Puneeth Rajkumar ಗಂಧದ ಗುಡಿ ಚಿತ್ರಕ್ಕಿದ್ದ ಮೊದಲ ಟೈಟಲ್ ಕೇಳಿದ್ರೆ ನೀವು ಭಾವುಕರಾಗುತ್ತೀರಿ!

By Vaishnavi Chandrashekar  |  First Published Nov 15, 2022, 1:04 PM IST

ಗಂಧದ ಗುಡಿ ಚಿತ್ರದ ಮತ್ತೊಂದು ಟೈಟಲ್ ಹೆಸರು ಕೇಳಿ ಶಾಕ್ ಆದ ನೆಟ್ಟಿಗರು. ಆ ಹೆಸರು ಇದ್ದಿದ್ದರೆ ನಿಜಕ್ಕೂ ಮನಸ್ಸು ಮುಟ್ಟುತ್ತಿತ್ತು..... 


ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್‌ ಕನಸಿನ ಪ್ರಾಜೆಕ್ಟ್‌ ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ರಿಂದ ದೇಶಾದ್ಯಂತ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳ್‌ ಎಬ್ಬಿಸಿದೆ. ಸಿನಿಮಾ ಮಾಡಿರುವ ಕಲೆಕ್ಷನ್ ರಿವೀಲ್ ಮಾಡಿಲ್ಲ, ಅಪ್ಪು ಶ್ರಮ ಮತ್ತು ಪ್ರಯತ್ನವನ್ನು ಹಣದ ಬೆಲೆ ಕೊಡಬಾರದು ಎನ್ನುವ ಮಾತುಗಳಿದೆ. ಅಲ್ಲದೆ ರಾಜ್ಯ ಸರ್ಕಾರ ನಾಲ್ಕು ದಿನಗಳ ಮಟ್ಟಕ್ಕೆ ಟಿಕೆಟ್‌ ದರವನ್ನು ಕಡಿಮೆ ಮಾಡಿ ಸಾವಿರಾರೂ ವಿದ್ಯಾರ್ಥಿಗಳಿಗೆ ಸಿನಿಮಾ ನೋಡವ ಅವಕಾಶ ಮಾಡಿ ಕೊಟ್ಟಿದೆ. ಈಗಲ್ಲೂ ಗಂಧದ ಗುಡಿ ಹವಾ ಜೋರಾಗಿದೆ. 

ಗಂಧದ ಗುಡಿ ಟೈಟಲ್?

Tap to resize

Latest Videos

ಅಮೋಘವರ್ಷ ಆಂಡ್ ಟೀಂ ಜೊತೆ ಸೇರಿಕೊಂಡು ಕರ್ನಾಟಕದಲ್ಲಿರುವ ಕಾಡುಗಳಿಗೆ ಭೇಟಿ ನೀಡಿ ಅಲ್ಲಿನ ಜನರು, ಸಂಪ್ರದಾಯ, ಪ್ರಾಣಿ- ಪಕ್ಷಿಗಳ ಬಗ್ಗೆ ತಿಳಿದುಕೊಂಡು ಜನರಿಗೆ ವಿಡಿಯೋ ಮೂಲಕ ತಿಳಿಸಿದ್ದಾರೆ. ಈ ಡಾಕ್ಯುಡ್ರಾಮಕ್ಕೆ ಗಂಧದ ಗುಡಿ ಎಂದು ಟೈಟಲ್ ಇಡಬೇಕು ಎಂದು ಪುನೀತ್ ಆಸೆ ಪಟ್ಟಿದ್ದರು ಹೀಗಾಗಿ ಇದನ್ನೇ ಇಡಲಾಗಿತ್ತು. ಕನ್ನಡ ಪ್ರತಿಷ್ಠಿತ ಖಾಸಗಿ ವೆಬ್‌ ಸೈಟ್‌ ಸುದ್ದಿ ಮಾಡಿರುವ ಪ್ರಕಾರ ಈ ಚಿತ್ರದಕ್ಕೆ ಗಂಧದ ಗುಡಿಗೂ ಮೊದಲು 'ಜರ್ನಿ ಟು ರಿಮೆಂಬರ್' ಎಂದು ಸುಮ್ಮನೆ ಇಟ್ಟಿದ್ದರಂತೆ. ಈ ಟೈಟಲ್‌ನ ಅರ್ಥ ಏನೆಂದರೆ ನೆನಪಿಟಿಕೊಳ್ಳುವಂತ ಪ್ರಯಾಣ ಅಥವಾ ಮೆರಯಲಾಗದ ಪ್ರಯಾಣ ಎಂದರ್ಥ. 

