ನಟ ಸುದೀಪ್‌ಗೆ ಮತ್ತೊಂದು ಪೋಸ್ಟ್ ಮೂಲಕ ಉತ್ತರಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮೀ..!

Published : Dec 29, 2025, 01:43 PM IST
Kichcha Sudeep Vijayalakshmi Darshan

ಸಾರಾಂಶ

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ದರ್ಶನ್, "ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಇಂತಹ ಮೀಮ್ಸ್ ಮೂಲಕ ಟ್ರೋಲ್ ಮಾಡುವುದು ಸಾಮಾನ್ಯ. ಆದರೆ ಮಹಿಳೆಯರು ಹೆಚ್ಚು ಬಲಿಷ್ಠರು" ಎಂಬ ಸಂದೇಶವಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನೇನು ಹೇಳಿದ್ದಾರೆ ವಿಜಯಲಕ್ಷ್ಮೀ..?

ಮತ್ತೊಂದು ಪೋಸ್ಟ್ ಹಂಚಿಕೊಂಡ ವಿಜಯಲಕ್ಷ್ಮಿ!

ಸದ್ಯ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸ್ಟಾರ್ ವಾರ್ ನಡೆಯುತ್ತಿರೋದು ಗೊತ್ತೇ ಇದೆ. ಶುರುವಾದ ಫ್ಯಾನ್ಸ್‌ ವಾರ್ ಆ ಬಳಿಕ ಸ್ಟಾರ್‌ ವಾರ್‌ಗೆ ಟರ್ನ್ ತೆಗೆದುಕೊಂಡಿದೆ. ಕಿಚ್ಚ ಸುದೀಪ್ (Kichcha Sudeep) ಅವರು 'ಪೈರಸಿ' ಪದ ಉಪಯೋಗಿಸದೇ ಹುಬ್ಬಳ್ಳಿಯಲ್ಲಿ ತಮ್ಮ ಅಭಿಮಾನಿಗಳಿಗೆ 'ಯುದ್ಧ'ಕ್ಕೆ ಕೊಟ್ಟ ಕರೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಸುದೀಪ್‌ಗೆ ಟಾಂಗ್ ಕೊಟ್ಟಿದ್ದರು. ಅಲ್ಲಿಂದ ಶುರುವಾದ ಫ್ಯಾನ್ಸ್ ವಾರ್, ಆ ಬಳಿಕ ಸ್ಟಾರ್ ವಾರ್‌ ಇಂದಿಗೂ ಮುಂದುವರೆದುಕೊಂಡು ಬಂದಿದೆ.

ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಕಿಚ್ಚ ಸುದೀಪ್ ಪ್ರತ್ಯೇಕ ವೇದಿಕೆಗಳಲ್ಲಿ ಆಡಿದ ಮಾತುಗಳು ಭಾರೀ ವಿವಾದಕ್ಕೆ ತಿರುಗಿದ್ದವು.

ಸುದೀಪ್-ದರ್ಶನ್ ಫ್ಯಾನ್ ವಾರ್

ಜತೆಗೆ, ಸುದೀಪ್-ದರ್ಶನ್ ಫ್ಯಾನ್ ವಾರ್ ಕೂಡ ತಾರಕಕ್ಕೇರಿತ್ತು. ಕೆಲವರು ವಿಜಯಲಕ್ಷ್ಮಿ ಅವರ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಕೂಡ ಮಾಡಿದ್ದರು. ಇದರಿಂದ ಕೆರಳಿದ ವಿಜಯಲಕ್ಷ್ಮಿ ಅವರು ಪೊಲೀಸರಿಗೆ ದೂರು ನೀಡುವ ಮೂಲಕ ಕಾನೂನು ಸಮರ ಸಾರಿದ್ದರು. ಬಳಿಕ 'ಕ್ಲಾಸ್ ಫ್ಯಾನ್ಸ್‌ಗೆ ಇದು ಎಚ್ಚರಿಕೆ' ಎಂದಿದ್ದರು. ವಿಜಯಲಕ್ಷ್ಮಿ ಮಾತಿಗೆ ತಿರುಗೇಟು ನೀಡಿದ್ದ ಸುದೀಪ್, 'ನಾವು ಕಪಾಳಕ್ಕೆ ಹೊಡೆಸಿಕೊಳ್ಳುವವರಲ್ಲ' ಎಂದು ಹೇಳಿದ್ದರು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು. ಇದರ ಸ್ಕಿನ್‌ಶಾಟ್‌ಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಜಯಲಕ್ಷ್ಮಿ, ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಹ ನೀಡಿದ್ದರು. ಸ್ಕಿನ್‌ಶಾಟ್‌ಗಳಲ್ಲಿ ಕೆಲವರು ಅವಾಚ್ಯ ಪದಗಳನ್ನು ಬಳಸಿ ಅವಮಾನಿಸಿದ್ದರು. ಹೆಚ್ಚಿನ ಐಡಿಗಳ ಹೆಸರಲ್ಲಿ ಕಿಚ್ಚ ಸುದೀಪ್ ಹೆಸರು ಇತ್ತು. ಮೇಲ್ನೋಟಕ್ಕೆ ಇದು ಸುದೀಪ್ ಅಭಿಮಾನಿಗಳು ಮಾಡಿರೋ ಕಾಮೆಂಟ್ ಎಂಬ ಗುಮಾನಿ ಇತ್ತು.

