777 ಚಾರ್ಲಿಗೆ ರಾಣಾ ದಗ್ಗುಬಾಟಿ ಸಾಥ್‌

Published : May 02, 2022, 08:20 AM IST
777 ಚಾರ್ಲಿಗೆ ರಾಣಾ ದಗ್ಗುಬಾಟಿ ಸಾಥ್‌

ಸಾರಾಂಶ

777 ಚಾರ್ಲಿಗೆ ರಾಣಾ ದಗ್ಗುಬಾಟಿ ಸಾಥ್‌ ಸುರೇಶ್‌ ಪ್ರೊಡಕ್ಷನ್‌ನಲ್ಲಿ ರಕ್ಷಿತ್‌ ಶೆಟ್ಟಿನಟನೆಯ ಚಿತ್ರ ಬಿಡುಗಡೆ

ರಕ್ಷಿತ್‌ ಶೆಟ್ಟಿನಟನೆ, ಕಿರಣ್‌ ರಾಜ್‌ ಕೆ ನಿರ್ದೇಶನದ ‘777 ಚಾರ್ಲಿ’ ಚಿತ್ರಕ್ಕೆ ತೆಲುಗಿನ ರಾಣಾ ದಗ್ಗುಬಾಟಿ ಸಾಥ್‌ ನೀಡಿದ್ದಾರೆ. ಬಹು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು ಪ್ರಸ್ತುತ ಪಡಿಸುತ್ತಿದ್ದು, ತಮ್ಮ ಸುರೇಶ್‌ ಪ್ರೊಡಕ್ಷನ್‌ ಮೂಲಕ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಆ ಮೂಲಕ ರಕ್ಷಿತ್‌ ಶೆಟ್ಟಿಅವರ ಈ ಚಿತ್ರವನ್ನು ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಕುರಿತು ಸ್ವತಃ ರಕ್ಷಿತ್‌ ಶೆಟ್ಟಿಅವರೇ ಟ್ವೀಟ್‌ ಮಾಡಿದ್ದಾರೆ. ಹೀಗಾಗಿ ‘ಕೆಜಿಎಫ್‌ 2’ ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗುತ್ತಿದೆ.

ಅಂದಹಾಗೆ ಜೂನ್‌ 10ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಗೀತ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಬಾಬಿ ಸಿಂಹ, ಡ್ಯಾನಿಶ್‌ ಸೇಠ್‌ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ‘ತೆಲುಗಿನಲ್ಲಿ ನಮ್ಮ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು 10 ಜನರ ತಂಡದೊಂದಿಗೆ ಸಿನಿಮಾ ನೋಡಿದ ನಂತರ ಅಲ್ಲಿ ವಿತರಣೆ ಮಾಡಲು ಒಪ್ಪಿದ್ದು, ನಮ್ಮ ಚಿತ್ರಕ್ಕೆ ಸಿಕ್ಕಿರುವ ಬಹು ದೊಡ್ಡ ಮೆಚ್ಚುಗೆ. ಸಿನಿಮಾ ನೋಡಿದ ಕೂಡಲೇ ರಾಣಾ ಅವರೇ ಟ್ವೀಟ್‌ ಮಾಡಿ, ಚಿತ್ರದ ಬಗ್ಗೆ ಎರಡೇ ಸಾಲಿನಲ್ಲಿ ರಿವ್ಯೂ ಕೂಡ ಹಾಕಿದ್ದಾರೆ. ಹೀಗಾಗಿ ಚಿತ್ರವನ್ನು ಅವರೇ ಪ್ರಸೆಂಟ್‌ ಮಾಡುವ ಜತೆಗೆ ಇದರ ತೆಲುಗು ವರ್ಷನ್‌ ಅನ್ನು ಸುರೇಶ್‌ ಪ್ರೊಡಕ್ಷನ್‌ನಿಂದ ಬಿಡುಗಡೆ ಮಾಡುತ್ತಿದ್ದಾರೆ. ಎಷ್ಟುಚಿತ್ರಮಂದಿರಗಳು, ಎಷ್ಟುಸ್ಕ್ರೀನ್‌ಗಳು ಎಂಬುದನ್ನು ಸದ್ಯದಲ್ಲೇ ಹೇಳುತ್ತಾರೆ. ಆದರೆ, ಕನ್ನಡ ಚಿತ್ರಕ್ಕೆ ಟಾಲಿವುಡ್‌ನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜತೆಯಾಗಿದೆ ಎಂಬುದು ಈ ಕ್ಷಣದ ಸಂಭ್ರಮ’ ಎನ್ನುತ್ತಾರೆ ನಿರ್ದೇಶಕ ಕಿರಣ್‌ ರಾಜ್‌.

21 ಕೋಟಿಗೆ ಹಕ್ಕು ಖರೀದಿ

ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿಯೂ ತೆರೆ ಕಾಣುತ್ತಿರುವ ಈ ಸಿನಿಮಾದ ವಿತರಣೆ ಹಕ್ಕನ್ನು ಆಯಾಯ ಭಾಷೆಯ ಪ್ರಖ್ಯಾತ ಸಂಸ್ಥೆಗಳು ಪಡೆದುಕೊಂಡಿವೆ. ಈಗ ಬೇರೆ ಭಾಷೆಗಳ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕು ಪಡೆದುಕೊಳ್ಳಲು ದೊಡ್ಡ ದೊಡ್ಡ ಸಂಸ್ಥೆಗಳೇ ಮುಂದೆ ಬರುತ್ತಿವೆ ಎನ್ನಲಾಗಿದೆ. ರಿಲಯನ್ಸ್‌, ಹಾಟ್‌ಸ್ಟಾರ್‌ ಸಂಸ್ಥೆಗಳು ಸಿನಿಮಾ ನೋಡುತ್ತಿದ್ದು, ಇನ್ನಷ್ಟೇ ಅಂತಿಮ ಘೋಷಣೆ ಹೊರಬೀಳಬೇಕಿದೆ.

ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಲಿರುವ ಮುಂದಿನ ಸಿನಿಮಾ ಎಂಬ ನಿರೀಕ್ಷೆ ಹುಟ್ಟಿರುವ ಸಿನಿಮಾ ‘777 ಚಾರ್ಲಿ’ ಜೂನ್‌ 10ರಂದು ಬಿಡುಗಡೆಯಾಗಲಿದೆ. ರಕ್ಷಿತ್‌ ಶೆಟ್ಟಿನಟಿಸಿರುವ, ಕಿರಣ್‌ರಾಜ್‌ ಕೆ ನಿರ್ದೇಶನದ ಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರು.21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್‌ ಹಕ್ಕು ಕಲರ್ಸ್‌ ಸಂಸ್ಥೆಯ ಒಡೆತನದ ವೂಟ್‌ ಓಟಿಟಿಗೆ ದಕ್ಕಿದೆ.

ರಕ್ಷಿತ್‌ ಶೆಟ್ಟಿಅವರು ಪರಮ್‌ವಃ ಸ್ಟುಡಿಯೋದ ಮೂಲಕ ನಿರ್ಮಿಸಿರುವ ಈ ಸಿನಿಮಾದ ಟ್ರೇಲರ್‌ ಮೇ 10ರಂದು ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್‌ ನೋಡಿರುವ ಸಂಕಲನಕಾರ ಸಚಿನ್‌ ಅವರು ಮಂತ್ರಮುಗ್ಧಗೊಳಿಸುವ ಟ್ರೇಲರ್‌ ಎಂದು ಟ್ವೀಟ್‌ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?