
ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಸಹ ಕಲಾವಿದರ ಸಂಘಕ್ಕೆ 4 ಲಕ್ಷ ರುಪಾಯಿಗಳನ್ನು ನೀಡಿ, ಈ ಹಣದಲ್ಲಿ ಸುಮಾರು 600 ಮಂದಿ ಸಹ ಕಲಾವಿದರಿಗೆ ರೇಶನ್ ಕಿಟ್ ನೀಡುವಂತೆ ಸೂಚಿಸಿದ್ದರು.
ಅದರಂತೆ ಸಹ ಕಲಾವಿದರ ಸಂಘದ ವತಿಯಿಂದ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ರೇಶನ್ ಜತೆಗೆ ಸಾರಿಗೆ ಭತ್ಯೆ ಎಂದು ತಲಾ 200 ರುಪಾಯಿಗಳನ್ನೂ ಸಹ ನೀಡಲಾಯಿತು ಎಂದು ಕರ್ನಾಟಕ ಸಹ ಕಲಾವಿದರ ಸಂಘದ ಖಜಾಂಚಿ ದಿವಾಕರ್ ಆರಗ ತಿಳಿಸಿದ್ದಾರೆ.
ಹಾಡಿನ ಶೂಟಿಂಗ್‌ಗೆ 3 ಕೋಟಿ ವೆಚ್ಚದ ಸೆಟ್: ಜು.19ರಿಂದ ಮದಗಜ ಶೂಟಿಂಗ್ ಶುರು
ತಮ್ಮ ಸಂಘದ ಸದಸ್ಯರ ಸಂಕಷ್ಟಕ್ಕೆ ಮಿಡಿದ ಹೊಂಬಾಳೆ ಫಿಲಮ್‌ಸ್ನ ವಿಜಯ್ ಕಿರಗಂದೂರು ಹಾಗೂ ಸಹಕಾರ ನೀಡಿದ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಸಾ.ರಾ. ಗೋವಿಂದು, ಕಾರ್ಯದರ್ಶಿ ರವೀಂದ್ರನಾಥ್ ಹಾಗೂ ನಿರ್ಮಾಣ ನಿರ್ವಾಹಕ ಚಂಪಕಧಾಮ ಬಾಬು ಅವರಿಗೆ ಸಹ ಕಲಾವಿದರ ಸಂಘ ಕೃತಜ್ಞತೆ ಸಲ್ಲಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.