ಈಗ ಎಲ್ಲ ಕಡೆ ಸಪ್ತಸಾಗರದಾಚೆ ಎಲ್ಲೋ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ದೇ ಮಾತು. ರಕ್ಷಿತ್ ಶೆಟ್ಟಿ ರುಕ್ಮಿಣಿಗೆ ಸೆಟ್‌ನಲ್ಲಿ ಕಿಸ್ ಮಾಡಿದ್ರಾ? ಯಾಕೆ?
ಸಿನಿಮಾದಲ್ಲಿ ಚುಂಬನ ಅನ್ನೋದು ಬಹಳ ಕಾಮನ್. ಮೊನ್ನೆ ರಿಲೀಸ್ ಆಗಿ ಭರ್ಜರಿ ಸಕ್ಸಸ್ ಕಾಣ್ತಿರೋ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದ ಮೋಸ್ಟ್ ರೊಮ್ಯಾಂಟಿಕ್ ಕಪಲ್ ಮನು ಮತ್ತು ಪುಟ್ಟಿ. ಈ ಪಾತ್ರ ಮಾಡಿರೋ ರಕ್ಷಿತ್ ಮತ್ತು ರುಕ್ಮಿಣಿ ನಡುವೆ ಸಮ್ ಥಿಂಗ್ ಸ್ಪೆಷಲ್ ಇದೆ ಅನ್ನೋ ಮಾತು ಕೇಳಿಬರ್ತಿದೆ. ಈ ಜೋಡಿ ಒಂದಾದ್ರೆ ಬಹಳ ಚೆನ್ನಾಗಿರುತ್ತೆ ಅನ್ನೋ ಮಾತುಗಳೂ ಕೇಳಿಬರುತ್ತಿದೆ. ಏಕೆಂದರೆ ಆನ್‌ಸ್ಕ್ರೀನ್ ಇವರಿಬ್ಬರ ಕೆಮೆಸ್ಟ್ರಿ ಆ ಲೆವೆಲ್‌ನಲ್ಲಿ ಕ್ರೇಜ್ ಹುಟ್ಟಿಹಾಕಿದೆ. ಅಷ್ಟಕ್ಕೂ ಸಪ್ತಸಾಗರದಾಚೆ ಎಲ್ಲೋ ಈ ಜೋಡಿಯ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಇವರಿಬ್ಬರ ಫಸ್ಟ್ ಲುಕ್ ರಿಲೀಸ್ ಆದಾಗಲೇ ಬಹಳ ಮಂದಿ ಈ ಜೋಡಿಯನ್ನು ಬಹಳ ಮೆಚ್ಚಿಕೊಂಡಿದ್ದರು. ಸಿನಿಮಾ ನೋಡಿದ ಮೇಲೆ ಆ ಆರಾಧನೆ ಹತ್ತು ಪಟ್ಟು ಹೆಚ್ಚಾಗಿದೆ. ಈ ಜೋಡಿ ರಿಯಲ್ ಲೈಫಲ್ಲಿ ಒಂದಾಗಬೇಕು ಅಂತ ಅಭಿಮಾನಿಗಳು ಕೇಳಿಕೊಳ್ತಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ' ಕಣ್ಣೀರು, ವಿರಹದಲ್ಲಿ ನಡೆಯೋ ಕಥೆ. ಮನು ಎಂಬ ಶ್ರೀಮಂತರ ಮನೆಯ ಡ್ರೈವರ್ ಮತ್ತು ಪ್ರಿಯಾ ಎಂಬ ಹಪ್ಪಳ ಸಂಡಿಗೆ ಮಾಡಿ ಜೀವನ ಸಾಗಿಸುವ ಮನೆಯ ಮಗಳು ಈ ಇಬ್ಬರು ಹೇಗೆ ಲವ್ವಲ್ಲಿ ಬಿದ್ದರು ಅನ್ನೋದನ್ನು ಸಿನಿಮಾದಲ್ಲಿ ಎಲ್ಲೂ ಹೇಳಿಲ್ಲ. ಬದಲಿಗೆ ಲವ್ವಲ್ಲಿ ಬಿದ್ದ ಮೇಲೆ ಅವರು ಹೇಗಿದ್ದರು, ಹೇಗಾದರು, ಪರಿಸ್ಥಿತಿ ಅನ್ನೋದು ಅವರಿಬ್ಬರ ಲೈಫಲ್ಲಿ ಹೇಗೆಲ್ಲ ಆಟ ಆಡಿತು, ಕೊನೆಗೂ ಅವರಿಬ್ಬರ ಪ್ರೀತಿ ಉಳೀತಾ ಅಥವಾ ಇಬ್ಬರೂ ಪರಿಸ್ಥಿತಿಯ ಕೈ ಗೊಂಬೆಗಳಾಗಿ ಲವ್ವಿಗೆ ಗುಡ್‌ಬೈ ಹೇಳಿದ್ರಾ ಅನ್ನೋದು ಸಿನಿಮಾ ಕಥೆ. ಇದರಲ್ಲಿ ಒಂದು ಅನ್‌ಕಂಡೀಶನ್ಡ್ ಲವ್ ಹೇಗಿರುತ್ತೆ ಅನ್ನೋದರ ಅನುಭವ ಈ ಸಿನಿಮಾ ನೋಡಿದವರಿಗೆ ಆಗುತ್ತಿರುತ್ತೆ. ಕನಸನ್ನು ಬೇಗ ನನಸು ಮಾಡಿಕೊಳ್ಳಲು ಹೋಗುವ ಹುಡುಗನ ಕಥೆಯೂ ಇದರಲ್ಲಿ ಸಿಗುತ್ತೆ, ಹಾಗೇ ತನ್ನ ಹುಡುಗ ಮನುವನ್ನು ಪ್ರಿಯಾ ಕಾಪಾಡಿಕೊಳ್ಳೋದಕ್ಕೆ ಪಡುವ ಎಲ್ಲ ಕಷ್ಟಗಳನ್ನೂ ಬಹಳ ಪರಿಣಾಮಕಾರಿಯಾಗಿ ತೆರೆ ಮೇಲೆ ತಂದಿದ್ದಾರೆ.
