ಕೆಜಿಎಫ್‌ 2 ಚಿತ್ರದಲ್ಲಿ ಟಾಲಿವುಡ್‌ ಸ್ಟಾರ್‌ ನಟ ರಾವ್‌ ರಮೇಶ್!

Published : Feb 11, 2020, 08:54 AM ISTUpdated : Feb 14, 2020, 05:11 PM IST
ಕೆಜಿಎಫ್‌ 2 ಚಿತ್ರದಲ್ಲಿ ಟಾಲಿವುಡ್‌ ಸ್ಟಾರ್‌ ನಟ ರಾವ್‌ ರಮೇಶ್!

ಸಾರಾಂಶ

ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿ​ನೇ​ಷ​ನ್‌ನ ‘ಕೆಜಿ​ಎಫ್‌ 2’ ಗೆ ಒಬ್ಬರ ನಂತರ ಒಬ್ಬರು ಸ್ಟಾರ್‌ ಕಲಾ​ವಿ​ದರು ಜತೆ​ಯಾ​ಗು​ತ್ತಿ​ದ್ದಾರೆ. ಈಗ ತೆಲು​ಗಿ​ನಲ್ಲಿ ಪ್ರಸಿದ್ಧ ನಟ ರಾವ್‌ ರಮೇಶ್‌ ಎಂಟ್ರಿ ಆಗಿ​ದ್ದಾರೆ.

ಒಂದು ಕಾಲದ ತೆಲುಗು ಚಿತ್ರ​ರಂಗದ ಖ್ಯಾತ ನಟ ದಿ.ರಾ​ವ್‌ ಗೋಪಾಲ್‌ ರಾವ್‌ ಅವರ ಪುತ್ರ ರಾವ್‌ ರಮೇಶ್‌. ತೆಲು​ಗಿನ ಹೊಸ​ಬ​ರಿಂದ ಶುರು​ವಾ​ಗಿ ಸ್ಟಾರ್‌ ನಟರವರೆಗೂ ಎಲ್ಲಾ ಥರದ ಪಾತ್ರ​ಗ​ಳನ್ನು ಮಾಡುತ್ತ ಬಂದಿ​ರುವ ಅದ್ಭುತ ಕಲಾ​ವಿದ. ಇಂಥ ನಟ​ನನ್ನು ಪ್ರಶಾಂತ್‌ ನೀಲ್‌ ‘ಕೆಜಿ​ಎಫ್‌ 2’ ಮೂಲಕ ಕನ್ನಡಕ್ಕೆ ಕರೆ​ ತಂದಿ​ದ್ದಾರೆ.

"

ರವೀನಾ ಟಂಡನ್‌ ಕೈಗೆ ಡೆತ್‌ ವಾರೆಂಟ್‌ ಕೊಟ್ಟ ಕೆಜಿಎಫ್‌- 2 ನಿರ್ದೇಶಕ ಪ್ರಶಾಂತ್ ನೀಲ್!

ರಾವ್‌ ರಮೇಶ್‌ ಯಾವ ಪಾತ್ರ ಮಾಡ​ಲಿ​ದ್ದಾರೆ ಎಂಬುದು ಪ್ರಶಾಂತ್‌ ನೀಲ್‌ ಬಿಟ್ಟು ಕೊಟ್ಟಿಲ್ಲ. ‘ರಾವ್‌ ರಮೇಶ್‌ ನಮ್ಮ ಚಿತ್ರ​ದಲ್ಲಿ ನಟಿ​ಸು​ವು​ದಕ್ಕೆ ಒಪ್ಪಿ​ಕೊಂಡಿ​ರು​ವುದು ಖುಷಿ ಕೊಟ್ಟಿದೆ. ಅವರ ಪಾತ್ರ ಕತೆಗೆ ಪೂರ​ಕ​ವಾ​ಗಿದ್ದು, ಪ್ರೇಕ್ಷ​ಕ​ರಿಗೆ ಮೆಚ್ಚು ಆಗು​ವಂತಹ ಪಾತ್ರ​ದಲ್ಲೇ ಕಾಣಿ​ಸಿ​ಕೊ​ಳ್ಳು​ತ್ತಿ​ದ್ದಾ​ರೆ’ ಎಂದು ಪ್ರಶಾಂತ್‌ ನೀಲ್‌ ಹೇಳಿ​ಕೊಂಡಿ​ದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕ್ಯೂಟ್ ಎಕ್ಸ್‌ಪ್ರೆಷನ್, ಟ್ರೆಂಡಿ ಔಟ್‌ಫಿಟ್: ಕಮಾಲ್ ಮಾಡ್ತಿದೆ ಆಶಿಕಾ ರಂಗನಾಥ್ ಕಣ್ಣೋಟ!
'ಕನ್ನಡದ ಹೃತಿಕ್‌ ರೋಷನ್‌' ನಿರಂಜನ್‌: ನಟ ಡಾರ್ಲಿಂಗ್‌ ಕೃಷ್ಣ ಹೇಳಿದ ಮಾತು ವೈರಲ್!