಾ ಪ್ರಶ್ನೆಗಳನ್ನು ಕೇಳಿ ಎನ್ನುತ್ತಿದ್ದಂತೆ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಹರಿದು ಬಂದಿವೆ. ಅದರಲ್ಲಿ ಕೆಲವು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ರಶ್ಮಿಕಾ ಉತ್ತರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಗೂ ಕನ್ನಡ ಸಿನಿಮಾ ಪ್ರೇಮಿಗಳ ಮೇಲೆ ಅಪಾರ ಆಸಕ್ತಿ ತೋರುತ್ತಿರುವಂತಹ ರಶ್ಮಿಕಾ ಅಭಿಮಾನಿಗಳು ಕೇಳಿದ ಪ್ರಶ್ನೆಗಳಲ್ಲಿ ಮೊಟ್ಟ ಮೊದಲನೆಯದಾಗಿ ಕನ್ನಡದ ಪ್ರಶ್ನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಭಿಮಾನಿ ಒಬ್ಬರು ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ. ಕನ್ನಡದಲ್ಲಿ ಎರಡು ಸಾಲು ಮಾತನಾಡುವುದರಲ್ಲಿಯೇ ಎಡವಟ್ಟು ಮಾಡಿಕೊಂಡಿದ್ದಾರೆ. ರಶ್ಮಿಕಾ ಮಾತನಾಡಿರುವ ಕನ್ನಡ ಈಗ ಸಿಕ್ಕಾಪಟ್ಟೆ ಟ್ರೋಲ ಆಗುತ್ತಿದೆ. 

'ಎಲ್ಲರೂ ಹೇಗಿದ್ದೀರಾ? ನಾನು ಚೆನ್ನಾಗಿದ್ದೀನಿ ಯಾವಾಗಲೂ ನೌತಾ ಇರಿ. ನಾನು ನಿಮ್ಮ ಬಗ್ಗೆ ಯೋಚಿಸುತ್ತಿರುತ್ತೇನೆ' ಎಂದಿದ್ದಾರೆ. 'ಯಾವಾಗಲೂ ನಗ್ತಾ ಇರಿ' ಎನ್ನುವ ಬದಲು 'ಎಲ್ಲರೂ ಯಾವಾಗಲೂ ನೌತಾ ಇರಿ' ಎಂದಿದ್ದಾರೆ. ರಶ್ಮಿಕಾ ತಪ್ಪಾಗಿ ಕನ್ನಡ ಮಾತನಾಡಿರುವುದು ಟ್ರೋಲಿಗರಿಗೆ ಆಹಾರವಾಗಿದೆ. ಸದಾ ಒಂದಲ್ಲ ಒಂದು ವಿಚಾರದಿಂದ ಟ್ರೊಲ್ ಆಗುವ ರಶ್ಮಿಕಾ ಸಾಕಷ್ಟು ದಿನಗಳಿಂದ ಟ್ರೋಲ್ ಗಳಿಂದ ದೂರ ಉಳಿದುಕೊಂಡಿದ್ದರು. ಆದರೆ ಈಗ ಮತ್ತೆ ಕನ್ನಡ ತಪ್ಪಾಗಿ ಮಾತನಾಡಿ ಟ್ರೋಲ್ ಪೇಜ್ ಗಳಲ್ಲಿ  ಸದ್ದು ಮಾಡ್ತಿದ್ದಾರೆ.

ಕೋಟಿಗಟ್ಟಲೆ ದುಡಿದ್ರೂ ಕಡಿಮೆ ಬೆಲೆಯ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಅವರ ಈ ವಿಡಿಯೋ ನೋಡಿದ ನೆಟ್ಟಿಗರು ಕನ್ನಡ ಸರಿಯಾಗಿ ಮಾತನಾಡಮ್ಮ ಎಂದು ಪಾಠ ಮಾಡಿದ್ದಾರೆ. ಅದಷ್ಟೇ ಅಲ್ಲದೆ ಕನ್ನಡ ಮಾತನಾಡುವುದಕ್ಕೆ ಬರಲಿಲ್ಲ ಅಂದರೆ ಕಲಿತುಕೊಳ್ಳಿ ಈ ರೀತಿ ತಪ್ಪಾಗಿ ಮಾತನಾಡಬೇಡಿ ಎಂದು ಸಲಹೆಯನ್ನು ಕೂಡ ಕೊಟ್ಟಿದ್ದಾರೆ.

ಇನ್ನು ಹಲವಾರು ಪ್ರಶ್ನೆಗಳನ್ನ ಅಭಿಮಾನಿಗಳು ಕೇಳಿದ್ದು ರಶ್ಮಿಕಾ ಉತ್ತರ ನೀಡಿದ್ದಾರೆ. ತಾವು ಆರು ಭಾಷೆಯನ್ನು ಮಾತನಾಡುವುದಾಗಿ ಹೇಳಿದ್ದಾರೆ. ಅದರ ಜೊತೆಗೆ ತಮ್ಮ ಕೈಬರಹ ಹೇಗಿದೆ ಅನ್ನೋದನ್ನು ಪುಸ್ತಕ ಹಾಗೂ ಪೆನ್ ಹಿಡಿದು ಬರೆದು ತೋರಿಸಿದ್ದಾರೆ.

ಕ್ಯಾಪ್ಟನ್ ಮಾರ್ವೆಲ್ ಅವತಾರದಲ್ಲಿ ರಶ್ಮಿಕಾ ಸೇರಿ ಭಾರತೀಯ ತಾರೆಯರು!

ಇತ್ತೀಚಿಗಷ್ಟೇ ನಟಿ ತಮ್ಮನ್ನ ತಮ್ಮ ಹ್ಯಾಪಿ ಪ್ಲೇಸ್ ಯಾವುದು ಅನ್ನೋದನ್ನ ಅನೌನ್ಸ್ ಮಾಡಿದ್ದರು. ಹಾಗೆ ಅವತ್ತಿನಿಂದ ಹ್ಯಾಪಿ ಪ್ಲೇಸ್ ಅನ್ನೋ ವರ್ಡ್ ಸಖತ್ ಟ್ರೆಂಡಿಂಗ್ ನಲ್ಲಿದೆ. ಹಾಗಾಗಿ ಅಭಿಮಾನಿ ಒಬ್ಬರು ರಶ್ಮಿಕಾ ಅವ್ರಿಗೂ ಕೂಡ ನಿಮ್ಮ ಹ್ಯಾಪಿ ಪ್ಲೇಸ್ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ರಶ್ಮಿಕಾ ನನ್ನ ತವರು ಮನೆ ಕೂರ್ಗ್ ನನ್ನ ಹ್ಯಾಪಿ ಪ್ಲೇಸ್ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!