Vedha Twitter Review; ಶಿವಣ್ಣ ನಟನೆಯ 'ವೇದ' ಸಿನಿಮಾ ನೋಡಿ ಅಭಿಮಾನಿಗಳು ಹೇಳಿದ್ದೇನು?

Published : Dec 23, 2022, 11:48 AM IST
Vedha Twitter Review; ಶಿವಣ್ಣ ನಟನೆಯ 'ವೇದ' ಸಿನಿಮಾ ನೋಡಿ ಅಭಿಮಾನಿಗಳು ಹೇಳಿದ್ದೇನು?

ಸಾರಾಂಶ

ಹ್ಯಾಟ್ರಿಕ್ ಹೀರೋ ಶಿವರಾಜ್ ​ಕುಮಾರ್  ನಟನೆಯ ವೇದ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ನಿರ್ದೇಶಕ ಹರ್ಷ ಸಾರಥ್ಯದಲ್ಲಿ ಬಂದ ವೇದ ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ​ಕುಮಾರ್  ನಟನೆಯ ವೇದ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ನಿರ್ದೇಶಕ ಹರ್ಷ ಸಾರಥ್ಯದಲ್ಲಿ ಬಂದ ವೇದ ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ನಿರ್ದೇಶಕ ಎ.ಹರ್ಷ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ಬಂದ 4ನೇ ಸಿನಿಮಾ ಇದಾಗಿದೆ.  ಡಿಸೆಂಬರ್ 23 ರಿಲೀಸ್ ಆಗಿರುವ ವೇದ ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅಬ್ಬರಿಸಿದೆ. ಮೊದಲ ದಿನದ ಮೊದಲ ಶೋ ನೋಡಿದ ಅಭಿಮಾನಿಗಳು ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗನ್ನು ಆಡಿದ್ದಾರೆ. ಫಸ್ಟ್ ಶೋ ನೋಡಿ  ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆ ಮಾಡಿದ್ದಾರೆ. 

ಈ ಸಿನಿಮಾದಲ್ಲಿ ಶಿವಣ್ಣ ಜೊತೆಗೆ ನಾಯಕಿಯಾಗಿ ಗಾನವಿ ನಟಿಸಿದ್ದಾರೆ. ಇನ್ನೂ ಶ್ವೇತಾ ಚಂಗಪ್ಪ ಮತ್ತು ಅದಿತಿ ಸಾಗರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ನೋಡಿ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. 

ಮೊದಲ ಅರ್ಥ ಸ್ವಲ್ಪ ನಿಧಾನವಾಗಿದೆ. ಇಂಟರ್‌ವಲ್ ಬೆಂಕಿ. ಎರಡನೇ ಭಾಗ ಸಖತ್ ಕ್ರೂರವಾಗಿದೆ. ಅನಗತ್ಯ ಹಾಡುಗಳು ಮತ್ತು ಕಾಮಿಡಿ ಕಥೆಯ ಗತಿಯನ್ನೇ ಬದಲಾಯಿಸಿದೆ. ಹಳೆಯ ವಿಷಯಕ್ಕೆ ಹೊಸ ಟಚ್ ನೀಡಲಾಗಿದೆ' ಎಂದು ಹೇಳಿದ್ದಾರೆ.

'ಎ ಹರ್ಷ ಅವರು ಸಮಾಜಕ್ಕೆ ಬಲವಾದ ಸಂದೇಶವನ್ನು ಬೃಹತ್ ಆಕ್ಷನ್ ರೀತಿಯಲ್ಲಿ ರವಾನಿಸಿದ್ದಾರೆ. ಇದು ಸಂಪೂರ್ಣ ಸಿನಿಮಾ ಅದ್ಭುತವಾಗಿ ಕೆಲಸ ಮಾಡಿದೆ. ಅದ್ಭುತವಾಗಿ ನಟಿಸಿದ್ದಾರೆ' ಎಂದು ಹೇಳಿದ್ದಾರೆ.

 
ಮತ್ತೋರ್ವ ಅಭಿಮಾನಿ ಸಿನಿಮಾ ನೋಡಿ, 'ಬ್ಲಾಕ್ ಬಸ್ಟರ್ ಸಿನಿಮಾ. ಶಿವಣ್ಣ ನಟನೆ, ಮಹಿಳಾ ಶಕ್ತಿ, ಸಂಗೀತ, ಬಿಜಿಎಮ್, ಕ್ಲೈಮ್ಯಾಕ್ಸ್ ಬೆಂಕಿ. ಸ್ವಲ್ಪ ನಿಧಾನವಾಗಿದೆ' ಎಂದು ಹೇಳಿದ್ದಾರೆ.

 

ಶಿವರಾಜ್ ಕುಮಾರ್ ಬೈರಾಗಿ ಸಿನಿಮಾ ಬಳಿಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಫಸ್ಟ್ ಡೇ ಫಸ್ಟ್ ಶೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಶಿವಣ್ಣನನ್ನು ಮತ್ತೊಮ್ಮೆ ತೆರೆ ಮೇಲೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.    


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?