ನಟ ವಿಜಯ್ ದೇವರಕೊಂಡ ಅವರಿಗೆ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ನಟ ಉತ್ತರಿಸಿದ್ದಾರೆ. ನಟ ವಿಜಯ್ ದೇವರಕೊಂಡ ಉತ್ತರ ಕೇಳಿ ಅವರ ಫ್ಯಾನ್ಸ್ ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸಂದರ್ಶಕರು ಕೇಳಿದ ಪ್ರಶ್ನೆಯೇನು?
ನಟ ವಿಜಯ್ ದೇವರಕೊಂಡ (Vijay DeverakondaVijay Deverakonda) ಅವರಿಗೆ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ನಟ ಉತ್ತರಿಸಿದ್ದಾರೆ. ನಟ ವಿಜಯ್ ದೇವರಕೊಂಡ ಉತ್ತರ ಕೇಳಿ ಅವರ ಫ್ಯಾನ್ಸ್ ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸಂದರ್ಶಕರು ಕೇಳಿದ ಪ್ರಶ್ನೆಯೇನು? ಅದಕ್ಕೆ ನಟ ವಿಜಯ್ ದೇವರಕೊಂಡ ಕೊಟ್ಟ ಉತ್ತರವೇನಿರಬಹುದು ಎಂಬ ಕುತೂಹಲ ಸಹಜವಾಗಿಯೇ ನಿಮ್ಮನ್ನು ಕಾಡುತ್ತಿರಬಹುದು. ಉತ್ತರಕ್ಕಾಗಿ ಮುಂದೆ ಓದಿ..
ಸಂದರ್ಶಕರು 'ನಿಮಗೆ ಸಮಂತಾ (Samantha) ಸಿಕ್ಕರೆ ಅವರ ಜತೆ ಏನು ಮಾಡುತ್ತೀರಾ?' ಎಂದು ಕೇಳಿದ್ದಾರೆ. ಅದಕ್ಕೆ ನಟ ವಿಜಯ್ 'ಸಮಂತಾ ಜತೆ ಮಾತುಕತೆ ನಡೆಸುತ್ತೇನೆ. ಕೆಲವೊಂದು ಫನ್ನಿ ಕ್ಷಣಗಳು ಸಹಜವಾಗಿಯೇ ನಮ್ಮಮಾತುಕತೆಯ ಮಧ್ಯೆ ಬಂದೇ ಬರುತ್ತವೆ. ಆಗ ಇಬ್ಬರೂ ಜೋರಾಗಿ ನಗುತ್ತೇವೆ. ಸಮಂತಾ ತುಂಬಾ ಜಾಲಿ ಪರ್ಸನ್. ಅವರ ಜತೆ ತುಂಬಾ ಮಾತನಾಡಲು ಇಷ್ಟಪಡುತ್ತೇನೆ' ಎಂದಿದ್ದಾರೆ ನಟ ವಿಜಯ್ ದೇವರಕೊಂಡ.
ಮಾತೃ ಹೃದಯದ ಡಾ ರಾಜ್‌ಕುಮಾರ್ ಹೂವಿನ ಹಾರ ಹಾಕಿ ನಿಂತಾಗ ಆ ಮನೆಯವ್ರು ಶಾಕ್ ಆಗ್ಬಿಟ್ರು!
ಮುಂದೆ ಸಂದರ್ಶಕರು ಸಹಜ ಎನ್ನುವಂತೆ ರಶ್ಮಿಕಾ (Rashmika Mandanna) ಎನ್ನಲು ನಟ ವಿಜಯ್ ದೇವರಕೊಂಡ 'ರಶ್ಮಿಕಾ ಜತೆ ಚಿಲ್ ಮಾಡಲು ಇಷ್ ಪಡುತ್ತೇನೆ. ಹಾಗೇ, ಯಾವುದಾದರೂ ಸ್ಪೋರ್ಟ್ಸ್ ಆಡಲು ಇಷ್ಟಪಡುತ್ತೇನೆ' ಎಂದಿದ್ದಾರೆ. ಯಾವ ಆಟ ಎಂದು ಮರುಪ್ರಶ್ನೆ ಮಾಡಿದ ಸಂದರ್ಶಕರಿಗೆ ನಟ 'ಈ ಮೊದಲು ಇಬ್ಬರೂ ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಆದರೆ ಈಗ ಅದನ್ನು ನಾನು ನಿಲ್ಲಿಸಿದ್ದೇವೆ. ಸೋ, ರಶ್ಮಿಕಾ ಜತೆ ವಾಲಿಬಾಲ್ ಆಡುತ್ತೇನೆ' ಎಂದಿದ್ದಾರೆ. ರಶ್ಮಿಕಾ ಮಂದಣ್ಣ ಜತೆ ವಿಜಯ್ ವಾಲಿಬಾಲ್ ಆಡುತ್ತಾರೆ ಎಂದು ತಿಳಿದ ಮೇಲೆ ಅವರಬ್ಬರ ಜೋಡಿಯ ಫ್ಯಾನ್ಸ್ ಸುಮ್ಮನಿರಲು ಹೇಗೆ ಸಾಧ್ಯ?
