
ನಟ ಉಪೇಂದ್ರ ಹಾಗೂ ಹರಿಪ್ರಿಯಾ ಕಾಂಬಿನೇಶನ್‌ನ ‘ಲಗಾಮ್’ ಚಿತ್ರದ ಕಲರ್‌ಫುಲ್ ಫೋಟೋಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಇದೇ ತಿಂಗಳ ಕೊನೆಯಿಂದ ಮೂರನೇ ಹಂತದ ಶೂಟಿಂಗ್‌ಗೆ ಚಿತ್ರತಂಡ ಹೊರಡಲಿದೆ. ವಿದೇಶದಲ್ಲಿ ಹಾಡುಗಳ ಚಿತ್ರೀಕರಣ ಮಾಡುವ ಪ್ಲಾನ್ ನಿರ್ದೇಶಕರಿಗಿದೆ.
‘ನಮ್ಮ ಚಿತ್ರಕ್ಕೆ ಶೇ.60 ಭಾಗ ಚಿತ್ರೀಕರಣ ಆಗಿದೆ. ಇನ್ನೂ 50 ದಿನ ಶೂಟಿಂಗ್ ಬಾಕಿ ಇದೆ. ಅನುಮತಿ ಪಡೆದು ಸ್ವಿಟ್ಜರ್‌ರ್ಲಾಂಡ್‌ಗೆ ಹೋಗಿ ಹಾಡು ಹಾಗೂ ಮಾತಿನ ಭಾಗದ ಕೆಲ ದೃಶ್ಯಗಳನ್ನು ಶೂಟ್ ಮಾಡಿಕೊಂಡು ಬರಲಾಗುವುದು. ಕತೆಯ ಪ್ರಕಾರ ವಿದೇಶದಲ್ಲಿ ಚಿತ್ರೀಕರಣ ಮಾಡುವ ಅಗತ್ಯ ಇದೆ’ ಎನ್ನುತ್ತಾರೆ ನಿರ್ದೇಶಕ ಕೆ ಮಾದೇಶ್. ಅವಿನಾಶ್, ರಂಗಾಯಣ ರಘು, ಸಾಧು ಕೋಕಿಲಾ, ಸಾಯಿಕುಮಾರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಪಿಡುಗುಗಳಿಗೆ ಹೇಗೆ ಲಗಾಮು ಹಾಕಬಹುದು ಅನ್ನೋದನ್ನು ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ. ಚಿತ್ರದಲ್ಲಿ ನಟಿ ಹರಿಪ್ರಿಯಾ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡದ್ದಾರೆ. 'ಉಪ್ಪಿಗಿಂತ ರುಚಿ ಬೇರೆಯಿಲ್ಲ' ಹಾಡಿನಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನ ಇವರಿಬ್ಬರ ಕಾಂಬಿನೇಷನ್‌ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.