Meghana Raj ಮಗನನ್ನು ಬಿಟ್ಟು ಮೋಜು-ಮಸ್ತಿ ಮಾಡ್ತಿದ್ದಾಳೆ ಎಂದವರಿಗೆ ಸುಂದರ್‌ ರಾಜ್‌ ತಿರುಗೇಟು

Published : Nov 17, 2022, 10:08 AM IST
Meghana Raj ಮಗನನ್ನು ಬಿಟ್ಟು ಮೋಜು-ಮಸ್ತಿ ಮಾಡ್ತಿದ್ದಾಳೆ ಎಂದವರಿಗೆ ಸುಂದರ್‌ ರಾಜ್‌ ತಿರುಗೇಟು

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಸುಂದರ್ ರಾಜ್‌.....ಯಾಕೀ ಮಾತು? 

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್‌ ಕೆಲವು ದಿನಗಳ ಹಿಂದೆ ಸ್ನೇಹಿತರ ಜೊತೆ ಥೈಲ್ಯಾಂಡ್‌ ಪ್ರವಾಸದಲ್ಲಿದ್ದರು. ಲೇಡಿಸ್‌ ಟ್ರಿಪ್‌ ಹೇಗಿದೆ ಏನೆಲ್ಲಾ ಮಾಡಿದ್ದರು ಎಂದು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿದ್ದರು. ಕೆಲವು ಕಿಡಿಗೇಡಿಗಳು ಇದನ್ನು ಅಪಾರ್ಥ ಮಾಡಿಕೊಂಡು ಏನ್ ಏನೋ ಬರೆಯುತ್ತಿದ್ದರೆ ಇದರಿಂದ ಮನಸ್ಸಿಗೆ ನೋವಾಗುತ್ತಿದೆ ಎಂದು ಸುಂದರ್ ರಾಜ್‌ ಮಾತನಾಡಿದ್ದಾರೆ. 

ಮಕ್ಕಳ ದಿನಾಚರಣೆ ಪ್ರಯುಕ್ತ ಫಿಲ್ಮಂ ಚೇಂಬರ್‌ನಲ್ಲಿ ಬಾಲನಟ-ನಟಿಯರಿಗೆ ಸನ್ಮಾನ ಮಾಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಂದರ್ ರಾಜ್‌ ಪುತ್ರಿ ಮೇಘನಾ ರಾಜ್‌ ಮತ್ತು ಮೊಮ್ಮಗ ರಾಯನ್ ರಾಜ್‌ ಬಗ್ಗೆ ಮಾತನಾಡಿದ್ದಾರೆ. ಮಗಳು ಶೇರ್ ಮಾಡಿಕೊಳ್ಳುತ್ತಿರುವ ಫೋಟೋಗಳಿಗೆ ತಪ್ಪು ಅರ್ಥ ಕೊಡುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. 'ಇನ್‌ಸ್ಟಾಗ್ರಾಂನಲ್ಲಿ ಮೇಘನಾ ಫೋಟೋ ಶೇರ್ ಮಾಡುತ್ತಿದ್ದಂತೆ ಥೈಲ್ಯಾಂಡ್‌ನಲ್ಲಿ ಮೇಘನಾ ರಾಜ್‌ ಮೋಜು-ಮಸ್ತಿ ಅಂತ ಕ್ಯಾಪ್ಶನ್ ನೀಡಲಾಗಿತ್ತು. ಹಾಗೆ ಫೋಟೋಗಳಿಗೆ ಕಾಮೆಂಟ್ ಕೂಡ ಕೆಟ್ಟದಾಗಿ ಮಾಡಿದ್ದಾರೆ' ಎಂದು ಮಾತು ಆರಂಭಿಸಿ ತಮ್ಮ ನೋವನ್ನು ಮಾಧ್ಯಮದ ಮುಂದೆ ಇಟ್ಟಿದ್ದಾರೆ. 