15 ಸೋಷಿಯಲ್ ಮೀಡಿಯಾ ಖಾತೆಗಳು, 150 ಪೋಸ್ಟ್‌ಗಳನ್ನು ಉಲ್ಲೇಖಿಸಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.

ಇನ್ನಷ್ಟು ವಿವರಣೆ ಬೇಡ

ಬಳಿಕ, ತಮ್ಮ ಪೋಸ್ಟ್ ಮೂಲಕ ವಿಜಯಲಕ್ಷ್ಮಿ ಅವರು "ಕ್ಲಾಸ್ ಫ್ಯಾನ್ಸ್"ಗಳು ನಿಮ್ಮ ಸ್ಯಾಂಡರ್ಡ್ಸ್ ತೋರಿಸಿದ್ದಕ್ಕೆ ಧನ್ಯವಾದ. ಈ ಖಾತೆಗಳ ವಿರುದ್ಧ ದೂರು ದಾಖಲಿಸಲಾಗಿದೆ. ಕಿರುಕುಳ ನೀಡುವುದನ್ನು ಇನ್ಮುಂದೆ ಅಭಿಮಾನ ಎಂದು ಕರೆಯಲು ಸಾಧ್ಯವಿಲ್ಲ, ಕೀಳು ಭಾಷೆ ಬಳಸುವ "ಕ್ಲಾಸಿ" ಹುಡುಗಿಯರಿಗೆ ವಿಶೇಷ ಚಪ್ಪಾಳೆ. ಆಕಾಶದಿಂದ ಇಳಿದಂತಿರುವ "ಕ್ಲಾಸಿ' ಹುಡುಗರಿಗೆ ಇದಕ್ಕೆ ಇನ್ನಷ್ಟು ವಿವರಣೆ ಬೇಡ. ಇದನ್ನೆಲ್ಲ ಸಾಮಾನ್ಯವೆಂದು ಮೌನವಾಗಿ ಒಪ್ಪಿಕೊಳ್ಳುವವಳಲ್ಲ ನಾನು. ಪ್ರತಿ ಮಹಿಳೆಯೂ ಗೌರವಕ್ಕೆ ಅರ್ಹಳು ಎಂಬುದನ್ನು ನೆನಪಿಸುವ ಸಂದೇಶ ಇದು' ಎಂಬ ಎಚ್ಚರಿಕೆ ನೀಡಿದ್ದರು.

'ಕ್ಲಾಸ್ ಫ್ಯಾನ್ಸ್' ಎಂದು ಉಲ್ಲೇಖಿಸಿ ವಿಜಯಲಕ್ಷ್ಮಿ ದೂರು ನೀಡಿರುವ ಬಗ್ಗೆ ಕಿಚ್ಚ ಸುದೀಪ್, 'ನೀವು ಕಪಾಳಕ್ಕೆ ಹೊಡೆದರೆ ಸುಮ್ಮನೆ ಹೊಡೆಸಿಕೊಳ್ಳುವವನು ನಾನಲ್ಲ. ಪ್ರೀತಿಯಿಂದ ತಾಯಿ ಹೊಡೆಯುವ ಏಟುಗಳೇ ಬೇರೆ, ಪಕ್ಕದ ಮನೆಯವರು ಹೊಡೆಯುವ ಏಟುಗಳೇ ಬೇರೆ. ಅವರಿಗೆ ನಮ್ಮ ಮೇಲೆ ಒಲವು ಇರುತ್ತೆ ಹಾಗಂತ ಅವರು ಯಾವುದೇ ಫೇಕ್ ಐಡಿಯಿಂದ ಮಾಡಿಲ್ವಲ್ಲಾ? ಎಂದು ಕೌಂಟರ್ ನೀಡಿದ್ದರು. ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿಯ ಪೋಸ್ಟ್ ಗಮನ ಸೆಳೆದಿದೆ.

ಟ್ರೋಲ್‌ಗೆ ಟಾಂಗ್ ಕೊಟ್ಟ ವಿಜಯಲಕ್ಷ್ಮಿ!

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ದರ್ಶನ್, "ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಇಂತಹ ಮೀಮ್ಸ್ ಮೂಲಕ ಟ್ರೋಲ್ ಮಾಡುವುದು ಸಾಮಾನ್ಯ. ಆದರೆ ಮಹಿಳೆಯರು ಹೆಚ್ಚು ಬಲಿಷ್ಠರು" (Nowdays its normal to troll women by such memes. but women's are strongest) ಎಂಬ ಸಂದೇಶವಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ವಿಜಯಲಕ್ಷ್ಮಿ ತಮ್ಮ ಮೇಲಿನ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ವಿಜಯಲಕ್ಷ್ಮಿ ನಡುವಿನ ಸೋಷಿಯಲ್ ಮೀಡಿಯಾ ಪೋಸ್ಟ್‌ ವಾರ್ ಇನ್ಮುಂದೆ ಯಾವ ತಿರುವು ತೆಗೆದುಕೊಳ್ಳಲಿದೆಯೋ ಏನೋ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹಿರಿಯ ನಟಿ ಲಕ್ಷ್ಮೀ ಕೆನ್ನೆಗೆ ಮುತ್ತಿಟ್ಟು ‘My inspiration’ ಎಂದ ಸಂಗೀತಾ ಅನಿಲ್
ಬರ್ತಾ ಬರ್ತಾ ಸಖತ್ Bold ಆಗ್ತಿದ್ದಾರೆ ಬಿಗ್ ಬಾಸ್ ಸಿಂಹಿಣಿ Sangeetha Sringeri