ಸಾಧು ಕೋಕಿಲ ಬಗ್ಗೆ ಉಪೇಂದ್ರ ಹೇಳಿದ್ದೇನು? ರಕ್ತ ಕಣ್ಣೀರು ಟೈಮಲ್ಲಿ ಏನ್ ಮಾಡಿದ್ರಂತೆ..!?

By Shriram Bhat  |  First Published Sep 14, 2024, 7:10 PM IST

ಉಪೇಂದ್ರ ಹಾಗು ಸಾಧು ಕೋಕಿಲ ಅವರ ಕಾಂಬಿನೇ‍ನ್ ತುಂಬಾ ಅದ್ಭುತವಾಗಿ ಕೆಲಸ ಮಾಡಿತ್ತು. ಆದರೆ, ಆ ಬಳಿಕ ಅವರಿಬ್ಬರೂ ಯಾವುದೇ ಚಿತ್ರದಲ್ಲಿ ಕೆಲಸ ಮಾಡಿಲ್ಲ. ಸದ್ಯ ಸಾಧುಕೋಕಿಲ ಅವರು ಸಂಗೀತ ನಿರ್ದೇಶನ, ನಿರ್ದೇಶನ ಹಾಗೂ ನಟನೆಯಲ್ಲಿ ಬ್ಯುಸಿ..


ಕನ್ನಡದ ರಿಯಲ್ ಸ್ಟಾರ್ ಖ್ಯಾತಿಯ ನಟ ಉಪೇಂದ್ರ (Real Star Upendra) ಅವರು ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ, ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ (Sadhu Kokila) ಅವರ ಬಗ್ಗೆ ಮಾತನಾಡಿದ್ದಾರೆ. ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ರಕ್ತ ಕಣ್ಣೀರು ಸಿನಿಮಾವನ್ನು ನಿರ್ದೇಶನ ಮಾಡಿದ್ದು ಉಪೇಂದ್ರ ಅವರಲ್ಲ, ಸಾಧುಕೋಕಿಲ. ಆದರೆ, ಆ ಚಿತ್ರವು ರಿಮೇಕ್ ಆಗಿದ್ದರೂ ಕೂಡ ಸೂಪರ್ ಹಿಟ್ ಆಗಿತ್ತು. ಉಪೇಂದ್ರ ನಟನೆ ಆ ಚಿತ್ರದಲ್ಲಿ ತುಂಬಾನೇ ಅದ್ಭುತವಾಗಿದೆ ಎಂಬ ಮಾತು ಎಲ್ಲಾ ಕಡೆಯಿಂದ ಕೇಳಿ ಬಂದಿತ್ತು.

ಸಂದರ್ಶಕರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು, 'ರಕ್ತ ಕಣ್ಣೀರು ಅಂತ ಬಂದಾಗ, ಸಾಧು ಕೋಕಿಲ ಅವರು ಫಸ್ಟ್ ಟೈಮ್ ಆಗಿದ್ದರಿಂದ ಮತ್ತು ನಮ್ಮ ಜೊತೆಗೇ ಇದ್ದಿದ್ದರಿಂದ, ಏನೂ ಸಮಸ್ಯೆ ಇರಲಿಲ್ಲ. ಸಾಧು, ನೀವೇ ಮಾಡಿ, ನಾವೆಲ್ಲಾ ಒಟ್ಗೇ ಇರ್ತೀವಿ, ಟೀಮ್ ತರ ಮಾಡ್ಬಿಡೋಣ ಪಿಕ್ಚರ್‌ನ ಅಂತ ಹೇಳಿದ್ವಿ.. ನಂಗೆ ಯಾರೋ ಒಬ್ಬ ಕ್ಯಾಮೆರಾ ಹಿಂದೆ ನಿತ್ಕೊಂಡು ನನ್ನ ಪರ್ಫಾಮೆನ್ಸ್ ನೋಡೋದಕ್ಕೆ, ಅದನ್ನು ವಾಚ್ ಮಾಡೋರು ಒಬ್ಬರು ಬೇಕಿತ್ತು.. ಯಾಕೆ ಅಂದ್ರೆ ಅದು ಪರ್ಫಾಮೆನ್ಸ್ ಓರಿಯಂಟೆಡ್ ಸಿನಿಮಾ.. 

Tap to resize

Latest Videos

undefined

ಮತ್ತೆ ಬಂದ್ರು ಕಾಶೀನಾಥ್ ಮಗ ಅಭಿಮನ್ಯು; ಎಲ್ಲಿಗೆ ಪಯಣ ಯಾವುದೋ ದಾರಿ..!?

