
ಕನ್ನಡ ಚಿತ್ರರಂಗದ ಸೆಲಬ್ರಿಟಿ ಜೋಡಿಗಳಾದ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ತಾರಾ ದಂಪತಿಯ ಮಗಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಲಾಗಿದೆ. ಈ ವೇಳೆ ತೊಟ್ಟಿಲಲ್ಲಿ ಆಡುವ ಹರ್ಷಿಕಾ ಮಗಳನ್ನು ಗರ್ಲ್ ಫ್ರೆಂಡ್ ಮಾಡಿಕೊಳಗ್ತೀಯಾ ಎಂದು ಮಗನಿಗೆ ಕೇಳುವ ಮೂಲಕ ನಟಿ ಅಮೂಲ್ಯ ಗೌಡ ಅವರು ನೆಂಟಸ್ತನ ಬೆಳೆಸಲು ಮುಂದಾಗಿದ್ದಾರೆ. ಇದನ್ನು ಕೇಳಿಸಿಕೊಂಡ ಹರ್ಷಿಕಾ ಈಗಲೇ ಮಗನಿಗೆ ಹುಡುಗಿ ಸೆಟಪ್ ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ದಂಪತಿ ತಮ್ಮ ಮಗಳ ನಾಮಕರಣ ಸಮಾರಂಭವನ್ನು ಮೇ 3, 2025 ರಂದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ಆಯೋಜಿಸಿದರು. ಆದರೆ, ಈ ವೇಳೆ ಅತಿಥಿಯಾಗಿ ನಟಿ ಅಮೂಲ್ಯ ಗೌಡ ಅವರು ಗಂಡ ಮತ್ತು ಮಕ್ಕಳೊಂದಿಗೆ ಭಾಗಿಯಾಗಿದ್ದಾರೆ. ಈ ವೇಳೆ ಹರ್ಷಿಕಾ ಅವರ ಮಗಳು ತ್ರಿದೇವಿ ಪೊನ್ನಕ್ಕಳನ್ನು ತೋರಿಸಿ ಗರ್ಲ್ ಫ್ರೆಂಡ್ ಮಾಡಿಕೊಳ್ತೀಯಾ? ಎಂದು ನಟಿ ಅಮೂಲ್ಯಗೌಡ ಮಗನಿಗೆ ಕೇಳಿದ್ದಾರೆ. ತೊಟ್ಟಿಲಲ್ಲಿನ ಮಗಳನ್ನು ಸೆಟಪ್ ಮಾಡಿಕೊಡ್ತಿದ್ದಾಳೆ ಎಂದು ಹರ್ಷಿಕಾ ಗೇಲಿ ಮಾಡಿದ್ದಾರೆ.
ನಟಿ ಅಮೂಲ್ಯ ಗೌಡ ಅವರನ್ನು ಚಂದನವನದ ಗೋಲ್ಡನ್ ಕ್ವೀನ್ (Golden Queen Amulya) ಎಂದೇ ಕರೆಯಲಾಗುತ್ತದೆ. ಅಮೂಲ್ಯ ಮದುವೆಯ ನಂತರ ಭರ್ಜರಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ, ಬೆಂಗಳೂರಿನ ಉದ್ಯಮಿಯನ್ನು ಮದುವೆ ಮಾಡಿಕೊಂಡ ನಂತರ ಸಿನಿಮಾದತ್ತ ಒಲವು ಕಡಿಮೆ ಮಾಡಿದ್ದಾರೆ. ಆದರೆ, ಚಿತ್ರರಂಗದವರೊಂದಿಗಿನ ಸಂಬಂಧ ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ. ಮದುವೆಯ ನಂತರ ಅವರಿಗೆ ಎರಡು ಅವಳಿ ಮುದ್ದಿನ ಮಕ್ಕಳಾಗಿದ್ದು, ಅವರಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ. ಇದೀಗ ಇಬ್ಬರು ಮಕ್ಕಳನ್ನು ನಟಿ ಹರ್ಷಿಕಾ ಪೂಣಚ್ಚ ಅವರ ಮಗಳ ನಾಮಕರಣಕ್ಕೆ ಕರೆದೊಯ್ದು, ಗರ್ಲ್ ಫ್ರೆಂಡ್ ಮಾಡಿಕೊಳ್ತೀಯಾ ಎಂದು ಕೇಳುವ ಮೂಲಕ ನೆಂಟಸ್ತನ ಬೆಳೆಸಲು ಮುಂದಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಇನ್ನು ನಟಿ ಅಮೂಲ್ಯ 2017ರ ಮುಗುಳು ನಗೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ಕೊನೆಯ ಸಿನಿಮಾವಾಗಿದೆ. ಸದ್ಯಕ್ಕೆ ಗಂಡ, ಮಕ್ಕಳ ಆರೈಕೆ ಹಾಗೂ ಸಂಸಾರ ನಿರ್ವಹಣೆಯಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ, ಮಕ್ಕಳ ಜೊತೆಯೇ ಹೆಚ್ಚಿನ ಸಮಯ ಕಳೆಯುತ್ತಿರುತ್ತಾರೆ. ಇದೀಗ ಸಿನಿಮಾದಿಂದ ದೂರವಿರುವ ಅಮೂಲ್ಯ ಮತ್ತೆ ಸಿನಿಮಾಗೆ ಕಂ ಬ್ಯಾಕ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಸಹ ಕೇಳಿ ಬರುತ್ತಿವೆ. ಆದರೆ, ಯಾವಾಗ, ಯಾವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಮರಳುತ್ತಾರೆ? ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಇನ್ನು ಹರ್ಷಿಕಾ ಪೂಣಚ್ಛ ಅವರ ಮಗಳ ನಾಮಕರಣ ಸಮಾರಂಭದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಮಗಳಿಗೆ 'ತ್ರಿದೇವಿ ಪೊನ್ನಕ್ಕ' ಎಂದು ಹೆಸರನ್ನು ನಾಮಕರಣ ಮಾಡಿದ್ದಾರೆ. ಇದರಲ್ಲಿ 'ತ್ರಿದೇವಿ' ಎಂದರೆ ಮೂರು ಪ್ರಮುಖ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯ ಶಕ್ತಿಯ ಸಂಕೇತವನ್ನು ಪ್ರತಿನಿಧಿಸುತ್ತದೆ. 'ಪೊನ್ನಕ್ಕ' ಎಂಬುದು ಅಪ್ಪ ಭುವನ್ ಪೊನ್ನಣ್ಣ ಮತ್ತು ಅಮ್ಮ ಹರ್ಷಿಕಾ ಪೂಣಚ್ಚ ಹೆಸರಲ್ಲಿ ಬರುವ ಕೆಲವು ಅಕ್ಷರಗಳನ್ನು ತೆಗೆದು ಇಡಲಾಗಿದೆ. ಹೀಗಾಗೊ, ತ್ರಿದೇವಿ ಪೊನ್ನಕ್ಕ ಎಂದು ಹೆಸರಿನ ಸಂಯೋಜನೆ ಮಾಡಲಾಗಿದೆ.
ತ್ರಿದೇವಿಯ ನಾಮಕರಣ ಕಾರ್ಯಕ್ರಮಕ್ಕೆ ನಟಿ ಪೂಜಾ ಗಾಂಧಿ, ನಟಿ ಅಮೂಲ್ಯ, ನಿರ್ದೇಶಕಿ ಸುಮನಾ ಕಿತ್ತೂರು, ನಟ ವಿಕಾಸ್ ಉತ್ತಯ್ಯ, ಚೈತ್ರ ವಾಸುದೇವನ್ ದಂಪತಿ, ನಟಿ ಕಾರುಣ್ಯ ರಾಮ್ ಮುಂತಾದವರು ಆಗಮಿಸಿದ್ದು, ಮಗುವಿಗೆ ಹಾಗೂ ತಾರಾ ದಂಪತಿಗೆ ಶುಭಾಶಯ ಕೋರಿದ್ದಾರೆ. ಇನ್ನು ಮಗಳ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಲಾಗಿದ್ದ ವೇದಿಕೆಯ ಮೇಲೆ ಹಲವು ಹಾಡುಗಳನ್ನು ಹಾಕಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಭುವನ್ ಮತ್ತು ಹರ್ಷಿಕಾ ಇಬ್ಬಗೂ ಕೊಡವ ಶೈಲಿಯ ನೃತ್ಯವನ್ನು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹರ್ಷಿಕಾ ಪೂಣಚ್ಚ ಅವರು ತಮ್ಮ ಮಗಳ ಹೆಸರಿನ ಹಿಂದಿನ ಅರ್ಥದ ಬಗ್ಗೆ ಮಾತನಾಡಿ, 'ತ್ರಿ' ಎಂದರೆ ಮಗಳ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ಬಲವಾದ ಸಂಖ್ಯೆ 3 ಅನ್ನು ಸೂಚಿಸುತ್ತದೆ. 'ದೇವಿ' ಎನ್ನುವುದು ನಮ್ಮ ಮಗಳು ನವರಾತ್ರಿಯ ಮೊದಲ ದಿನದಂದು ಜನಿಸಿದ ಕಾರಣದಿಂದಾಗಿ. ಜೊತೆಗೆ, ಮೂಕಾಂಬಿಕಾ ದೇವಿಯಿಂದ ನಮಗೆ ಉಡುಗೊರೆಯಾಗಿ ಮಗಳು ಬಂದಿದ್ದಾಳೆ ಎಂಬ ನಂಬಿಕೆಯಿದೆ. ಇನ್ನು 'ಪೊನ್ನಕ್ಕ' ಎನ್ನುವುದು ನಾನು ಮತ್ತು ಭುವನ್ ಹೆಸರಿನ ಸಂಯೋಜನೆ ಆಗಿದೆ ಎಂದು ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.