ಮದುವೆ ಮುಂಚಿನ ಸೆಕ್ಸ್, ಕನ್ಯತ್ವ ಕಳೆದುಕೊಳ್ಳುವ ವಯಸ್ಸಿನ ಕುರಿತು ನಟಿ ಅತುಲ್ಯಾ ಬೋಲ್ಡ್ ಹೇಳಿಕೆ!
ಇದೊಂದು ಸ್ಲೋ ರನ್ನಿಂಗ್ ಸಿನಿಮಾ (Slow Running Movie) ಅನ್ನುತ್ತಲೇ ವೀಕ್ ಡೇಸ್‌ನಲ್ಲೂ ಸಿನಿಮಾ ಹೌಸ್‌ಫುಲ್ (housefull) ಪ್ರದರ್ಶನ ಕಾಣ್ತಿರೋದು ಈ ಸಿನಿಮಾ ಸಕ್ಸಸ್‌ಗೆ ಕಾರಣ. ಸಿನಿಮಾ ಸಕ್ಸಸ್ ಆದಾಗ ಸಿನಿಮಾದ ನಟ, ನಟಿಯರೂ ಫೇಮಸ್ ಆಗಲೇ ಬೇಕಲ್ವಾ. ಹಾಗೇ ರುಕ್ಮಿಣಿ ಮತ್ತು ರಕ್ಷಿತ್ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಇರೋದು ಕೆಲವೇ ಕೆಲವು ರೊಮ್ಯಾಂಟಿಕ್ ಸೀನ್‌ಗಳು (Romantic Scenes). ಅದರಲ್ಲೊಂದು ಕಿಸ್ಸಿಂಗ್ ಸೀನ್ (Kissing Scene). ಈ ಸೀನ್ ನೋಡಿ ಈ ಬಗ್ಗೆ ಯಾರೋ ಒಬ್ರು ರಕ್ಷಿತ್ ಶೆಟ್ಟಿ ಅವರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಕೆಂಪು ಕೆಂಪಾದ ಮುಖದ ತುಂಬ ನಾಚಿಕೆಯ ನಗುವನ್ನು ನಿಯಂತ್ರಿಸಲಾಗದ ರಕ್ಷಿತ್ ಶೆಟ್ಟಿ ವೀಡಿಯೋ ಎಲ್ಲೆಡೆ ವೈರಲ್ (viral) ಆಗ್ತಿದೆ. 'ಸಿನಿಮಾದಲ್ಲಿ ಅವರಿಬ್ಬರೂ ಕಪಲ್ಸ್ ಅಲ್ವಾ? ಅದಕ್ಕೆ ಕಿಸ್ಸಿಂಗ್ ಸೀನ್ ಇತ್ತು' ಅಂತೇನೋ ಹೇಳಿ ಮತ್ತೇನೂ ಮಾತನಾಡಲು ಸಾಧ್ಯವಾಗದೇ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಹಾಗೆ ನೋಡಿದರೆ ರಕ್ಷಿತ್‌ಗೆ ಒಳಗೊಳಗೇ ರುಕ್ಮಿಣಿ ಮೇಲೆ ಲವ್ವಾದ ಹಾಗಿದೆ ಅಂತ ಫ್ಯಾನ್ಸ್ (fans) ಸೋಷಿಯಲ್ ಮೀಡಿಯಾದಲ್ಲಿ ಮಾತಾಡಿಕೊಳ್ತಿದ್ದಾರೆ.
ಅದಕ್ಕೆ ಸರಿಯಾಗಿ ಕೆಲವೊಂದು ಸಂದರ್ಶನಗಳಲ್ಲೂ ರಕ್ಷಿತ್ ನಂಗೆ ಅವಳ ಸ್ಮೈಲ್ (smile) ಬಹಳ ಇಷ್ಟ ಅಂದಿದ್ದಾರೆ. ಮತ್ತೊಂದು ಕಡೆ ಐ ಲೈಕ್ ಯೂ (I like you) ಅಂತ ನೇರವಾಗಿ ರುಕ್ಮಿಣಿಗೆ ಹೇಳಿದ್ದಾರೆ. ಸಡನ್ನಾಗಿ ಹಾಗಂದಾಗ ಏನು ಹೇಳಲೂ ತೋಚದೇ ರುಕ್ಮಿಣಿ ನಕ್ಕಿದ್ದಾರೆ. ಈ ಸೀನ್ ಅನ್ನೂ ಜನ ಇಷ್ಟಪಟ್ಟಿದ್ದಾರೆ. ರಶ್ಮಿಕಾಳಿಂದ ಹೋದ ಪ್ರೀತಿ ರುಕ್ಮಿಣಿಯಿಂದ ಬರುತ್ತಾ ಅನ್ನೋದು ಸದ್ಯದ ಪ್ರಶ್ನೆ. ಅದಕ್ಕೆ ಉತ್ತರವನ್ನು ಈ ಜೋಡಿಯೇ ಕೊಡಬೇಕು.
ಅಣ್ಣ ಚಿರು ಸಮಾಧಿಯಲ್ಲಿ ಮಲಗಿದ ಧ್ರುವ ಸರ್ಜಾ; ವಿಡಿಯೋ ವೈರಲ್