
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಬಾಲ್ ಒಂದು ನೆಟ್ ಸಮೀಪ ಜಿಗಿಯುವ ಚಿತ್ರದಿಂದ ಆರಂಭವಾಗಿ ಕಂಟೈನರ್‌ಗಳ, ಕ್ರೇನ್‌ಗಳ ಚಿತ್ರಣವೂ ಕಾಣಸಿಗುತ್ತದೆ. ಕಂಟೈನರ್‌ಗಳು ಮೇಲಿನಿಂದ ಬೀಳುವ ಜೊತೆ ಜೊತೆಗೇ ಎರಡು ನೆರಳುಗಳ ಫೈಟ್ ಕೂಡಾ ಕಾಣಬಹುದು. ಮೈದಾನದ ದೃಶ್ಯದಿಂದ ಆರಂಭವಾಗುವ ಮೋಷನ್ ಪೋಸ್ಟರ್ ಕಂಟೈನರ್‌ಗಳಿರುವ ಜಾಗಕ್ಕೆ ತಲುಪುತ್ತದೆ.
ಮೈಸೂರಿನ 'ಅರ್ಜುನ' ಹಾಗೂ 'ದುರ್ಗಾಪರಮೇಶ್ವರಿ'ಯೊಂದಿಗೆ ನಿಖಿಲ್ ಕುಮಾರಸ್ವಾಮಿ ದಂಪತಿ!
ಮೋಷನ್ ಪೋಸ್ಟರ್ ಇಂದು (ಶುಕ್ರವಾರ ಇಂದು ಸೆ.11)ರಂದು ಬಿಡುಗಡೆಯಾಗಿದ್ದು ಲಹರಿ ಮ್ಯೂಸಿಕ್ ಟಿ ಸಿರೀಸ್‌ನಲ್ಲಿ ವಿಡಿಯೋ ಕಾಣಬಹುದು. ಈಗಾಗಲೇ ಈ ಮೋಷನ್ ಪೋಸ್ಟರನ್ನು 6ವರೆ ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ರೈಡರ್ ಸಿನಿಮಾದಲ್ಲಿ ನಿಖಿಲ್ ಪ್ರಮುಖ ಪಾತ್ರ ಮಾಡಲಿದ್ದು, ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆಆರ್ ಪೇಟೆ, ಸಂಪದ ಹುಲಿವನ್, ರಾಜೇಶ್ ನಟರಂಗ, ಶೋಭರಾಜ್, ನಿಹಾರಿಕಾ, ಅನುಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಮನೆ ಕಟ್ಟಲು ಮುಂದಾದ ನಿಖಿಲ್ ಕುಮಾರಸ್ವಾಮಿ- ರೇವತಿ!
ರಾಜನ್ ಸೌಂಡ್ ಎಫೆಕ್ಟ್ ನೀಡಿದ್ದು, ಗೌತಮ್ ರಾಜ್ ಮೋಷನ್ ಪೋಸ್ಟರ್ ಕಾನ್ಸೆಪ್ಟ್ ಹಾಗೂ ಡಿಸೈನ್ ಮಾಡಿದ್ದಾರೆ. ಅಶ್ವಿನ್ ರಮೇಶ್ ಪೋಸ್ಟರ್ ಡಿಸೈನ್ ಮಾಡಿದ್ದು, ನರಸಿಂಹ ಜಾಲಹಳ್ಳಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ.
Posted by Nikhil Gowda on Thursday, September 10, 2020
ಇದೇ ಶುಕ್ರವಾರ 11-09-2020 ರಂದು ನನ್ನ ಮುಂದಿನ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ಲಾಂಚ್ ಮಾಡ್ತಾ ಇದ್ದೇವೆ. ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರೋತ್ಸಾಹ ನಮ್ಮ ಚಿತ್ರದ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಐದು ದಿನ ಮುಂಚೆಯೇ ನಿಖಿಲ್ ಕುಮಾರಸ್ವಾಮಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಗುರುವಾರವೂ ಸಿನಿಮಾದ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.