'ತಾವೊಬ್ಬರು ನಟಿ ಎಂಬುದನ್ನೇ ಹರಿಪ್ರಿಯಾ ಮರೆತಿದ್ದಾರೆ' ಎಂದ ಪತಿ ವಸಿಷ್ಠ ಸಿಂಹ ಮಾತೀಗ ವೈರಲ್!

Published : Jun 27, 2025, 06:51 PM ISTUpdated : Jun 27, 2025, 07:40 PM IST
Haripriya Vasishta Simha

ಸಾರಾಂಶ

ಇತ್ತೀಚೆಗೆ ಸದ್ದು-ಸುದ್ದಿ ಮಾಡುತ್ತಿರುವ ಕನ್ನಡದ ಟ್ರೆಂಡಿಂಗ್ ಜೋಡಿಗಳಲ್ಲಿ ಈ ಜೋಡಿಯೂ ಟಾಪ್‌ನಲ್ಲಿದೆ. ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿಗೆ ಮುದ್ದಾದ ಗಂಡು ಮಗುವೂ ಜೊತೆಯಾಗಿದೆ. ಈ ಅನುರೂಪ ಜೋಡಿಗೆ..

ನಟ ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ (Haripriya) ಜೋಡಿ ಸ್ಯಾಂಡಲ್‌ವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದು. ಇತ್ತೀಚೆಗೆ ಸದ್ದು-ಸುದ್ದಿ ಮಾಡುತ್ತಿರುವ ಕನ್ನಡದ ಟ್ರೆಂಡಿಂಗ್ ಜೋಡಿಗಳಲ್ಲಿ ಈ ಜೋಡಿಯೂ ಟಾಪ್‌ನಲ್ಲಿದೆ. ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿಗೆ ಮುದ್ದಾದ ಗಂಡು ಮಗುವೂ ಜೊತೆಯಾಗಿದೆ. 

ಈ ಅನುರೂಪ ಜೋಡಿಗೆ ಯಾರ ದೃಷ್ಟಿಯೂ ಆಗದಿರಲಿ, ನೂರಾರು ವರ್ಷ ಈ ಜೋಡಿ ಹಾಗು ಸಂಸಾರ ಸುಖವಾಗಿರಲಿ ಎಂದು ಎಲ್ಲರೂ ಹರಿಸಿ-ಹಾರೈಸುತ್ತಿದ್ದಾರೆ. ಈ ಹೊತ್ತಿನಲ್ಲಿ ನಟ ವಸಿಷ್ಠ ಸಿಂಹ ತಮ್ಮ ಪತ್ನಿ, ನಟಿ ಹರಿಪ್ರಿಯಾ ಬಗ್ಗೆ ಹೇಳಿರುವ ಮಾತುಗಳು ಸಖತ್ ವೈರಲ್ ಆಗುತ್ತಿವೆ. ಹಾಗಿದ್ದರೆ ಅವರೇನು ಹೇಳಿದ್ದಾರೆ?

ಹೌದು, ಇತ್ತೀಚೆಗೆ ತಮ್ಮ ನಟಿ ಪತ್ನಿ ಬಗ್ಗೆ ನಟ ಪತಿ ವಸಿಷ್ಠ ಸಿಂಹ ಅವರು 'ಹರಿಪ್ರಿಯಾ ಅವರು ತಾವೊಬ್ಬರು ನಟಿ ಎಂಬುದನ್ನೇ ಮರೆಸುವಷ್ಟು ಪಕ್ಕಾ ಫ್ಯಾಮಿಲಿ ವುಮೆನ್ ಆಗಿದ್ದಾರೆ. ಆಹಾರಪ್ರಿಯೆ ಆಗಿರುವ ಹರಿಪ್ರಿಯಾ ಅವರು ಮಾವನ ಜೊತೆಗೂಡಿ ದಿನಾಲೂ ನಮ್ಮ ಫ್ಯಾಮಿಲಿಗೆ ಆರೋಗ್ಯಕರ ಹಾಗೂ ರುಚಿಕಟ್ಟಾದ ಊಟ-ತಿಂಡಿ ತಯಾರಿಸುವುದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. 

