
ಕನ್ನಡ ಚಿತ್ರರಂಗದ ಮೂವರು ಬ್ಯೂಟಿಫುಲ್, ಯಂಗ್, ಸ್ಮಾರ್ಟ್, ಎನರ್ಜಿಟಿಕ್ ನಟಿಯರು ಒಟ್ಟಾಗಿರುವ ಹಳೆ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ತಾರಾ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ದಿನಚರಿ ಹಾಗೂ ಸಿನಿಮಾಗಳಿಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳ ಪೈಕಿ ಈ ಫೋಟೋನೂ ಎಂದು ಎನ್ನಲಾಗಿದೆ.
ಮೋಹಕ ತಾರೆ ರಮ್ಯಾ, ಎವರ್‌ಗ್ರೀನ್ ನಟಿ ತಾರಾ ಹಾಗೂ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಒಟ್ಟಾಗಿ ನಿಂತಿದ್ದಾರೆ. 'ನಾನು ರಾಧಿಕಾ ಹಾಗೂ ರಮ್ಯಾ ಜೊತೆಗಿರುವ ಫೋಟೋ,'ಎಂದು ತಾರಾ ಬರೆದುಕೊಂಡಿದ್ದಾರೆ. ಫೋಟೋ ನೋಡಿದರೆ ಬಹಳ ವರ್ಷಗಳ ಹಳೆಯದು ಎನ್ನಬಹುದು. ಏಕೆಂದರೆ ರಮ್ಯಾ ಯಾರ ಕೈಗೂ ಸಿಗದೆ ದಿಲ್ಲಿಯಲ್ಲಿದ್ದಾರೆ, ಸಿನಿಮಾ ರಾಜಕೀಯ ಅಂತ ತಾರಾ ಬ್ಯುಸಿಯಾಗಿದ್ದಾರೆ ಹಾಗೂ ರಾಧಿಕಾ ಮತ್ತೊಂದು ಲೋಕದಲ್ಲಿದ್ದಾರೆ.
ಅರಣ್ಯ ಅಭಿವೃದ್ಧಿ ಅಧ್ಯಕ್ಷೆಯಾಗಿ ನಟಿ ತಾರಾ ಅನುರಾಧ!
ನೆಟ್ಟಿಗರ ಕಾಮೆಂಟ್:
ಮೂವರಿಗೂ ಅವರದ್ದೇ ಆದ ಸಪರೇಟ್ ಆಡಿಯನ್ಸ್ ಇದ್ದಾರೆ. ಇವರೇನಾದರೂ ಒಟ್ಟಿಗೆ ಸಿನಿಮಾ ಮಾಡಿದರೆ 100 ದಿನವಲ್ಲ 300 ದಿನ ಬೇಕಾದರೂ ಹಿಟ್ ಆಗುತ್ತೆ ಎಂದು ಅಭಿಮಾನಿಗಳು ಹೇಳುತ್ತಾರೆ. 'ನಿಮಗೆ ದರ್ಶನ್ ಬೇಕಾ, ಸುದೀಪ್ ಬೇಕಾ?' ಎಂದರೆ ಮತ್ತೊಬ್ಬರು 'ಎಲ್ಲರೂ ಇಷ್ಟೊಂದು ಯಂಗ್ ಆಗಿ ಇದ್ದೀರಾ, ಈ ಫೋಟೋ ಎಷ್ಟು ವರ್ಷಗಳ ಹಳೆಯದು?' ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.