
ರಮೇಶ್ ರೆಡ್ಡಿಯವರ (Ramesh Reddy) ನಿರ್ಮಾಣದ ಬಹುಕೋಟಿ ವೆಚ್ಚದ '45' ಪ್ಯಾನ್ ಇಂಡಿಯಾ ಸಿನಿಮಾ (45 Movie) ಬಿಡುಗಡೆಗೆ ಸಜ್ಜಾಗಿದೆ. ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆಯ ಸಿನಿಮಾ '45' ಇದೀಗ ಸಖತ್ ಸೌಂಡ್ ಮಾಡುತ್ತಿದೆ. 45 ಸಿನಿಮಾದ ಬಗ್ಗೆ ಇದೀಗ ಭಾರೀ ಕ್ರೇಜ್ ಸೃಷ್ಟಿಯಾಗಿದ್ದು, ಹೈದ್ರಾಬಾದ್ ಸೇರಿದಂತೆ ಇಡೀ ಭಾರತದಲ್ಲಿ ಈ ಸಿನಿಮಾ ಬಗ್ಗೆ ಕ್ರೇಜ್ ಮೂಡಿದೆ. ಈ ಸಿನಿಮಾ ಬಿಡುಗಡೆಗೆ ಇನ್ನು 23 ದಿನವಷ್ಟೇ ಬಾಕಿಯಿದೆ. ಈಗಾಗಲೇ ಚಿತ್ರದ 'ಆಫ್ರೋ ತಪಾಂಗ್' ಸಾಂಗ್ ಸೂಪರ್ ಹಿಟ್ ಆಗಿ ಸಖತ್ ಸದ್ದು ಮಾಡ್ತಿದೆ. ಏನೇ ಆಗ್ಲಿ ಈ ಸಿನಿಮಾ ನೋಡಲೇಬೇಕು ಎಂದು ಸಿನಿರಸಿಕರು ಕಾಯುವಂತಾಗಿದೆ.
ಬುಕ್‌ಮೈಶೋನಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು 45 ಸಿನಿಮಾ ನೋಡಲೇಬೇಕು ಎಂದು ಆಸಕ್ತಿ ತೋರಿಸಿ ವೋಟ್ ಮಾಡಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ '45' ಸಿನಿಮಾ ಬಿಡುಗಡೆ ಆಗ್ತಿರೊದು ಹಲವರಿಗೆ ಗೊತ್ತಿದೆ. ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು ಬಹುಕೋಟಿ ವೆಚ್ಚದಲ್ಲಿ 45 ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಮೊಟ್ಟಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇದೀಗ ಫುಲ್ ಹೈಪ್ ಪಡೆದಿದೆ. ಈಗಾಗಲೇ ಟೀಸರ್, ಪೋಸ್ಟರ್ ಹಾಗೂ ಪ್ರಮೋಷನ್ ಸಾಂಗ್ ಮೂಲಕ 45 ಸಿನಿಮಾ ಸಾಕಷ್ಟು ಗಮನ ಸೆಳೆದಿದೆ.
ಈ ಚಿತ್ರಕ್ಕೆ ಸ್ವತಃ ಅರ್ಜುನ್ ಜನ್ಯಾ ಅವರೇ ನಿರ್ದೇಶನದ ಜೊತೆಗೆ ಮ್ಯೂಸಿಕ್ ಕಂಪೋಸ್ ಸಹ ಮಾಡಿದ್ದಾರೆ. ಚಿತ್ರದ ಕಥೆ ಏನು ಎನ್ನುವ ಸುಳಿವು ಬಿಟ್ಟುಕೊಡದೇ ಚಿತ್ರತಂಡ ಬಹಳಷ್ಟು ಕುತೂಹಲ ಮೂಡಿಸಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ಕೂಡ ನಡೀತಿದೆ. ಶಿವಣ್ಣ, ಉಪ್ಪಿ ಹಾಗೂ ರಾಜ್ ಜೊತೆಗೆ ಕೌಸ್ತುಭ ಮಣಿ, ಜಿಶು ಸೆಂಗುಪ್ತ 45 ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಹಾಗೆ, ಡಿಸೆಂಬರ್ 25ಕ್ಕೆ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಕೂಡ ತೆರೆಗೆ ಬರ್ತಿದೆ. 45 ಹಾಗೂ ಮಾರ್ಕ್ ಮಧ್ಯೆ ಬಾಕ್ಸ್ ಆಫೀಸ್ ಫೈಟ್ ನಡೆಯಲಿದೆ.
ಇನ್ನು, ಸಿಕ್ಕ ಮಾಹಿತಿ ಪ್ರಕಾರ, ಬರೋಬ್ಬರಿ 100 ಕೋಟಿ ರೂ. ಬಜೆಟ್‌ನಲ್ಲಿ ರಮೇಶ್ ರೆಟ್ಟಿಯವರು 45 ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ '45' ಸಿನಿಮಾ ತೆರೆಗೆ ಬರಲಿದ್ದು, ಈ ಸಿನಿಮಾದ ಬಗ್ಗೆ ಇಡೀ ಇಂಡಿಯಾದಲ್ಲಿ ನಿರೀಕ್ಷೆ ಮನೆಮಾಡಿದೆ. ಸತ್ಯಾ ಹೆಗ್ಡೆ ಛಾಯಾಗ್ರಹಣ, ಅನಿಲ್ ಕುಮಾರ್ ಸಂಭಾಷಣೆ ಚಿತ್ರಕ್ಕಿದೆ. ರವಿವರ್ಮ, ಜಾಲಿ ಬಾಸ್ಟಿಯನ್, ಡಿಫರೆಂಟ್ ಡ್ಯಾನಿ, ಮತ್ತು ಚೇತನ್ ಡಿ'ಸೋಜಾ ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಹಾಡುಗಳಿಗೆ ಚಿನ್ನಿ ಪ್ರಕಾಶ್ ಮತ್ತು ಬಿ. ಧನಂಜಯ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.