ನಮ್ಮ ಇಡೀ ಕುಟುಂಬದ ನೆಮ್ಮದಿ ಹಾಗೂ ಆರೋಗ್ಯವನ್ನು ಬಿಟ್ಟು ಬೇರೆಲ್ಲವನ್ನೂ ಮರೆತಿದ್ದಾರೆ ಎಂಬಂತೆ ತಮ್ಮ ಲೈಫ್‌ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ನಮ್ಮ ಕುಟುಂಬಕ್ಕೆ ಏನು ಬೇಕು, ಏನು ಬೇಡ ಎಂಬುದಕ್ಕಷ್ಟೇ ಮೊದಲ ಆದ್ಯತೆ ಕೊಡುತ್ತಾರೆ.

ಒಬ್ಬ ಸ್ಟಾರ್ ನಟಿ ಇಷ್ಟು ಬೇಗ ಈ ಮಟ್ಟಿಗೆ ಫ್ಯಾಮಿಲಿ ಓರಿಯಂಟೆಡ್ ಆಗಿ ತೊಡಗಿಸಿಕೊಂಡಿರುವುದು ನನಗೇ ಅಚ್ಚರಿ ಮೂಡಿಸುತ್ತಿದೆ. ಮಗುವಿಗೆ ತಾಯಿಯಾಗಿ, ನನಗೆ ಪತ್ನಿಯಾಗಿ ಮನೆಗೆ ಮಹಾಲಕ್ಷ್ಮೀಯಾಗಿ, ನನ್ನ ಅಪ್ಪನಿಗೆ ಮುದ್ದಿನ ಹಾಗೂ ಒಳ್ಖೆಯ ಸೊಸೆಯಾಗಿ ಹರಿಪ್ರಿಯಾ ನಮ್ಮ ಮನ-ಮನೆ ತುಂಬಿಕೊಂಡಿದ್ದಾರೆ. ಈ ಮಟ್ಟಿಗಿನ ಟ್ರಾನ್ಸ್‌ಫಾರ್ಮೇಶನ್ನನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ನಾನೂ ಸೇರಿದಂತೆ ನನ್ನ ಇಡೀ ಕುಟುಂಬ ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ, ಖುಷಿ ಪಡುತ್ತೇವೆ' ಎಂದಿದ್ದಾರೆ ಸ್ಯಾಂಡಲ್‌ವುಡ್ ತಾರೆ ಹಾಗೂ ಹರಿಪ್ರಿಯಾ ಪತಿ ವಸಿಷ್ಠ ಸಿಂಹ.

ಅಂದಹಾಗೆ, ನಟಿ ಹರಿಪ್ರಿಯಾ ಅವರು ಮದುವೆ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಮಗುವಾದ ಬಳಿಕವಂತೂ ತಾಯ್ತನವನ್ನು ಮನದುಂಬಿ ಅನುಭವಿಸುತ್ತ ಇದ್ದಾರೆ. ಅವರ ಪತಿ ವಸಿಷ್ಠ ಸಿಂಹ ಅವರೇ ಹೇಳುವಂತೆ, ಈಗ ಮನೆ, ಮನೆಯವರೆಲ್ಲರ 'ಗುಡ್ ಲೈಫ್' ಅವರಿಗೆ ಮೊದಲ ಆದ್ಯತೆಯಾಗಿ ಪರಿಣಮಿಸಿದೆ. 

ಇನ್ನು, ನಟ ವಸಿಷ್ಠ ಸಿಂಹ ಅವರು ಕನ್ನಡ, ತೆಲುಗು, ತಮಿಳು ಸಿನಿಮಾಗಳೂ ಸೇರಿದಂತೆ 'ಪ್ಯಾನ್ ಇಂಡಿಯಾ' ಮಟ್ಟದಲ್ಲಿ ಸ್ಟಾರ್ ನಟರಾಗಿ ಹಂತಹಂತವಾಗಿ ಮೇಲೇರುತ್ತಿದ್ದಾರೆ. ಇದೀಗ, ನಟ ವಸಿಷ್ಠ ಸಿಂಹ ಅವರ ಮಾತಿನ ಮೂಲಕ ಅವರಿಗೆ ತಾರಾಪತ್ನಿ ಹರಿಪ್ರಿಯಾರ ಬೆಂಬಲ ಕೂಡ ತುಂಬಾ ಚೆನ್ನಾಗಿದೆ ಎಂಬ ಸುದ್ದಿ ಸೌಂಡ್ ಮಾಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