ಸಿನಿಮಾ ಯಶಸ್ಸು ಮತ್ತು ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹಂಚಿಕೊಂಡಿರುವ ವಿಕ್ರಮ್. ತ್ರಿವಿಕ್ರಮ್ ಸೋಲಲು ಕಾರಣವೇನು?
ಕನ್ನಡ ಚಿತ್ರರಂಗ ಓನ್ ಆಂಡ್ ಓನ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ರವಿ ಬೋಪಣ್ಣ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಈಶ್ವರಿ ನಿರ್ಮಾಣ ಸಂಸ್ಥೆ ಮೂಲಕ ಸಿನಿ ರಸಿಕರಿಗೆ ಸಿನಿಮಾ ಹಬ್ಬ ಅಂದರೇನು ಎಂದು ತೋರಿಸುತ್ತಿದ್ದಾರೆ. ರವಿಚಂದ್ರ ಇಬ್ಬರೂ ಮಕ್ಕಳು ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಗಿಲ್‌ಪೇಟೆ ಸಿನಿಮಾ ಮೂಲಕ ಮನೋರಂಜನ್ ಎಂಟ್ರಿ ಕೊಟ್ಟರೆ ತ್ರಿವಿಕ್ರಮ್ ಸಿನಿಮಾ ಮೂಲಕ ವಿಕ್ರಮ್ ಎಂಟ್ರಿ ಕೊಟ್ಟಿದ್ದಾರೆ.
ಜೂನ್ 24, 2022ರಂದು ತ್ರಿವಿಕ್ರಮ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಿತ್ತು. ಪೋಸ್ಟರ್ ಲುಕ್, ಹಾಡುಗಳು, ಮೇಕಿಂಗ್ ಮತ್ತು ಪ್ರಚಾರ ಸೂಪರ್ ಅಗಿ ಮಾಡಿದ್ದರೂ ಕೂಡ ನಿರೀಕ್ಷೆ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ ಎನ್ನಬಹುದು. ಮೊದಲ ಚಿತ್ರಕ್ಕೆ ಸಮಯ ತೆಗೆದುಕೊಂಡು ತಯಾರಿ ಮಾಡಿಕೊಂಡಿರುವುದಕ್ಕೆ ವಿಕ್ರಮ್ ಪರಿಶ್ರಮವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಯಶಸ್ಸು ಮತ್ತು ಮುಂದಿನ ಪ್ಲ್ಯಾನ್‌ಗಳ ಬಗ್ಗೆ ವಿಕ್ರಮ್ ಮಾತನಾಡಿದ್ದಾರೆ.
undefined
'ಜನರಿಗೆ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳನ್ನು ಮಾಡುತ್ತೇವೆ. ಒಂದೆರಡು ಅಂತಲ್ಲಾ ಕೈಯಲ್ಲಿ ಒಳ್ಳೆ ಆಫರ್‌ಗಳಿವೆ. ಆದರೆ ನಿರ್ಮಾಣ ಸಂಸ್ಥೆ ಜೊತೆ ನಾವು ಸ್ಕ್ರಿಪ್ಟ್, ಡೈರೆಕ್ಟರ್‌ನ ಫೈನಲ್ ಮಾಡುತ್ತಿದ್ದೇವೆ. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇವೆ. ಪ್ರತಿಯೊಂದು ಪ್ರೊಡಕ್ಷನ್ ಹೌಸ್‌ನಿಂದಲ್ಲೂ ನನಗೆ ಆಫರ್‌ಗಳು ಇದೆ ಆದರೆ ನಾವು ಇನ್ನೂ ಮಾತುಕತೆ ಮಾಡಿಲ್ಲ. ನಮಗೆ ಎಲ್ಲರೂ ಸ್ನೇಹಿತರಾಗಿರುವುದರಿಂದ ಒಳ್ಳೆಯ ಸ್ಕ್ರಿಪ್ಟ್ ತೆಗೆದುಕೊಂಡು ಹೋಗಬೇಕು ಅನ್ನುವ ನಿರ್ಧಾರಕ್ಕೆ ಬಂದಿದ್ದೀವಿ' ಎಂದು ವಿಕ್ರಮ್ ಖಾಸಗಿ ಯೂಟ್ಯೂಬ್ ಚಾನೆಲ್ ಸಂದರ್ಶನಲ್ಲಿ ಮಾತನಾಡಿದ್ದಾರೆ.
Trivikrama Film Review: ಫೈಟು, ಲವ್ವು, ನೋವು ಮತ್ತು ಮಿಡಲ್ ಕ್ಲಾಸ್ ಲೈಫು
'ನಾವು ಏನೇ ಯೋಚನೆ ಮಾಡಿದ್ದರೂ ಒಂದು ವರ್ಷ ಆದ್ಮೇಲೆ ನನ್ನ ಸಿನಿಮಾ ರಿಲೀಸ್ ಆಗುತ್ತೆ.ಅವತ್ತು ಯಾವ ಸಿನಿಮಾ ಸೆಟ್ ಆಗುತ್ತೆ ಅನ್ನೋದನ್ನು ನೋಡಿಕೊಂಡು ಸಿನಿಮಾ ಮಾಡಬೇಕು ಅನ್ನುವ ನಿರ್ಧಾರಕ್ಕೆ ಬಂದಿರುವೆ. ನಮಗೆ ಏನೂ ಅವರವಿಲ್ಲ. ಜನರು ಪ್ರೀತಿ ತೋರಿಸುತ್ತಿದ್ದಾರೆ ಅಂತ ಒಂದು ಮೂರು ಸಿನಿಮಾ ಸೈನ್ ಮಾಡಿ ಕಾಸು ತಗೊಂಡು ಸಿನಿಮಾ ಮಾಡೋ ವಂಶದಲ್ಲಂತೂ ನಾವು ಹುಟ್ಟಿಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಅನ್ನೋ ಕಾಳಜಿ ಜಾಸ್ತಿ ಇದೆ' ಎಂದು ವಿಕ್ರಮ್ ಹೇಳಿದ್ದಾರೆ.
'ಅಣ್ಣ ಮನು ಬಳಿ ಎರಡು ಸಿನಿಮಾ ಪ್ರಾಜೆಕ್ಟ್ ಲೈನಪ್ ಮಾಡಿಕೊಂಡಿದ್ದಾರೆ. ಅದನ್ನು ಅವರೇ ಅನೌನ್ಸ್ ಮಾಡುತ್ತಿದ್ದಾರೆ. ಅದರಲ್ಲಿ ಒಂದು ಸಿನಿಮಾವನ್ನು ನಾನು ಫುಲ್ ಅಗಿ ಹ್ಯಾಂಡಲ್ ಮಾಡುತ್ತೇನೆ. ಆ ಸಿನಿಮಾವನ್ನು ನಾನೇ ಅನೌನ್ಸ್ ಮಾಡುತ್ತೇನೆ. ಇನ್ನೊಂದನ್ನು ಬೇರೆ ಯಾರೋ ಬಂದಿದ್ದಾರೆ ಅವರು ಮಾಡುತ್ತಾರೆ' ಎಂದಿದ್ದಾರೆ ವಿಕ್ರಮ್.