ಅರ್ಜುನ್ ಜನ್ಯಾ ತಮ್ಮ ಮೊದಲ ಪ್ರಯತ್ನದಲ್ಲೇ ವಿಭಿನ್ನ ಕಥೆ ಹೇಳಲು ಹೊರಟ್ಟಿದ್ದಾರೆ. ಅವರಿಗೆ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ರಿಚ್ ಮೇಕಿಂಗ್ ಮೂಲಕ ಶೂಟಿಂಗ್ ನಡೆಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 'ಆಫ್ರೋ ತಪಾಂಗ್' ಸಾಂಗ್ ಈಗಾಗಲೇ ಸಖತ್ ಸೌಂಡ್ ಮಾಡ್ತಿದೆ. ಬಿಡುಗಡೆಯಾದ ದಿನದಿಂದಲೂ ಈ ಹಾಡು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಟಾಪ್‌ನಲ್ಲಿದೆ. ಇತ್ತೀಚೆಗೆ ಬಂದ ಸಾಂಗ್ ಮೇಕಿಂಗ್ ವೀಡಿಯೋ ಕೂಡ ವೈರಲ್ ಭಾರೀ ಆಗ್ತಿದೆ. ಇದೊಂದೇ ಹಾಡಿಗೆ ಸಿಕ್ಕಾಪಟ್ಟೆ ಹಣ ಸುರಿಯಲಾಗಿದೆಯಾ? ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ನಡಿತಾ ಇದೆ. ರೀಲ್ಸ್ ಆಗುತ್ತ ಈ ಸಾಂಗ್ಸ್ ಸೋಷಿಯಲ್ ಮೀಡಿಯದಲ್ಲಿ ಹವಾ ಎಬ್ಬಿಸುತ್ತಿದೆ.
ಈ ವರ್ಷದ ಕೊನೆಯಲ್ಲಿ 45 ಸಿನಿಮಾ ಬಿಡುಗಡೆ ಆಗುತ್ತಿದ್ದು, ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಇದೂ ಕೂಡ ಒಂದಾಗಿದೆ. ಬಹಳ ವರ್ಷಗಳ ಗ್ಯಾಪ್ ಬಳಿಕ ಶಿವಣ್ಣ ಹಾಗೂ ಉಪೇಂದ್ರ ಜೊತೆಯಾಗಿದ್ದಾರೆ. ಈ ಸಿನಿಮಾದ ಕಥೆಯಲ್ಲಿ ಅವರಿಬ್ಬರ ಪಾತ್ರ ಏನು? ಸ್ನೇಹಿತರಾ ಅಥವಾ ವೈರಿಗಳಾ? ಏನಿರಬಹುದು ಎಂದು ಪ್ರೇಕ್ಷಕರು ಊಹಿಸುವ ಪ್ರಯತ್ನ ಮಾಡುತ್ತಿದ್ದಾರೆ. ಟ್ರೈಲರ್ ಬಂದ ಬಳಿಕ ಒಂದು ಅಂದಾಜು ಸಿಗಬಹುದೋ ಏನೋ ಎನ್ನುತ್ತಿದ್ದಾರೆ.
ಅಂದಹಾಗೆ, ಬಹಳ ದೊಡ್ಡಮಟ್ಟದಲ್ಲಿ '45' ಸಿನಿಮಾ ಬಿಡುಗಡೆ ಪ್ಲ್ಯಾನ್ ಮಾಡಲಾಗಿದೆ. ಪರಭಾಷೆಗಳಲ್ಲಿ ಕೂಡ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಬೇರೆ ಭಾಷೆಗಳಲ್ಲಿ ಕೂಡ ಟೀಸರ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹೈದರಾಬಾದ್ ಮಾಲ್‌ಗಳಲ್ಲಿ ಬ್ಯಾನರ್‌ಗಳನ್ನು ಹಾಕಿ ಪ್ರಚಾರ ಆರಂಭಿಸಲಾಗಿದೆ. 'ಜೈಲರ್' ಚಿತ್ರದ ನರಸಿಂಹ ಪಾತ್ರದಿಂದ ಶಿವಣ್ಣನ ಕ್ರೇಜ್ ಬೇರೆ ಭಾಷೆಗಳಲ್ಲಿ ಸಾಕಷ್ಟಿದೆ. ಉಪೇಂದ್ರ ಅವರಿಗೆ ತೆಲುಗು ಏರಿಯಾಗಳಲ್ಲಿ ತೆಲುಗು ನಟರಷ್ಟೇ ಡಿಮ್ಯಾಂಡ್ ಇದೆ. ಉಪ್ಪಿ ಮ್ಯಾಜಿಕ್ ಜೊತೆ ಶಿವಣ್ಣ ಕ್ರೇಜ್ ಕೂಡ ಕೆಲಸ ಮಾಡುವುದರ ಜೊತೆಗೆ ರಾಜ್ ಬಿ ಶೆಟ್ಟಿ ಎಂಬ ಪಾದರಸ ಕೂಡ ಈ ಚಿತ್ರಕ್ಕೆ ಬೋನಸ್ ಆಗಿದೆ. ಸದ್ಯ ಸಿನಿಮಾರಸಿಕರು '45' ಸಿನಿಮಾ ತೆರೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಇನ್ನೇನು ಸ್ವಲ್ಪವೇ ದಿನ ಕಾದುಕುಳಿತರೆ ಆಯ್ತು.. ಸಿನಿಮಾವನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.