Darshan Case Shocking: ಜೈಲಿನಲ್ಲೇ ನಟ ದರ್ಶನ್ ಲಾಕ್; ಕೇಸ್ ವಿಚಾರಣೆ ಇನ್ನೂ ವಿಳಂಬವಾದ್ರೆ ಮುಂದೇನ್ ಆಗುತ್ತೆ ಸ್ವಾಮಿ?

Published : May 16, 2026, 08:20 PM IST
darshan thoogudeepa

ಸಾರಾಂಶ

ಈ ಹಂತದಲ್ಲಿ ದರ್ಶನ್ ಬೇಲ್ ಕೇಳಿ ತಪ್ಪು ಮಾಡಿದ್ರಾ ಅನ್ನೋ ಚರ್ಚೆ ಕಾನೂನು ಪಂಡಿತರ ನಡುವೆ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ದರ್ಶನ್​ಗೆ ಹೈಕೋರ್ಟ್ ನೀಡಿದ್ದ ಬೇಲ್​ನ ಇದೇ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಸದ್ಯಕ್ಕೆ ನಟ ದರ್ಶನ್ ಮುಂದೆ ಬೇರೆ ಯಾವ ದಾರಿ ಇದೆ? ಈ ಸ್ಟೋರಿ ನೋಡಿ.. 

ಸದ್ಯಕ್ಕೆ ನಟ ದರ್ಶನ್‌ಗೆ ಜೈಲುವಾಸ ಫಿಕ್ಸ್?

ಸುಪ್ರೀಂ ಕೋರ್ಟ್​ನಲ್ಲಿ ಬೇಲ್​ಗಾಗಿ ಅರ್ಜಿ ಸಲ್ಲಿಸಿದ್ದ ನಟ ದರ್ಶನ್ (Darshan Thoogudeepa) ಅವರಿಗೆ ನ್ಯಾಯಾದೀಶರು ದೊಡ್ಡ ಶಾಕ್ ಕೊಟ್ಟಿದ್ದಾರೆ. ಇನ್ನೊಂದು ವರ್ಷ ಜಾಮೀನು ಕೇಳಿಕೊಂಡು ಬರಲೇಬೇಡಿ ಅಂತ ಆದೇಶ ಕೊಟ್ಟಿದ್ದಾರೆ. ಸಾಲು ಸಾಲು ಕಾರಣ ಕೊಟ್ಟು ಬೇಲ್ ಕೊಡಿ ಅಂತ ದರ್ಶನ್ ಮನವಿ ಸಲ್ಲಿಸಿದ್ರೂ ನ್ಯಾಯದೇವತೆ ಅಸ್ತು ಅಂದಿಲ್ಲ. ಅಲ್ಲಿಗೆ 2027ರ ವರೆಗೂ ದರ್ಶನ್​ಗೇ ಜೈಲೇ ಗತಿ ಅನ್ನುವಂತೆ ಆಗಿದೆ. ಹಾಗಾದ್ರೆ ದಾಸನ ಮುಂದಿನ ದಾರಿ ಏನು..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಕಾಟೇರನ ಮನವಿಗೆ ಕರಗದ ನ್ಯಾಯದೇವತೆ..! ಇನ್ನೂ ಒಂದು ವರ್ಷ ದಾಸನಿಗಿಲ್ಲ ಬೇಲ್ ಭಾಗ್ಯ?

ಯೆಸ್, ರೇಣುಕಾಸ್ವಾಮಿ ಕೇಸ್​​ನಲ್ಲಿ ಎ2 ಆಗಿ ಪರಪ್ಪನ ಅಗ್ರಹಾರದಲ್ಲಿ ದಿನಗಳನ್ನ ಕಳೀತಾ ಇರೋ ದರ್ಶನ್, ಸುಪ್ರೀಂ ಕೋರ್ಟ್ ನಲ್ಲಿ ಬೇಲ್​ಗೆ ಮನವಿ ಸಲ್ಲಿಸಿದ್ರು. ಸುಪ್ರೀಂ ಕೋರ್ಟ್​ನಲ್ಲಿ ದರ್ಶನ್ ಪರ ವಾದ ಮಂಡಿಸಿದ ಖ್ಯಾತ ವಕೀಲ ಮುಕುಲ್ ರೊಹ್ಟಗಿ ಈ ಕೇಸ್​ನ ವಿಚಾರಣೆ ಬಹಳ ವಿಳಂಬವಾಗ್ತಾ ಇದೆ. ಸೋ ನನ್ನ ಕ್ಲೈಂಟ್ ವಿಚಾರಣೆಗೆ ತಪ್ಪದೇ ಹಾಜರಾಗ್ತಾರೆ. ಅವರೊಬ್ಬ ನಟ ಆಗಿದ್ದು, ಅವರಿಗೆ ಜಾಮೀನು ಕೊಟ್ಟರೆ ನಟನೆ ಮಾಡಿಕೊಂಡು ಇರ್ತಾರೆ ಅಂತ ವಾದ ಮಂಡಿಸಿದ್ರು. ಆದ್ರೆ ಕೋರ್ಟ್ ಒಂದು ವರ್ಷ ಸಮಯ ಕೊಡ್ತಿನಿ ಅಷ್ಟರಲ್ಲಿ ಮುಖ್ಯ ಸಾಕ್ಷಿಗಳ ವಿಚಾರಣೆ ಮುಗಿಯಲಿ ಆ ಬಳಿಕ ದರ್ಶನ್​ಗೆ ಬೇಲ್ ಕೊಡುವುದರ ಬಗ್ಗೆ ಮಾತನಾಡೋಣ ಅಂದುಬಿಟ್ಟಿದೆ.