ಈ ರೀತಿ ಹೆಸರಿಟ್ಟಿದ್ದರೆ ಜನರು ನಿಜಕ್ಕೂ ಅಪ್ಪುನ ಹೆಚ್ಚಿಗೆ ಮಿಸ್ ಮಾಡಿಕೊಳ್ಳುತ್ತಿದ್ದರು. ಅಪ್ಪು ಜರ್ನಿನ ನೆನಪು ಮಾಡುತ್ತದೆ ಎಂದು ಒಮ್ಮೆ ಯೋಚನೆ ಮಾಡಿದ್ದರೆ ನಾವೇ ಭಾವುಕರಾಗುತ್ತೀವಿ. ಪಿಆರ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಪು ಗಂಧದ ಗುಡಿ ಮೇಕಿಂಗ್‌ನ ಎಪಿಸೋಡ್‌ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ತೆರೆ ಮೇಲೆ ನೋಡಿದರ ದೃಶ್ಯಗಳನ್ನು ತೋರಿಸಲಾಗಿದೆ, ಅದರಲ್ಲಿ ಅಪ್ಪು ನಗು ಮಾತನಾಡಿರುವ ಶೈಲಿ ಮಗುವಿನಂತೆ ಕುತೂಹಲದಿಂದ ಕೇಳಿರುವ ಪ್ರಶ್ನೆ ರೀತಿ ಸಿನಿ ರಸಿಕರ ಮನ ಗೆದ್ದಿದೆ. 

Ashwini Puneeth ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪವರ್ ಕಪಲ್ ಫೋಟೋಗಳು!

ಗಂಧದ ಗುಡಿ ಪರವಾಗಿ ನಿಂತ ಅಮಿತಾಭ್:

ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು, ಅಪ್ಪು ಇಲ್ಲ ಎಂಬುದನ್ನು ಅಂದುಕೊಂಡು ಮಾತನಾಡಲು ಕಷ್ಟ ಆಗುತ್ತದೆ. ಅಪ್ಪು ಮಗುವಾಗಿದ್ದಾಗಲೇ ನಾನು ಅವರನ್ನು ಮೊದಲು ನೋಡಿದ್ದು. ಅಪ್ಪುವಿನಲ್ಲಿ ಸದಾ ಸೆಳೆಯುವ ಸಂಗತಿ ಅಂದ್ರೆ ಅವರ ನಗು. ಎಲ್ಲಾ ಕಡೆ, ಎಲ್ಲಾ ಸಂದರ್ಭದಲ್ಲೂ, ಯಾವಾಗಲೂ ಅವರ ಮುಖದಲ್ಲಿ ನಗು ಇರುತ್ತದೆ. ಅಪ್ಪು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಕೊನೆಯ ಚಿತ್ರ ಗಂಧದಗುಡಿಯಲ್ಲಿ ಅವರು ಅಭಿನಯಿಸಿಲ್ಲ. ಅವರು ಅವರಾಗಿಯೇ ಕಾಣಿಸಿಕೊಂಡಿದ್ದಾರೆ ಅಂತ ಬರೆದುಕೊಂಡಿದ್ದರು. 

ಪುನೀತ್ ಸ್ನೇಹಕ್ಕೆ ಜ್ಯೂ. ಎನ್.ಟಿ.ಆರ್ ಪ್ರೀತಿಯ ಬೆಸುಗೆ: ಹೇಗಿತ್ತು ಇಬ್ಬರ ನಡುವಿನ ಬಾಂಧವ್ಯ?

ಇತ್ತೀಚೆಗೆ ತೆರೆಕಂಡ ಗಂಧದ ಗುಡಿ ಚಿತ್ರದ ಬಗ್ಗೆಯೂ ಬಗ್ಗೆ ಮಾತನಾಡಿರುವ ಅಮಿತಾಭ್ ಬಚ್ಚನ್ ಅವರು ‘ಗಂಧದ ಗುಡಿಯಲ್ಲಿ ಕರ್ನಾಟಕ  ವೈಭವದ ವನ್ಯ ಸಂಪತ್ತನ್ನು ತೆರೆದಿಟ್ಟಿದ್ದಾರೆ. ಅಪ್ಪು ಜೊತೆಗಿನ ಗಂಧದ ಗುಡಿ ಪಯಣ ಮಿಸ್ ಮಾಡಕೋಬೇ. ಕಡ್ಡಾಯವಾಗಿ ಮಕ್ಕಳು ನೋಡಲೇಬೇಕಾದ ಚಿತ್ರ.  ವನ್ಯ ಸಂಪತ್ತಿನ ಕುರಿತು ಅರಿಯ ಬೇಕಾದ ಚಿತ್ರ. ಅಪ್ಪು ನಮ್ಮ ಜೊತೆ ನಮ ನೆನಪಿನಲ್ಲಿ ಸದಾ ಜೀವಂತ’ ಎಂದಿದ್ದಾರೆ.

click me!