'ನಿನ್ನಯಷ್ಟೇ ನಡೆದ ಘಟನೆ. ಯಾಕಂದ್ರೆ ಈ ಸಂದರ್ಭದಲ್ಲಿ ಹೇಳದೆ ಅಂದ್ರೆ ಅದು ವಿಪರೀತ ಆಗುತ್ತೆ ಅಂತ ಹೇಳುತ್ತಿದ್ದೀನಿ. ನನ್ನ ಮಗಳು ಈಗ ಥೈಲ್ಯಾಂಡ್‌ನಲ್ಲಿ ಇದ್ದಾಳೆ. ಫ್ರೆಂಡ್ಸ್‌ ಜೊತೆ ಹೋಗಿದ್ದನ್ನು ಅವಳು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಳು. ತಕ್ಷಣವೇ ಒಂದು ಶೀರ್ಪಿಕೆ ಹಾಕಿ, ತಂದೆ-ತಾಯಿಯ ಬಳಿ ಮಗುವನ್ನು ಬಿಟ್ಟು ಮೋಜು-ಮಸ್ತಿ ಮಾಡುವುದಕ್ಕೆ ಹೋಗಿದ್ದಾರೆ ಮೇಘನಾ ಅಂತ ಬರೆದಿದ್ದಾರೆ.  ಯಾಕೆ ಈ ಮಾತನ್ನು ಹೇಳುತ್ತೀನಿ ಅಂದ್ರೆ ನಮ್ಮ ಮನೆಯಲ್ಲಿ ಒಂದು ಘಟನೆ ಆಗಿ ಹೋಗಿದೆ. ಅದನ್ನು ನಾವು ಮರೆಯುತ್ತಿದ್ದೇವೆ. ಆ ಮರೆಯೋ ಸಮಯದಲ್ಲಿ ಈಡೀ ಚಿತ್ರರಂಗ ಅವತ್ತು ಚೇಂಬರ್‌ ಸಮೇತ ನಮಗೆ ಸಾಥ್ ಕೊಟ್ಟಿದ್ದಾರೆ. ಆ ಘಟನೆ ನಡೆದಾಗ ವಾಹಿಯಲ್ಲಿ ಏನೋ ಒಂದು ಸ್ಕ್ರಾಲಿಂಗ್‌ನಲ್ಲಿ ಹೋಗುತ್ತಿತ್ತು. ಆಗ ತಕ್ಷಣ ನಾನು ಮಂಡಳಿಯನ್ನು ಸಂಪರ್ಕ ಮಾಡಿದಾಗ ಅವತ್ತು ಮಂಡಳಿ ಜೊತೆ ನಿಂತು ನಾವು ನಿಮ್ಮ ಕುಟುಂಬದ ಜೊತೆ ಇದ್ದೀವಿ ಅಂತ ಹೇಳಿದ್ದರು ಹಾಗೆ ನಡೆದುಕೊಂಡಿದ್ದಾರೆ' ಎಂದು ಮೇಘನಾ ರಾಜ್‌. 

ಸ್ವಿಮ್‌ಸೂಟ್‌ನಲ್ಲಿ ನಟಿ ಮೇಘನಾ ರಾಜ್ ಪೋಸ್; ಫ್ರೆಂಡ್ಸ್ ಗ್ಯಾಂಗ್ ಜೊತೆ ಚಿರು ಪತ್ನಿ ಮಸ್ತ್ ಎಂಜಾಯ್

ಸದ್ಯ ಥೈಲ್ಯಾಂಡ್‌ನಲ್ಲಿ ಸಖತ್ ಬ್ಯುಸಿಯಾಗಿರುವ ಚಿರು ತಮ್ಮ ಸ್ನೇಹಿತರ ಜೊತೆ ಭೇಟಿ ಕೊಟ್ಟಿರುವ ಸ್ಥಳಗಳಿಗೆ ಭೇಟಿ ನೀಡಿ ಅದೇ ರೀತಿಯಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡಿದ್ದಾರೆ. ಪ್ರತಿ ಕ್ಷಣವನ್ನು ರೀ-ಕ್ರಿಯೇಟ್ ಮಾಡುತ್ತಿದ್ದಾರೆ.

ಚಿರು-ರಾಯನ್ ಟ್ಯಾಟೂ:

ಕರ್ನಾಟಕದ ಮನೆ ಮಗಳು ಮೇಘನಾ ರಾಜ್‌ ಕ್ಯಾಲಿಫೋರ್ನಿಯಾದಲ್ಲಿಆಯೋಜಿಸಿಲಾಗಿದ್ದ ಫೆಸ್ಟಿವಲ್ ಆಫ್‌ ಗ್ಲೋಬ್‌ ಸಮಾರಂಭದಲ್ಲಿ ಭಾಗಿಯಾಗಿ FOG ಅವಾರ್ಡ್‌ ಪಡೆದಿದ್ದರು. ಆಗ ಅಲ್ಲಿನ ಟೂರಿಸ್ಟ್‌ ಜಾಗಗಳಿಗೆ ಭೇಟಿ ನೀಡಿ ಮೈಂಡ್ ಫ್ರೆಶ್ ಮಾಡಿಕೊಂಡು ಬಂದಿದ್ದರು. ಜೊತೆ ಸ್ಪೆಷಲ್ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಹೌದು! ಮೇಘನಾ ರಾಜ್‌ ತಮ್ಮ ಎಡಗೈ ಮೇಲೆ Chiru ಎಂದು ಬರೆಸಿಕೊಂಡು  R ಅಕ್ಷರದಿಂದ ಕೆಳಗೆ Raayan ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇಬ್ಬರೂ ಹೆಸರು ಹಚ್ಚೆ ಹಾಕಿಸಿಕೊಂಡಿರುವ ಎಡಗೈಯಲ್ಲಿ infinity ಟ್ಯಾಟೂ ಕೂಡ ಇದೆ. ಈ ಇನ್‌ಫಿನಿಟಿಯಲ್ಲಿ ಹಾರ್ಟ್‌ ಬೀಟ್‌ನ ಕೂಡ ಸೇರಿಸಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!