ತಮ್ಮಿಬ್ಬರ ಮದುವೆಗೆ ಕಾರಣರಾದ ದರ್ಶನ್ ಅವರು ಮದುವೆಗೆ ಬರಲಿಲ್ಲ ಎನ್ನುವ ಬೇಸರದಿಂದ ತರುಣ್ ಮತ್ತು ಸೋನಲ್ ಭಾವುಕರಾಗಿ ಹೇಳಿದ್ದೇನು?
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಇಂದು ಬೆಂಗಳೂರಿನ ನಡೆದಿದೆ. ನಿನ್ನೆ ಅಂದ್ರೆ ಆಗಸ್ಟ್ 10ರಂದು ರಿಸೆಪ್ಷನ್ ನಡೆದಿತ್ತು. ಇಂದು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಬೆಳಗ್ಗೆ 10:30 ರಿಂದ11:00 ಗಂಟೆಗೆ ನಡೆದ ಧಾರೆ ಮುಹೂರ್ತದಲ್ಲಿ ಸೋನಲ್ಗೆ ತಾಳಿ ಕಟ್ಟಿದ ಸುಧೀರ್ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದ್ದು, ಸೋನಲ್ ಮೊಂಥೆರೋ ಅವರ ಹುಟ್ಟೂರು ಮಂಗಳೂರಿನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಮದುವೆ ಮುಂದಿನ ತಿಂಗಳು ನಡೆಯಲಿದೆ. ಇಂದು ಸೋನಲ್ ಅವರ ಹುಟ್ಟುಹಬ್ಬವಾಗಿರುವುದು ಕೂಡ ವಿಶೇಷವೇ. ಈ ವಿವಾಹಕ್ಕೆ ಕನ್ನಡದ ಸ್ಟಾರ್ ಕಲಾವಿದರ ದಂಡು, ರಾಜಕೀಯ ಗಣ್ಯರು ಭಾಗಿಯಾದರು. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿತ್ತು. ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪ ನಿರ್ಮಾಣ ಮಾಡಲಾಗಿತ್ತು. ಕಲಾಂಜನಿ ವೆಡ್ಡಿಂಗ್ಸ್ ನ ಕಿರಣ್ ನೇತೃತ್ವದಲ್ಲಿ ಧಾರೆ ಮುಹೂರ್ತದ ಸೆಟ್ ಹಾಕಲಾಗಿತ್ತು.
ಗಣ್ಯಾತಿಗಣ್ಯರು ಬಂದು ಶುಭ ಹಾರೈಸಿದ್ದರೂ, ಜೈಲಿನಲ್ಲಿ ಇರೋ ದರ್ಶನ್ ಒಬ್ಬರು ಬಂದಿಲ್ಲ ಎನ್ನುವ ಕೊರಗು ಈ ಜೋಡಿಗೆ! ಇದೇ ಕಾರಣಕ್ಕೆ ಮದುವೆಯಾದ ಬಳಿಕ ತರುಣ್ ಅವರು ಮೊದಲು ನೆನಪಿಸಿಕೊಂಡಿದ್ದೇ ದರ್ಶನ್ ಅವರನ್ನು. ದರ್ಶನ್ ಅವರನ್ನು ನೆನೆದು ಮದುಮಕ್ಕಳು ಭಾವುಕರಾದರು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಮದುವೆಯೇ ಆಗುವ ಯೋಚನೆಯೇ ಇಲ್ಲ ತರುಣ್ ಅವರನ್ನು ಸೋನಲ್ಗೆ ಪರಿಚಯಿಸಿದ್ದೇ ದರ್ಶನ್. ಕಾಟೇರಾ ಸಿನಿಮಾದ ಸಂದರ್ಭದಲ್ಲಿ ಈ ಇಬ್ಬರ ಪರಿಚಯವನ್ನು ದರ್ಶನ್ ಮಾಡಿಸಿದ್ದರು. ಅಂದರೆ, ಈ ಜೋಡಿಯ ಪ್ರೀತಿಯ ಗಿಡಕ್ಕೆ ನೀರು ಹಾಕಿ ಬೆಳೆಸಿದ್ದು ದರ್ಶನ್. ಇವರಿಬ್ಬರನ್ನೂ ಮದುವೆ ಮಾಡಿಸಿದ್ದೂ ಅವರೇ. ಆದರೆ ಕಾರಣೀಕರ್ತರಾದವರೇ ಮದುವೆಗೆ ಬರಲಿಲ್ಲ ಎನ್ನುವ ಕೊರಗು ಈ ಜೋಡಿಯದ್ದು.