ಅಲ್ಲಿಗೆ ಇಲ್ಲಿಂದ ಒಂದು ವರ್ಷ .. ಅಂದ್ರೆ 12 ತಿಂಗಳು ಅಂದ್ರೆ ಬರೊಬ್ಬರಿ 365 ದಿನಗಳು ದರ್ಶನ್ ಪಾಲಿಗೆ ಲಾಕ್ ಡೌನ್ ಫಿಕ್ಸ್ ಆಗಿಬಿಟ್ಟಿದೆ. ಸಾಕ್ಷಾತ್ ಸುಪ್ರೀಂ ಕೋರ್ಟ್ ಈ ತೀರ್ಪು ಕೊಟ್ಟಿದ್ರಿಂದ ದರ್ಶನ್​ಗೆ ಬೇರೆ ಆಯ್ಕೆಯೂ ಇಲ್ಲ.. ದಾರಿಯೂ ಇಲ್ಲ. ಸುಪ್ರೀಂ ಮೀರಿ ಇನ್ಯಾವ ಕೋರ್ಟ್ ತಾನೇ ಇದೆ ಸ್ವಾಮಿ.. ಸೋ ಇನ್ನೊಂದು ವರ್ಷ ದಾಸನಿಗೆ ಜೈಲುವಾಸ ಫಿಕ್ಸ್ ಆಗಿಬಿಟ್ಟಿದೆ.

ಬೇಲ್ ಕೇಳಿದ್ದೇ ತಪ್ಪಾಯ್ತಾ.. 365 ಡೇಸ್ ದಾಸ ಲಾಕ್..!

ಹೌದು, ಈ ಹಂತದಲ್ಲಿ ದರ್ಶನ್ ಬೇಲ್ ಕೇಳಿ ತಪ್ಪು ಮಾಡಿದ್ರಾ ಅನ್ನೋ ಚರ್ಚೆ ಕಾನೂನು ಪಂಡಿತರ ನಡುವೆ ಶುರುವಾಗಿದೆ. ಯಾಕಂದ್ರೆ ಈ ಹಿಂದೆ ದರ್ಶನ್​ಗೆ ಹೈಕೋರ್ಟ್ ನೀಡಿದ್ದ ಬೇಲ್​ನ ಇದೇ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. 2024ರ ಡಿಸೆಂಬರ್​ನಲ್ಲಿ ಬೇಲ್ ಪಡೆದುಕೊಂಡು 9 ತಿಂಗಳು ಹೊರಗಿದ್ದ ದರ್ಶನ್​ಗೆ ಸುಪ್ರೀಂ ಪೀಠ ಶಾಕ್ ಕೊಟ್ಟಿತ್ತು. ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಌಂಡ್ ಗ್ಯಾಂಗ್​ನ ಬೇಲ್ ರದ್ದು ಮಾಡಿ ಮತ್ತೆ ಜೈಲಿಗೆ ಕಳಿಸಿತ್ತು.

ಸೋ ಕಳೆದ ವರ್ಷ ಆಗಸ್ಟ್ ನಿಂದ ದರ್ಶನ್ ಬೇಲ್​ಗೆ ಅರ್ಜಿ ಸಲ್ಲಿಸೋ ಸಾಹಸ ಮಾಡಿರಲಿಲ್ಲ. ಆದ್ರೆ ಈ ಸಾರಿ ಧೈರ್ಯ ಮಾಡಿ ಬೇಲ್ ಕೇಳಿದ್ರು. ಆದ್ರೆ ಕೋರ್ಟ್ ಬರೊಬ್ಬರಿ ಒಂದು ವರ್ಷ ದಾಸನನ್ನ ಲಾಕ್ ಮಾಡಿಬಿಟ್ಟಿದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿನಿಮಾಗೆ ಕಥೆ ಮುಖ್ಯವೇ, ಸೀಕ್ವೆಲ್ ಮುಖ್ಯವೇ? ಇಲ್ಲಿದೆ ಕನ್ನಡ ಚಿತ್ರರಂಗದ ಹೊಸ ಟ್ರೆಂಡ್ ವಿಶ್ಲೇಷಣೆ!
Lo Naveena ಚಿತ್ರ ವಿಮರ್ಶೆ: ನವೀನ್ ಸಜ್ಜು ಅಭಿನಯದ ಭಾವನಾತ್ಮಕ ಕಥೆ ಹೇಗಿದೆ?