14 ವರ್ಷಗಳಿಂದ ಭೇಟಿ ಮಾಡಲು ಕಾಯುತ್ತಿದ್ದ ಸುದೀಪ್; ಸಹಾಯ ಮಾಡಲು ಮುಂದಾದ ದರ್ಶನ್!

By Vaishnavi Chandrashekar  |  First Published Sep 9, 2023, 11:39 AM IST

ಕೊನೆಗೂ ನೆಚ್ಚಿನ ನಟನನ್ನು ಭೇಟಿ ಮಾಟಿದ ಸುದೀಪ್. ಸಂಕಷ್ಟದಲ್ಲಿ ಸಿಲುಕಿರುವ ಅಭಿಮಾನಿಗೆ ಸಹಾಯ ಮಾಡಿದ ದಾಸ..... 


ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ರಿಯಲ್ ಲೈಫ್‌ನಲ್ಲೂ ಹೀರೋನೇ. ಹೀಗಂತೆ ಸುಮ್ಮನೆ ಹೇಳುತ್ತಿಲ್ಲ ತಾವು ಮಾಡುತ್ತಿರುವ ಸಮಾಜ ಸೇವೆಗಳ ಮೂಲಕ ಈ ಮಾತುಗಳನ್ನು ರಿಯಲ್ ಸೆಲೆಬ್ರಿಟಿಗಳ ಬಾಯಿಯಿಂದ ಕೇಳಿ ಬರುತ್ತದೆ. ಇತ್ತೀಚಿಗೆ ನಡೆದ ಘಟನೆ ಬೆಳಕಿಗೆ ಬಂದಿದೆ... 

ಹೌದು! ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅಭಿಮಾನಿ ಸುದೀಪ್ ಆಸೆ ಈಡೇರಿಸಿದ್ದಾರೆ. ಸುಮಾರು 14 ವರ್ಷಗಳಿಂದ ಭೇಟಿ ಮಾಡಬೇಕು ಎಂದು ಕಾಯುತ್ತಿದ್ದರು ಕಾದು ಕಾದು ಖಿನ್ನತೆಗೂ ಜಾರಿದ್ದರು ಎನ್ನಲಾಗಿತ್ತು.ಈಗ ಅವರನ್ನು ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೊಂದು ಘಟನೆ ಆದರೆ ಮತ್ತೊಂದು ಘಟನೆ ಆದರ್ಶ್‌ನ ಭೇಟಿ ಮಾಡುವುದು. ರಕ್ಷಾಬಂಧನ್ ಸಂಭ್ರಮದಲ್ಲಿದ್ದ ದರ್ಶನ್‌ನ ಆದರ್ಶ್‌ ಎನ್ನುವ ವ್ಯಕ್ತಿ ಭೇಟಿ ಮಾಡುತ್ತಾರೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ ಆಗ ತಿಳಿಯುತ್ತದೆ ಆದರ್ಶ್‌ ಕಿಡ್ನಿ ಕಳೆದುಕೊಂಡು ತುಂಬಾ ಕಷ್ಟ ಪಡುತ್ತಿದ್ದಾರೆಂದು ತಕ್ಷಣವೇ ಸಹಾಯ ಮಾಡಲು ಮುಂದಾಗಿ ಈ ಬಗ್ಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. 

Tap to resize

Latest Videos

ಭೂಪತಿ- ಶ್ವೇತಾ ಕಿತ್ತಾಟಕ್ಕೆ ಬ್ರೇಕ್: ಇನ್ಮುಂದೆ ಲಕ್ಷಣ ಸೀರಿಯಲ್ ಬರಲ್ಲ?

'ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಆದರ್ಶ್. ನಾನು ದರ್ಶನ್ ಅವರ ಅಭಿಮಾನಿ. ನನ್ನ ಎರಡೂ ಕಿಡ್ನಿ ಫೇಲ್ಯೂರ್ ಅಗಿತ್ತು. ದರ್ಶನ್ ಸರ್‌ನ ಭೇಟಿ ಮಾಡುವ ಆಸೆ ಇತ್ತು. ನಾಗರಾಜ್ ಅಣ್ಣನನ್ನು ಕೇಳಿಕೊಂಡೆ. ಅವರನ್ನು ಭೇಟಿ ಮಾಡಿಸಿದರು. ಸಹಾಯ ಮಾಡಿದರು. ದರ್ಶನ್ ಸರ್ ಹಾಗೂ ಗೋವಿಂದಣ್ಣನಿಗೂ ಧನ್ಯವಾದಗಳು' ಎಂದು ಸಹಾಯ ಪಡೆದ ಆದರ್ಶ್‌ ವಿಡಿಯೋ ಮೂಲಕ ವಂದನೆಗಳನ್ನು ತಿಳಿಸಿದ್ದಾರೆ. 

ದರ್ಶನ್ ಫೋಸ್ಟ್‌:
ದರ್ಶನ್ ಶಾಲೆಗೆ ಹೋಗುವಾಗ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ತಮಗೆ ಪರಿಚಯವಿರುವ ಪ್ರತಿಯೊಬ್ಬರನ್ನೂ ಈಗಲೂ ನೆನಪಿಸಿ ಕೊಳ್ಳುತ್ತಾರೆ, ಸಾಧ್ಯವಾದರೆ ಭೇಟಿಯೂ ಮಾಡುತ್ತಾರೆ.  ಮಂತ್ರಾಲಯದಿಂದ ಹಿಂದಿರುಗುವ ಮಾರ್ಗದಲ್ಲಿ ರಿಯಲ್ ಸಾರಥಿಯೊಬ್ಬರನ್ನು ಭೇಟಿ ಮಾಡಿದ್ದಾರೆ.

ದಯವಿಟ್ಟು ಡವ್ ಮಾಡ್ಬೇಡಿ; ಸೀರಿಯಲ್ ಆದ್ಮೇಲೂ ಗೀತಾ-ವಿಜಿ ಸುತ್ತಾಟ, ಫೋಟೋ ವೈರಲ್

'ರಿಯಲ್ ಸಾರಥಿಯನ್ನು ಭೇಟಿ ಮಾಡಿದ ರಿಯಲ್ ಸಾರಥಿ. ನಮ್ಮ ಶಾಲೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಚಲಾಯಿಸುತ್ತಿದ್ದ ರಿಯಲ್ ಸಾರಥಿಯನ್ನು ಇಂದು ಭೇಟಿ ಮಾಡಿದೆ. 80ನೇ ಹುಟ್ಟುಹಬ್ಬದ ಪ್ರಯುಕ್ತ ಶುಭ ಹಾರೈಸಿ, ಆಶೀರ್ವಾದ ಪಡೆದು ಬಂದೆ,' ಎಂದು ದರ್ಶನ್ ಬರೆದುಕೊಂಡಿದ್ದಾರೆ.ದರ್ಶನ್ ಈ ಸರಳತೆ ಗುಣಗಳೇ ಅಭಿಮಾನಿಗಳಿಗೆ ಇಷ್ಟವಾಗುವುದು.

click me!