ಮಿನುಗುತಾರೆ ಕಲ್ಪನಾ ಮೃತಪಟ್ಟ ಮನೆಯಲ್ಲಿ ಮಲಗಿದ್ದಾಗ ಕಿಲ ಕಿಲ ನಗು, ಗೆಜ್ಜೆ ಸದ್ದು ಕೇಳಿ ಮುಖ್ಯಮಂತ್ರಿ ಚಂದ್ರು ಗಾಬರಿ!

By Vaishnavi ChandrashekarFirst Published Sep 14, 2024, 6:53 PM IST
Highlights

ಕಲ್ಪನಾ ಕೊನೆಯುಸಿರೆಳೆದ ಬಂಗಲೆಯಲ್ಲಿ ಏನೋ ಆಗುತ್ತಿದೆ.....ಜನರ ಗೊಂದಲಕ್ಕೆ ಉತ್ತರ ಕೊಟ್ಟ ಮುಖ್ಯಮಂತ್ರಿ ಚಂದ್ರು.....

ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ಸ್ಟಾರ್ ನಟಿ ಮಿನುಗುತಾರೆ ಕಲ್ಪನಾ ಬೆಳಗಾವಿಯಲ್ಲಿ ಗೋಟೂರ್ ಪ್ರವಾಸ ಮಂದಿರದಲ್ಲಿ ಮೃತಪಟ್ಟಿದ್ದರು. ಕೇವಲ 36 ವರ್ಷ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ್ರಾ ಕೊಲೆ ಆಯ್ತಾ ಏನ್ ಆಯ್ತು ಅನ್ನೋ ಉತ್ತರ ಯಾರಿಗೂ ಸಿಕ್ಕಿಲ್ಲ. ಆದರೆ ಕಲ್ಪನಾ ಅಗಲಿದ ಬಂಗಲೆಯಲ್ಲಿ ಇದುವರೆಗೂ ಯಾರೂ ವಾಸಿಸುತ್ತಿಲ್ಲ ಇದುವರೆಗೂ ಯಾರು ಒಂದು ಗಂಟೆಯೂ ಉಳಿದುಕೊಳ್ಳುವ ಧೈರ್ಯ ಮಾಡಿಲ್ಲ. ಯಾಕೆ ಅನ್ನೋ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿರಲಿಲ್ಲ. ನಿಜಕ್ಕೂ ಅಲ್ಲಿ ಭಯ ಮೂಡಿಸುವ ಘಟನೆ ನಡೆಯುತ್ತಾ ಎಂದು ಮುಖ್ಯಮಂತ್ರಿ ಚಂದ್ರು ರಿವೀಲ್ ಮಾಡಿದ್ದಾರೆ.

'ಜನತಾ ಪಾರ್ಟಿಯಲ್ಲಿ ನಾನಿದ್ದೆ...ನಾನು ನಾಗರಾಜ್‌ ಮೂರ್ತಿ ಕಾರು ತೆಗೆದುಕೊಂಡು ಬೆಳಗಾವಿಗೆ ಹೋಗಿದ್ದೆವು...ಬರುವಾಗ ಈ ಐಬಿ ತಲುಪಿದವು. ರಾತ್ರಿ 11.30 ಆಗಿತ್ತು ಅಲ್ಲಿ ಹೆಚ್ಚು ಜನ ಬರುತ್ತಿರಲಿಲ್ಲ. ಅಲ್ಲಿ ದೂರದಲ್ಲಿ ಓರ್ವ ಬೀಡಿ ಸೇದುತ್ತಾ ಇದ್ದ. ನಾಗರಾಜ್‌ ಮೂರ್ತಿ ಅವರನ್ನು ಕರೆದೆ ಅವನು ಬಂದು ನಮಸ್ಕಾರ ಮಾಡಿದ. ಬೀಗ ತೆಗೆಯಬೇಕು ಎಂದು ನಾಗರಾಜ್‌ ಮೂರ್ತಿ ಹೇಳಿದ್ದರು ಆದರೆ ಅವನು ಒಂದಲ್ಲಾ ಒಂದು ಕಾರಣ ಕೊಡುತ್ತಾ ಇದ್ದಾ. ಸುಮಾರು 30 ಕಿ.ಮೀ. ದೂರದಲ್ಲಿ ಬೇರೋಂದು ಐಬಿ ಇದೆ ಅಲ್ಲಿಗೆ ಹೋಗಿ ಎಂದ. ಆದರೂ ಕೇಳದೆ ನಾವು ಹೋಗಿ ಅದೇ ಐಬಿಯಲ್ಲಿ ಮಲಗಿದೆವು' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ.

Latest Videos

ಸಕ್ಕರೆ ಬಿಟ್ಟರೆ ನೀನೇ ಅಪ್ಸರೆ; ಮಂಗಳೂರು ಬೆಡಗಿ ಕೃತಿ ಶೆಟ್ಟಿ ಬಿಚ್ಚಿಟ್ಟ ಬ್ಯೂಟಿ ಸೀಕ್ರೆಟ್

'ಮಲಗಿದ 20 ನಿಮಿಷ ಆಗಿರಬಹುದು. ಕಿಲ ಕಿಲ ನಗು ಕೇಳಿಸಲು ಶುರುವಾಗಿತ್ತು, ನನ್ನ ಸುತ್ತವೇ ಯಾರೋ ನಕ್ಕಂತೆ ಆಗುತ್ತಿದೆ. ಕೆಟ್ಟ ನಗು ಅದು. ನಾನು ತಕ್ಷಣವೇ ಎದ್ದು ನಾಗರಾಜ ಮೂರ್ತಿ ಎದ್ದೋ ಇಲ್ಲಿ ಬೇಡ ಎಂದೆ ಆದರೆ ನಾಗರಾಜ ಮೂರ್ತಿ ನನ್ನ ಮಾತಿಗೆ ಒಪ್ಪಲಿಲ್ಲ.10 ನಿಮಿಷಗಳ ನಂತರ ನಾಗರಾಜ ಮೂರ್ತಿಗೆ ಗೆಜ್ಜೆ ಶಬ್ದ ಕೇಳಿಸಿತ್ತು. ಇಬ್ಬರಿಗೂ ಭಯ ಶುರುವಾಯ್ತು. ನಂತರ ಅಲ್ಲಿಂದ ಓಡಿದೆವು. ಅವರು ಸತ್ತಾಗಿನಿಂದ ಇಲ್ಲಿ ಸಮಸ್ಯೆ ಆಗ್ತಿದೆ ಹೇಗೆ ಹೇಳಬೇಕು ಅನ್ನೋದು ಗೊತ್ತಾಗುತ್ತಿಲ್ಲ ದಯವಿಟ್ಟು ಇಲ್ಲಿಂದ ಹೊರಟುಬಿಡಿ ನಾನು ಹೋಗುತ್ತೀನಿ ಎಂದು ಕೆಲಸ ವ್ಯಕ್ತಿ ಹೇಳಿದ್ದರು. ಅದೇ ಭ್ರಮೆಯಲ್ಲಿ ಆಯ್ಯೋ ನಿಜವಾಗಿ ಅಲ್ಲಿ....ಅಯ್ಯೋ ನಮಗೆ ಆ ಅನುಭವ ಆಗಿದ್ದಂತೂ ಹೌದು' ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. 

click me!