ನಟಿಯಾಗುವ ಫೇಸ್ ಅಲ್ಲ, ನಟನೆ ಬರುವುದಿಲ್ಲ ಅಂದಿದ್ರು, ಸಂಕಟಪಟ್ಟು ಅಳುತ್ತಿದ್ದೆ; ನಟಿ ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ-ರಶ್ಮಿಕಾ ಫ್ಯಾನ್ಸ್ ನಟನ ಉತ್ತರವನ್ನು ಕೇಳಿ ಅದಕ್ಕೆ ವಿಭಿನ್ನವಾಗಿ ಕಾಮೆಂಟ್ ಹಾಕುತ್ತಿದ್ದಾರೆ. ಕೆಲವರು 'ವಾಲಿಬಾಲ್ ಬೇಡ, ಮೊದಲಿನಂತೇ ನೀವಿಬ್ಬರೂ ಬ್ಯಾಡ್ಮಿಂಟನ್ ಆಡಿ' ಎಂದಿದ್ದಾರೆ. ಕೆಲವರು 'ವಾಲಿಬಾಲ್ ಓಕೆ, ಬಟ್ ತುಂಬಾ ಹೊತ್ತು ಆಡ್ಬೇಕು, ಅದು ಸೋಷಿಯಲ್ ಮೀಡಿಯಾಗಲ್ಲಿ ಲೈವ್ ಪ್ರಸಾರ ಆಗ್ಬೇಕು' ಎಂದಿದ್ದಾರೆ, ಕೆಲವರು 'ನೀವಿಬ್ಬರೂ ಏನು ಬೇಕಾದ್ರೂ ಆಟ ಆಡಿ, ಅದನ್ನು ನೋಡಲು ನಾವಿದ್ದೇವೆ' ಎಂದಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರಿಗೆ ಸೋಷಿಯಲ್ ಮೀಡಿಯಾಗಳಲ್ಲೂ ಬಹಳಷ್ಟು ಫ್ಯಾನ್ಸ್ ಇದ್ದಾರೆ.
ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದು 'ಅಂಕಲ್.. ಅಂಕಲ್..' ಕೂಗಿದ್ದ ನಟಿ ಮಂಜುಳಾ; ಡಾ ರಾಜ್‌ಕುಮಾರ್ ಮಾಡಿದ್ದೇನು?
ಅಂದಹಾಗೆ, ನಟ ವಿಜಯ್ ದೇವರಕೊಂಡ ಹಾಗು ಮೃಣಾಲ್ ಠಾಗೂರ್ ಅಭಿನಯದ 'ದಿ ಫ್ಯಾಮಿಲಿ ಸ್ಟಾರ್' ಸಿನಿಮಾ ಅಂದುಕೊಂಡಷ್ಟು ಹಿಟ್ ಆಗಲಿಲ್ಲ. ಈ ಸಿನಿಮಾವನ್ನು ನೋಡಿದವರು ಮೆಚ್ಚಿಕೊಂಡರೂ ನೋಡದವರೇ ಹೆಚ್ಚು. ಆದ್ದರಿಂದ ಸದ್ಯ ವಿಜಯ್ ದೇವರಕೊಂಡ ಅವರಿಗೆ ಒಂದು ಸಿನಿಮಾ ಸೂಪರ್ ಹಿಟ್ ಆಗಬೇಕಿದೆ, ಆ ಮೂಲಕ ಒಂದು ಭಾರೀ ಸಕ್ಸಸ್ ಸಿಗಬೇಕಿದೆ. ಇಲ್ಲವೆಂದರೆ, ವೃತ್ತಿಜೀವನದ ಗ್ರಾಫ್ ಕೆಳಗಿಳಿದು ಅವರು ಪಾತಾಳವೋ, ಪ್ರಪಾತವೋ ತಲುಪುವುದು ಗ್ಯಾರಂಟಿ ಎನ್ನಬಹುದು. ಆದರೆ, ರಶ್ಮಿಕಾ ಸದ್ಯ ಬಹುಬೇಡಿಕೆ ನಟಿಯಾಗಿಯೇ ಇದ್ದಾರೆ.
ಸಮಂತಾ ಹೇಳಿದ್ರು 'ಐ ಲವ್ ಹಿಮ್, ಲವ್ ಹಿಮ್...', ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೀಗ್ಯಾಕೆ ಹೇಳ್ಬಿಟ್ರು?