undefined
ಸದ್ಯ ಸೋನಲ್ ಎಂಬ ಗೊಂಬೆ ನಮ್ ಕೈಯಲ್ಲಿದ್ದಾಳಷ್ಟೇ... ಸೊಸೆ ಕುರಿತು ತರುಣ್ ಅಮ್ಮ ಹೇಳಿದ್ದೇನು?
ಅಷ್ಟಕ್ಕೂ ದರ್ಶನ್ ಹಾಗೂ ತರುಣ್ ಇಬ್ಬರ ಸಂಬಂಧ ಸಹೋದರರು ಇದ್ದಂತೆ. ಲಗ್ನ ಪತ್ರಿಕೆ ಬರೆಸುವ ಮುನ್ನವೇ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದುವೆ ಮಾಡ್ಕೊ ಎಂದು ದರ್ಶನ್ ಅವರೇ ಹೇಳಿದ್ರು. ದರ್ಶನ್ ಅವ್ರ ಅನುಪಸ್ಥಿತಿಯ ಬೇಸರ ಇದೆ ಎಂದು ಹೇಳಿತ್ತಾ ತರುಣ್ ಸುಧೀರ್ ಭಾವುಕರಾದರು. ಮದುವೆಯ ಸಮಯದಲ್ಲಿ ದರ್ಶನ್ ಬಿಡುಗಡೆಯಾಗುತ್ತದೆ ಎನ್ನುವ ಭರವಸೆಯಲ್ಲಿದ್ದರು ತರುಣ್. ಆದರೆ ಕೊನೆಗೂ ಆ ಆಸೆ ಈಡೇರಲೇ ಇಲ್ಲ ಎನ್ನುವ ನೋವು ಅವರದ್ದು.
ಇದೇ ವೇಳೆ ಜೈಲಿಗೆ ಹೋಗಿ ಆಶೀರ್ವಾದ ತೆಗೆದುಕೊಂಡು ಬರುವುದಾಗಿ ಸೋನಲ್ ಹೇಳಿದ್ದಾರೆ. ಮಾಧ್ಯಮಗಳಿಗೆ ರಿಯಾಕ್ಷನ್ ಕೊಟ್ಟಿರುವ ಸೋನಲ್, ನಮ್ಮ ಮದುವೆಗೆ ಕಾರಣರಾಗಿದ್ದು, ದರ್ಶನ್ ಸರ್. ಆದ್ದರಿಂದ ಅವರ ಆಶೀರ್ವಾದ ಪಡೆಯುವುದು ನಮ್ಮ ಕರ್ತವ್ಯ ಎಂದಿದ್ದಾರೆ. ನಮ್ಮಿಬ್ಬರ ಪರಿಚಯ ರಾಬರ್ಟ್ ಸಿನಿಮಾದ ಟೈಮ್ ನಲ್ಲಿ ಆಗಿತ್ತು. ಆದರೆ ಪ್ರೀತಿ ಶುರುವಾಗಿದ್ದು ಆಗಲ್ಲ. 2003ರಿಂದ ನಮ್ಮಿಬ್ಬರ ನಡುವೆ ಬಾಂಡಿಂಗ್ ಶುರುವಾಗಿದ್ದು ಕಾಟೇರ ಶುರುವಾಗಿದ್ದಾಗ. ಇದಕ್ಕೆ ನೀರೆರೆದು ಪೋಷಿಸಿದವರು ದರ್ಶನ್ ಎಂದರು.
ತರುಣ್-ಸೋನಲ್ ಮದುವೆಗೆ ಮುನ್ನ ನಟಿಯ ಭರ್ಜರಿ ಬ್ಯಾಚುಲರ್ ಪಾರ್ಟಿ ಹೇಗಿತ್ತು ನೋಡಿ...!