
ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಸಿನಿಮಾ ಜೊತೆಗೆ ಚಾಟ್ ಶೋ ಕೂಡ ನಡೆಸಿಕೊಡುತ್ತಾರೆ. ಅನ್‌ಸ್ಟಾಪಬಲ್ ಎನ್ನುವ ಶೋ ನಡೆಸಿಕೊಡುತ್ತಿದ್ದರು. ಇದೀಗ ಬಾಲಯ್ಯ ಮತ್ತೆ ಅನ್‌ಸ್ಟಾಪಬಲ್ ಸೀಸನ್ 2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇದಾಗ ಉದ್ಘಾಟನೆ ಶೋನ ಪ್ರೋಮೋ ರಿಲೀಸ್ ಮಾಡಲಾಗಿದೆ. ಮೊದಲ ಸಂಚಿಕೆಯಲ್ಲಿ ತೆಲುಗು ನಟ ವಿಶ್ವಕ್ ಸೇನ್ ಮತ್ತು ಸಿದ್ಧು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಶೋನಲ್ಲಿ ಬಾಲಯ್ಯ ತನ್ನ ಕ್ರಶ್ ಯಾರೆಂದು ರಿವೀಲ್ ಮಾಡಿದ್ದಾರೆ. ವಿಶ್ವಕ್ ಮತ್ತು ಸಿದ್ಧು ಬಾಲಯ್ಯ ಅವರಿಗೆ ನಿಮ್ಮ ಕ್ರಶ್ ಯಾರೆಂದು ಕೇಳಿದರು. ಇದಕ್ಕೆ ಉತ್ತರಿಸಿದ ಬಾಲಯ್ಯ ರಶ್ಮಿಕಾ ಮಂದಣ್ಣ ಎಂದು ಹೇಳಿದರು. ರಶ್ಮಿಕಾ ತೆಲುಗಿನಲ್ಲಿ ಮಿಂಚಿ ಸದ್ಯ ಬಾಲಿವುಡ್‌ಗೆ ಹಾರಿದ್ದಾರೆ. ತೆಲುಗು, ತಮಿಳು ಜೊತೆಗೆ ಬಾಲಿವುಡ್‌ನಲ್ಲೂ ನಟಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ರಶ್ಮಿಕಾ ಮಂದಣ್ಣ ಎಂದರೆ ತೆಲುಗು ಸ್ಟಾರ್ ಬಾಲಯ್ಯ ಅವರಿಗೂ ಇಷ್ಟ. ಈ ಬಗ್ಗೆ ಸ್ವತಃ ಬಲಯ್ಯ ಅವರೇ ಬಹಿರಂಗ ಪಡಿಸಿದ್ದಾರೆ.
ಅಂದಹಾಗೆ ಬಾಲಯ್ಯ ಸದ್ಯ ನಡೆಸಿಕೊಡುತ್ತಿರುವ ಅನ್‌ಸ್ಟಾಪಬಲ್ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತೆಲುಗು ಒಟಿಟಿ ಆಹಾದಲ್ಲಿ ಈ ಶೋ ಸ್ಟ್ರೀಮಿಂಗ್ ಆಗಲಿದೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು ಸಂಪೂರ್ಣ ಸಂಚಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಬಾಲಯ್ಯ ಸಿನಿಮಾ ವಿಚಾರಕ್ಕೆ ಬರುವುದಾರೆ ಕೊನೆಯದಾಗಿ ಅಖಂಡ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಬಾಲಯ್ಯ 107ನೆೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಆಗಲೇ ಚಿತ್ರೀಕರಣ ಪ್ರಾರಂಭವಾಗಿದೆ.
ಮಲಗಿದ್ದ ಕಂದನನ್ನು ಹೊಡೆದು ಎಬ್ಬಿಸಿದ ಬಾಲಯ್ಯ; ವೀಡಿಯೋ ವೈರಲ್
ರಶ್ಮಿಕಾ ಮಂದಣ್ಣ ಬಗ್ಗೆ
ಇನ್ನು ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ನಟನೆಯ ಹಿಂದಿಯ ಮೊದಲ ಸಿನಿಮಾ ಗುಡ್ ಬೈ ಈಗಾಗಲೇ ರಿಲೀಸ್ ಆಗಿದೆ. ಬಿಗ್ ಬಿ ಅಮಿತಾಬ್ ಜೊತೆ ನಟಿಸಿದ್ದಾರೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ರಶ್ಮಿಕಾ ಈಗಾಗಲೇ ಹಿಂದಿಯಲ್ಲಿ ಮಿಶನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದು ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಸದ್ಯ ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ಟೈಗರ್ ಶ್ರಾಪ್ ಜೊತೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ತೆಲುಗು ಸ್ಟಾರ್ ಬಾಲಯ್ಯ ಸಿನಿಮಾಗೆ ಕನ್ನಡತಿ ಶ್ರೀಲೀಲಾ ನಾಯಕಿ
ದಕ್ಷಿಣ ಭಾರತದಲ್ಲಿ ಪುಷ್ಪ-2 ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಮೊದಲ ಭಾಗದ ದೊಡ್ಡ ಮಟ್ಟದ ಸಕ್ಸಸ್ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.