
ಡಾ.ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶಂಕರ್‌ನಾಗ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳ ಸಂಘದ ಮುಖಂಡರಾದ ಸಾ ರಾ ಗೋವಿಂದ್, ವೀರಕಪುತ್ರ ಶ್ರೀನಿವಾಸ್, ಮಾಸ್ಟರ್ ಮಂಜುನಾಥ್, ಬೇಲೂರು ಸೋಮಶೇಖರ್ ಹಾಗೂ ರುದ್ರೇಗೌಡ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಪ್ರಕಾಶ್ ರೈ ಧ್ವನಿಯಲ್ಲಿ ಚಿತ್ರದ ಟ್ರೇಲರ್ ಅನಾವರಣಗೊಂಡಿರುವುದು ಮತ್ತೊಂದು ವಿಶೇಷ. ಗಿರೀಶ್ ನಿರ್ದೇಶನದ ನಾಲ್ಕನೇ ಚಿತ್ರ ಇದು.
‘ಚಿತ್ರರಂಗವನ್ನು ಪ್ರತಿನಿಧಿಸುವ ಕತೆಯನ್ನು ಒಳಗೊಂಡಿರುವ ಸಿನಿಮಾ ಇದು. ಚಿತ್ರರಂಗದ ಕತೆಯನ್ನು ಹೇಳಿದ್ದೇನೆ’ ಎಂದು ‘ಒಂದ್ ಕಥೆ ಹೇಳ್ಲಾ’ ಖ್ಯಾತಿಯ ನಿರ್ದೇಶಕ ಗಿರೀಶ್ ಹೇಳಿಕೊಂಡರು. ಊರ್ಮಿಳಾ ಕಿರಣ್ ನಿರ್ಮಾಣದ ಈ ಚಿತ್ರಕ್ಕೆ ಯೋಗೇಶ್ ಶ್ರೀನಿವಾಸ್, ಮಧು ಕುಮಾರ್, ಸುನಿಲ್ ಸಿಬಿ, ವರುಣ್ ಜೆ ಹಾಗೂ ಭಾಸ್ಕರ್ ಸಿ ಎಸ್ ಸಹ ನಿರ್ಮಾಪಕರು. ಗಿರೀಶ್ ಜಿ, ಜೀವಿತಾ ವಸಿಷ್ಠ, ರೋಹಿತ್ ಶ್ರೀನಾಥ್, ಅನಿರುದ್ಧ ಶಾಸ್ತ್ರಿ, ಬಿ ಎಂ ವೆಂಕಟೇಶ್, ರೇಷ್ಮಾ ಲಿಂಗರಾಜಪ್ಪ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಫಸ್ಟ್ ಡೇ ಫಸ್ಟ್ ಶೋ ಸಿನಿಮಾದ ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಗಿರೀಶ್ ಒಂದ್ ಕಥೆ ಹೇಳ್ಲಾ, ವಾವ್, ಶಾಲಿವಾಹನ ಶಕೆ ಬಳಿಕ ಫಸ್ಟ್ ಡೇ ಫಸ್ಟ್ ಶೋ ನನ್ನ ನಾಲ್ಕನೇ ಸಿನಿಮಾ. ಪ್ರತಿ ಸಿನಿಮಾ ಕೂಡ ಬೇರೆ ರೀತಿ ಅಭಿರುಚಿ ಹೊಂದಿವೆ. ಫಸ್ಟ್ ಡೇ ಫಸ್ಟ್ ಶೋ ಒಂದು ಕಥೆ ಎನ್ನುವುದಕ್ಕಿಂತ ಇಡೀ ಚಿತ್ರರಂಗವನ್ನು ಪ್ರತಿನಿಧಿಸುವ ಸೆಲೆಬ್ರೆಷನ್. ಕನ್ನಡ ಚಿತ್ರರಂಗದ ಬಗ್ಗೆ ಪಾಸಿಟಿವ್ ಭಾವನೆ ಮೂಡಲಿ ಎಂದು ಮಾಡಿರುವ ಸಿನಿಮಾ ಇದು ಎಂದು ಅವರು ಹೇಳಿದರು.
ಇದೊಂದು ಚಿತ್ರರಂಗವನ್ನು ಹಾಗೂ ಎಲ್ಲಾ ನಟರ ಅಭಿಮಾನಿಗಳನ್ನ ಒಗ್ಗೂಡಿಸಿ ಚಿತ್ರಮಂದಿರಗಳ ಪರಂಪರೆಯನ್ನೂ ಚಿತ್ರರಸಿಕರಿಗೆ ತಲುಪಿಸುವ ಈ ಒಂದು ವಿಬಿನ್ನ ಪ್ರಯತ್ನಕ್ಕೆ ಕರ್ನಾಟಕ ವಾಣಿಜ್ಯಮಂಡಳಿ ಪದಾಧಿಕಾರಿಗಳು ಮತ್ತು ಭಾಮಾ ಗಿರೀಶ್ ರವರ ಬೆಂಬಲ ಕೊಟ್ಟಿದ್ದಾರೆ. ನಿರ್ಮಾಪಕ ಕಿರಣ್ ಮಾತನಾಡಿ, 'ನಾನು ಮತ್ತು ಗಿರೀಶ್ ಸುಮಾರು 13 ವರ್ಷಗಳ ಸ್ನೇಹಿತರು. ಈ ಹಿಂದೆ ನಾವಿಬ್ಬರು ಜೊತೆಯಾಗಿ 'ಒಂದು ಕಥೆ ಹೇಳ್ತಾ' ಚಿತ್ರವನ್ನು ಮಾಡಿದ್ದವು. ಇದು ನಮ್ಮ ಎರಡನೇ ಚಿತ್ರ. ಇದು ಚಿತ್ರರಂಗದ ಕುರಿತಾದ ಚಿತ್ರ. ಎಲ್ಲಾ ಅಭಿಮಾನಿಗಳಿಗೂ ಹಬ್ಬವಾಗಲಿದೆ. ಚಿತ್ರಕ್ಕೆ ಪ್ರಕಾಶ್ ರೈ ತಮ್ಮ ಧ್ವನಿ ನೀಡಿದ್ದಾರೆ' ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.