ಶಂಕರ್​ನಾಗ್​ ನಿಗೂಢ ಸಾವಿನ ರಹಸ್ಯ ತೆರೆದಿಟ್ಟ ಈ ವಿಡಿಯೋ: ಅಂದು ಆಗಿದ್ದೇನು?

Published : May 05, 2025, 03:59 PM ISTUpdated : May 05, 2025, 04:41 PM IST
ಶಂಕರ್​ನಾಗ್​ ನಿಗೂಢ ಸಾವಿನ ರಹಸ್ಯ ತೆರೆದಿಟ್ಟ ಈ ವಿಡಿಯೋ: ಅಂದು ಆಗಿದ್ದೇನು?

ಸಾರಾಂಶ

1990ರಲ್ಲಿ ನಟ ಶಂಕರ್​ನಾಗ್​ ಅಪಘಾತದಲ್ಲಿ ಮೃತಪಟ್ಟರು. ಚಿತ್ರ ಮುಹೂರ್ತ ರದ್ದಾದರೂ ಶಂಕರ್​ನಾಗ್​ರಿಗೆ ತಿಳಿದಿರಲಿಲ್ಲ. ದಾವಣಗೆರೆ ಬಳಿ ಕೆಟ್ಟುನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಚಾಲಕ ಲಿಂಗಣ್ಣ ಕೂಡ ಮೃತಪಟ್ಟರು. ಪತ್ನಿ, ಮಗಳು ಬದುಕುಳಿದರು. ಲಾರಿ ಮಾಲೀಕರು ಯಾರೆಂಬುದು ಇನ್ನೂ ನಿಗೂಢ.

35ನೇ ಹರೆಯದಲ್ಲಿಯೇ ಅಪಘಾತದಲ್ಲಿ ಸಾವನ್ನಪ್ಪಿದ ನಟ ಶಂಕರ್​ನಾಗ್​ ಅವರ ಸಾವು ಇಂದಿಗೂ ನಿಗೂಢವೇ ಆಗಿದೆ. ಕೆಲವು ಸೆಲೆಬ್ರಿಟಿಗಳ ಸಾವೇ ಹಾಗೆ. ಅದರ ಹಿಂದಿನ ರಹಸ್ಯ ಕೊನೆಯವರೆಗೂ ರಹಸ್ಯವಾಗಿಯೇ ಉಳಿದುಬಿಡುತ್ತದೆ. ಬಾಲಿವುಡ್​ ತಾರೆಯರಾದ ಶ್ರೀದೇವಿ, ಸುಶಾಂತ್​ ಸಿಂಗ್​ ರಜಪೂತ್​, ದಿವ್ಯಾ ಭಾರತಿ... ಹೀಗೆ ಕೆಲ ತಾರೆಯರ ಸಾವು ಅಲ್ಲಿಗೇ ಗಪ್​ಚುಪ್​ ಆಗಿಬಿಟ್ಟಿದೆ. ಇದರ ರಹಸ್ಯ ಅವರ ಜೊತೆಗೇ ಮಣ್ಣಾಗಿಬಿಟ್ಟಿದೆ. 1990ರ ಸೆಪ್ಟೆಂಬರ್ 30ರ ಆ ಕರಾಳ ರಾತ್ರಿ ಮಾತ್ರ ಸ್ಯಾಂಡಲ್​ವುಡ್​ಗೆ ಬರಸಿಡಿಲು ಬಡಿದ ದಿನ. ಶಂಕರ್​ನಾಗ್​ ಅವರ ಸಾವು ಇಡೀ ಇಂಡಸ್ಟ್ರಿಯನ್ನು ಶಾಕ್​ಗೆ ನೂಕಿದ್ದ ದಿನವದು. 