ಆ ದೃಷ್ಟಿಯಲ್ಲಿ ಸಾಧು ಕೋಕಿಲ ಅವ್ರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ಪ್ರತಿಯೊಂದನ್ನು, ಸರ್, ಹೀಗಿದ್ರೆ ಚೆನ್ನಾಗಿರುತ್ತೆ, ಹಾಗಿದ್ರೆ ಚೆನ್ನಾಗಿರುತ್ತೆ ಅಂತ ಪ್ರತಿಯೊಂದನ್ನು ಚೆನ್ನಾಗಿ ಗೈಡ್ ಮಾಡಿದಾರೆ. ಅವ್ರು ನಿಜವಾಗ್ಲೂ ಒಳ್ಳೇ ಡೈರೆಕ್ಟರ್..' ಎಂದಿದ್ದಾರೆ ಉಪೇಂದ್ರ. ಸಾಧು ಕೋಕಿಲ ಅವರು ನಟ ಉಪೇಂದ್ರ ಅವರ 'ಹೆಚ್‌ಟುಓ' ಸಿನಿಮಾದದಲ್ಲಿ ಉಪೇಂದ್ರ ಬರೆದಿರುವ 'ಹೂವೇ ಹೂವೇ..'ಹಾಡಿನ ಸಂಗೀತ ನಿರ್ದೇಶಕರೂ ಕೂಡ ಹೌದು. 

ಉಪೇಂದ್ರ ಹಾಗು ಸಾಧು ಕೋಕಿಲ ಅವರ ಕಾಂಬಿನೇ‍ನ್ ತುಂಬಾ ಅದ್ಭುತವಾಗಿ ಕೆಲಸ ಮಾಡಿತ್ತು. ಆದರೆ, ಆ ಬಳಿಕ ಅವರಿಬ್ಬರೂ ಯಾವುದೇ ಚಿತ್ರದಲ್ಲಿ ಕೆಲಸ ಮಾಡಿಲ್ಲ. ಸದ್ಯ ಸಾಧುಕೋಕಿಲ ಅವರು ಸಂಗೀತ ನಿರ್ದೇಶನ, ನಿರ್ದೇಶನ ಹಾಗೂ ನಟನೆಯಲ್ಲಿ ಬ್ಯುಸಿ ಆಗಿರುವುದಕ್ಕಿಂತ ಹೆಚ್ಚಾಗಿ ರಿಯಾಲಿಟಿ ಶೋ ಜಡ್ಜ್ ಆಗಿ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಹಿಂದೆ ಮಾಡಿರುವ ಅತ್ಯದ್ಭುತ ಕೆಲಸವನ್ನು ಇಂದಿಗೂ ಸಿನಿಪ್ರಿಯರು ನೆನಪಿಸಿಕೊಳ್ಳುತ್ತಿದ್ದಾರೆ. ರಕ್ತ ಕಣ್ಣೀರು ಚಿತ್ರದಲ್ಲಿ ನಟಿ ರಮ್ಯಕೃಷ್ಟ ಉಪೇಂದ್ರ ಜೋಡಿಯಾಗಿದ್ದಾರೆ. 

ಪಂಡರೀಬಾಯಿಗೆ ನನ್ 'ಗುರು' ಅಂತಿದ್ರಂತೆ ಡಾ. ರಾಜ್‌ಕುಮಾರ್ !

ಅಂದಹಾಗೆ, ಉಪೇಂದ್ರ ಅವರ ನಿರ್ದೇಶನ ಹಾಗು ನಟನೆಯ 'ಯುಐ' ಚಿತ್ರವು ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಕಾರಣ, ಉಪೇಂದ್ರ ಅವರು ಇತ್ತೀಚೆಗೆ ಕೇವಲ ನಟಿಸುತ್ತಿದ್ದರು, ನಿರ್ದೇಶನದಿಂದ ದೂರವಿದ್ದರು. ಹಾಗೂ, ಯುಐ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಇಡೀ ಭಾರತವೇ ಉಪೇಂದ್ರ ಅವರ ಮುಂಬರುವ ಚಿತ್ರವನ್ನು ಗಮನಿಸುತ್ತಿದೆ. ಒಟ್ಟಿನಲ್ಲಿ ಬಹಳ ವರ್ಷಗಳ ಬಳಿಕ ಉಪೇಂದ್ರ ಯುಐ ಚಿತ್ರವನ್ನು ಕನ್ನಡಿಗರು ಸೇರಿದಂತೆ ಸಿನಿಪ್ರೇಕ್ಷಕರು ಮುಂದಿನ ತಿಂಗಳು ಕಣ್ತುಂಬಿಕೊಳ್ಳಲಿದ್ದಾರೆ. 

click me!