ಸೀಡ್ಸ್ ವೆಡ್ಡಿಂಗ್ ಕಾರ್ಡ್ ಇನ್ವಿಟೇಷನ್, ಗಮನ ಸೆಳೆಯುತ್ತಿರೋ ತರುಣ್ –ಸೋನಾಲ್ ಲಗ್ನ ಪತ್ರಿಕೆ!

Published : Jul 30, 2024, 02:03 PM IST
ಸೀಡ್ಸ್ ವೆಡ್ಡಿಂಗ್ ಕಾರ್ಡ್ ಇನ್ವಿಟೇಷನ್, ಗಮನ ಸೆಳೆಯುತ್ತಿರೋ ತರುಣ್ –ಸೋನಾಲ್ ಲಗ್ನ ಪತ್ರಿಕೆ!

ಸಾರಾಂಶ

ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ , ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ..ವಿಶೇಷ ಅಂದ್ರೆ ಮದುವೆ ಮುಗಿದ ನಂತ್ರ ಪತ್ರಿಕೆ ಏನ್ ಮಾಡೋದು ಅಂತ..

ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ (Tharun Sudhir)  ಹಾಗೂ ಸೋನಾಲ್ (Sonal Monteiro) ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ...ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ...

ಸಿನಿಮಾದಲ್ಲಿ ಸದಾ ಸರ್ಪ್ರೈಸ್ ಪ್ಲಾನ್ ಮಾಡಿ ಪ್ರೇಕ್ಷಕರನ್ನ ಖುಷಿ ಪಡಿಸೋ ನಿರ್ದೇಶಕ ತರುಣ್ ತಮ್ಮ ಮದುವೆ ಇನ್ವಿಟೇಷನ್ ಅನ್ನು ಸೂಪರ್ ಆಗಿಯೇ ಪ್ಲಾನ್ ಮಾಡಿದ್ದಾರೆ...ಸಾಮಾನ್ಯವಾಗಿ ಸೆಲಬ್ರೆಟಿಗಳು ಇನ್ವಿಟೇಷನ್ ಜೊತೆ ಒಂದು ಗಿಡಕೊಟ್ಟು ತಮ್ಮ ವಿವಾಹಕ್ಕೆ ಕರೆಯೋದು ಕಾಮನ್ .ಆದ್ರೆ ತರುಣ್ ಮತ್ತು ಸೋನಾಲ್ ತಮ್ಮ ವಿವಾಹ ಪತ್ರಿಕೆಯನ್ನ ಕಂಪ್ಲೀಟ್ ಆಗಿ ಪರಿಸರ ಸ್ನೇಹಿಯಾಗಿ ಮಾಡಿದ್ದಾರೆ...

ಸ್ಟಾರ್ ನಟಿ ಜೊತೆ ಏನನ್ನೋ ಹಂಚಿಕೊಳ್ಳಲು ನಾಚಿದ ಸಿದ್ಧಾಂತ್; ನೀನೊಬ್ಬ ಪುರುಷ ಅಂದ್ರಂತೆ ಅಪ್ಪ!

ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ , ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ..ವಿಶೇಷ ಅಂದ್ರೆ ಮದುವೆ ಮುಗಿದ ನಂತ್ರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂದ್ರ ಪತ್ರಿಕಯನ್ನ ಒಂದು ಮಣ್ಣಿನ ಪಾಟ್ ನಲ್ಲಿ ಹಾಕಿದ್ರೆ ಅದು ಮಣ್ಣಿನಲ್ಲಿ ಬೆರೆತು ಗಿಡ ಬೆಳೆಯುತ್ತೆ...

ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತ್ರ ಅದು ಮಣ್ಣು ಸೇರಿದ್ರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ...ಇನ್ನು ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ...ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಅಂತ ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ....

ಆ್ಯಂಕರ್​ ಅನುಶ್ರೀ ಬಗ್ಗೆ ಹೇಳೋದೇನೂ ಇಲ್ಲ, ರಾಜ್ ಬಿ ಶೆಟ್ಟಿ ಮಾತಿಗೆ ಏನಂತೀರಾ ನೋಡಿ; ಇದೆಂಥಾ ಮಾತುಕತೆ..!

ಇನ್ನು ಆಗಸ್ಟ್ 10 ಹಾಗೂ 11 ರಂದು ನಡೆಯಲಿರೋ ತರುಣ್ ಮತ್ತು ಸೋನಾಲ್ ಮದುವೆಗೆ ಈಗಾಗಲೇ ಸಖಲ ಸಿದ್ದತೆಗಳು ನಡೆದಿದೆ...ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಾಯಕಿಯ ಮದುವೆಗೆ ಇಡೀ ಚಿತ್ರರಂಗ ಸಾಕ್ಷಿ ಆಗಲಿದೆ...ಸದ್ಯ ಮದುವೆ ಇನ್ವಿಟೇಷನ್ ನಲ್ಲಿ ಸ್ಪೆಷಲ್ ಅನ್ನಿಸ್ತಿರೋ ಈ ಜೋಡಿ ಮದುವೆಯಲ್ಲಿ ಏನೆಲ್ಲಾ ಸರ್ ಪ್ರೈಸ್ ಪ್ಲಾನ್ ಮಾಡಿದೆ ಅಂತ ಕಾದು ನೋಡಬೇಕಿದೆ.....

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

OTT Release This Month: ಲವ್‌ಸ್ಟೋರಿ, ಸಸ್ಪೆನ್ಸ್‌, ಫೀಲ್‌ ಗುಡ್‌ ಸಿನಿಮಾಗಳಿವು.. ವೀಕ್ಷಕರಿಗಂತೂ ಹಬ್ಬ..!
Rishab Shetty Birthday: ಗ್ರಾಂಡ್‌ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