ಇವರ ಸಾವು ಹೇಗಾಯಿತು ಎನ್ನುವ ಬಗ್ಗೆ ಆ್ಯನಿಮೇಷನ್​ ಮಾಡಿರುವ ವಿಡಿಯೋ ಒಂದು ಈಗ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅವರ ನಿಧನದ 35 ವರ್ಷಗಳ ಬಳಿಕ ಈ ವಿಡಿಯೋ ಆ್ಯನಿಮೇಷನ್​ ಮಾಡಿ ತೋರಿಸಲಾಗಿದ್ದು, ಅದನ್ನು ಕನ್ನಡ ಡೈಲಿ ಫ್ಯಾಕ್ಟ್ಸ್​ ಎನ್ನುವ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಲಾಗಿದೆ. ಅಷ್ಟಕ್ಕೂ ಅಂದು ನಡೆದದ್ದು ಏನೆಂದರೆ, ಶಂಕರ್‌ ನಾಗ್ ಅವರು ಧಾರವಾಡದಲ್ಲಿ ಇತ್ತೆಂದು ಅಂದುಕೊಂಡಿದ್ದ 'ಜೋಕುಮಾರಸ್ವಾಮಿ' ಸಿನಿಮಾ (Jokumaraswamy) ಮುಹೂರ್ತಕ್ಕೆ ಹೊರಟಿದ್ದರು. ಅಲ್ಲಿಂದಲೇ ಈ ಸಾವಿನ ಬಗ್ಗೆ ಸಂಶಯ ಶುರುವಾದದ್ದು. ಏಕೆಂದರೆ,  ಆ ಚಿತ್ರದ ಮುಹೂರ್ತ ಅಂದು ಕಾರಣಾಂತರಗಳಿಂದ ಕ್ಯಾನ್ಸಲ್ ಆಗಿತ್ತು. ಆದರೆ, ಇಡೀ ಟೀಮ್‌ಗೆ ಆ ಬಗ್ಗೆ ಗೊತ್ತಿದ್ದರೂ ಶಂಕರ್‌ ನಾಗ್ ಅವರಿಗೆ ಆ ಸುದ್ದಿ ತಲುಪಿರಲಿಲ್ಲ. ನಿರ್ದೇಶಕ ಹಾಗೂ ಶಂಕರ್‌ ನಾಗ್ ಅವರ ಗುರುಗಳ ಸಮಾನರಾದ ಗಿರೀಶ್ ಕಾರ್ನಾಡ್ ಅವರು ಮುಹೂರ್ತ ಕ್ಯಾನ್ಸಲ್ ಆಗಿರುವ ಸಂಗತಿಯನ್ನು ಶಂಕರ್‌ ನಾಗ್ ಅವರಿಗೆ ತಲುಪಿಸಲು ಹರಸಾಹಸ ಪಟ್ಟರೂ ಅದು ಸಾಧ್ಯವೇ ಆಗಿರಲಿಲ್ಲ!

​'ಬಂಟಿ ನಿನ್ನ ಸೋಪ್​ ಸ್ಲೋನಾ?' ಎಂದ ಮಾದಕ ನಟಿ ವಿರಾಟ್​ ಕೊಹ್ಲಿ ನಿದ್ದೆಗೆಡಿಸಿದ್ಯಾಕೆ?

ಬೆಂಗಳೂರಿನಿಂದ ಜೋಕುಮರಸ್ವಾಮಿ ಮುಹೂರ್ತಕ್ಕೆ ಹೊರಟಿದ್ದ ಶಂಕರ್‌ ನಾಗ್ ಅವರ ಜೊತೆ ಅವರ ಪತ್ನಿ ಅರುಂಧತಿ ನಾಗ್, ಮಗಳು ಕಾವ್ಯಾ ಹಾಗೂ ಡ್ರೈವರ್ ಲಿಂಗಣ್ಣ ಇದ್ದರು. ಅಂದು ಕಾರು ಡ್ರೈವಿಂಗ್ ಮಾಡುತ್ತಿದ್ದುದು ಡ್ರೈವರ್ ಲಿಂಗಣ್ಣ ಎಂದು ಅಪಘಾತದ ಬಳಿಕ ಸ್ಥಳದಲ್ಲಿ ನೋಡಿರುವ ಪ್ರತ್ಯಕ್ಷದರ್ಶಿಗಳೇ ಹೇಳಿದ್ದಾರೆ. ಕೆಲವರು ಮಾತ್ರ ಶಂಕರ್​ನಾಗ್​ ಕಾರು ಚಲಾಯಿಸುತ್ತಿದ್ದರು ಎನ್ನುತ್ತಿದ್ದಾರೆ. ದಾವಣಗೆರೆ ಸಿಟಿಯಿಂದ ಸ್ವಲ್ಪ ದೂರದಲ್ಲಿರುವ ಆನಗೋಡು ಊರಿನ ಸಮೀಪ ಬಂದಾಗ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಶಂಕರ್‌ ನಾಗ್ ಕುಟುಂಬವಿದ್ದ ಕಾರು ಹೋಗಿ ಗುದ್ದಿದೆ. ನಟ ಶಂಕರ್‌ ನಾಗ್ ಸ್ಥಳದಲ್ಲೇ ನಿಧನರಾಗಿದ್ದಾರೆ. 

ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಲಿಂಗಣ್ಣ  ಅವರು ಮಾರ್ಗಮಧ್ಯೆ ಅಸು ನೀಗಿದ್ದಾರೆ. ಆದರೆ, ಶಂಕರ್‌ ಪತ್ನಿ ಅರುಂಧತಿ ನಾಗ್ ಹಾಗೂ ಮಗಳು ಕಾವ್ಯಾ  ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ, ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ. ಇಡೀ ಅಪಘಾತವನ್ನು ಈ ಆ್ಯನಿಮೇಷನ್​ನಲ್ಲಿ ಕಟ್ಟಿಕೊಡಲಾಗಿದೆ. ಅಷ್ಟಕ್ಕೂ ಈ ಸಾವಿನ ಬಗ್ಗೆ ಸಂಶಯ ಬರಲು ಕಾರಣ ಏನೆಂದರೆ,  ಅಲ್ಲಿ ಆನಗೋಡು ಮುಖ್ಯ ರಸ್ತೆಯಲ್ಲಿ ಅಪಘಾತ ನಡೆದ  ಮೂರು ದಿನಗಳಿಂದ ಲಾರಿಯೊಂದು ಕೆಟ್ಟು ನಿಂತಿತ್ತು. ಆದರೆ, ಆ ಲಾರಿಯನ್ನು ಸ್ಥಳಾಂತರಿಸಲು ಅಥವಾ ರಿಪೇರಿ ಮಾಡಲು ಯಾಕೆ ಯಾರೂ ಬರಲಿಲ್ಲ? ಆ ಲಾರಿ ಅಲ್ಲಿ ನಿಂತಿದ್ದ ಕಾರಣಕ್ಕೆ ಡ್ರೈವರ್ ಲಿಂಗಣ್ಣ ಅವರಿಗೆ ಎದುರಿನಿಂದ ಬರುತ್ತಿದ್ದ ಲಾರಿ ಕಾಣದೇ ಕಾರು ಪಾಸ್ ಆಗಲು ಹೋಗಿ ಅಪಘಾತ ಸಂಭವಿಸಿದೆ. ಆದರೆ, ಅಚ್ಚರಿ ಎಂಬಂತೆ ಆ ಎರಡೂ ಲಾರಿ ಓನರ್ ಯಾರು ಎಂಬುದು ತನಿಖೆ ಬಳಿಕವೂ ಜನಸಾಮಾನ್ಯರ ಪಾಲಿಗೆ ನಿಗೂಢವಾಗಿಯೇ ಉಳಿದಿದೆ. 

ಇನ್ನು ಕೆಟ್ಟು ನಿಂತಿದ್ದ ಆ ಲಾರಿ ಆ ಬಳಿಕ ಮಾಯವಾಗಿದ್ದು ಹೇಗೆ? ಆ ಲಾರಿ ಯಾರದ್ದು? ಆ ಬಗ್ಗೆ ಸೂಕ್ತ ತನಿಖೆ ಆಗಲಿಲ್ಲವೇ ಅಥವಾ ಅದರ ಮಾಲೀಕರ ಬಗ್ಗೆ ಎಲ್ಲೂ ಸರಿಯಾದ ಮಾಹಿತಿ ಯಾಕೆ ಸಿಗಲಿಲ್ಲ? ಜೊತೆಗೆ, ಎದುರುಗಡೆಯಿಂದ ಬಂದ ಲಾರಿ ಯಾರದ್ದು? ಅವರಿಗೆ ದೂರದಿಂದಲೇ ಎದುರಿನಿಂದ ಬರುತ್ತಿದ್ದ ಕಾರು ಏಕೆ ಕಾಣಲಿಲ್ಲ? ಅಥವಾ, ಈ ಕಡೆಯಿಂದ ಹೋಗುತ್ತಿದ್ದ ಕಾರಿಗೆ ಯಾಕೆ ಆ ಕಡೆಯಿಂದ ಬರುತ್ತಿದ್ದ ಲಾರಿ ಏಕೆ ಕಾಣಲಿಲ್ಲ? ಎರಡೂ ವಾಹನಗಳು ಅಷ್ಟೊಂದು ವೇಗದಿಂದ ಚಲಿಸುತ್ತಿದ್ದವೇ? ಅಪಘಾತದಲ್ಲಿ ಸತ್ತಿದ್ದು ನಟ ಶಂಕರ್‌ ನಾಗ್ ಎಂದು ಅಲ್ಲಿ ಬಂದ ಸ್ಥಳೀಯರಿಗೆ ಕೂಗಿ ಹೇಳಿದ್ದು ಅವರ ಪತ್ನಿ ಅರುಂಧತಿ ನಾಗ್ ಎನ್ನಲಾಗಿದೆ. ಬೆಳಗ್ಗಿನ ಜಾವ ಐದು ಗಂಟೆ ಸುಮಾರಿಗೆ ನಡೆದಿರುವ ಆ ಅಪಘಾತದ ವೇಳೆ ಡ್ರೈವರ್ ಬಿಟ್ಟು ಕಾರಿನಲ್ಲಿ ಇದ್ದವರೆಲ್ಲರೂ ನಿದ್ರಿಸುತ್ತಿದ್ದರೇ? ಅರುಂಧತಿ ಅವರಿಗೆ ಕಾರು ಎಕ್ಸಿಡೆಂಟ್ ಆದಾಗಲೇ ಎಚ್ಚರವಾಗಿದ್ದು, ಅಷ್ಟರಲ್ಲಿ ಶಂಕರ್‌ ನಾಗ ತೀರಿಕೊಂಡಿದ್ದರು ಎನ್ನಲಾಗಿದೆ. ಹಾಗಿದ್ದರೆ ಅಂದು ನಿಜವಾಗಿಯೂ ಏನಾಗಿತ್ತು ಎನ್ನುವುದೆಲ್ಲವೂ ನಿಗೂಢ, ನಿಗೂಢ! 

ಸ್ವಮೂತ್ರ ಅಮೃತಕ್ಕೆ ಸಮ... ಎನ್ನುತ್ತಲೇ ಕುಡಿಯುವ ಬಗೆ, ಪ್ರಯೋಜನ ತಿಳಿಸಿದ ನಟಿ ಅನು ಅಗರ್​ವಾಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