ನಟಿ ಸುಮಲತಾ ಅಂಬರೀಶ್‌ಗೆ ಬ್ಯೂಟಿ ಕ್ವೀನ್‌ ಕಿರೀಟ: ಕುತೂಹಲದ ಮಾಹಿತಿ ಶೇರ್ ಮಾಡಿದ ಸಂಸದೆ

By Suchethana D  |  First Published Dec 4, 2024, 4:32 PM IST

 47 ವರ್ಷಗಳ ಹಿಂದೆ ನಟಿ ಜಮುನಾ ಅವರಿಂದ ಬ್ಯೂಟಿ ಕ್ವೀನ್‌ ಕಿರೀಟ ಧರಿಸಿದ್ದ ನಟಿ, ಸಂಸದೆ ಸುಮಲತಾ ಈ ಕುರಿತು ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
 


ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಅವರು ನಿಧನರಾಗಿ ವರ್ಷವಾಗುತ್ತಾ ಬಂದಿದೆ.  ‘ತೆನಾಲಿ ರಾಮಕೃಷ್ಣ’, ‘ಭೂಕೈಲಾಸ’ ಸೇರಿದಂತೆ ಕನ್ನಡದಲ್ಲಿ ಎಂಟು ಚಿತ್ರಗಳಲ್ಲಿ ನಟಿಸಿದ್ದ ಜಮುನಾ ಅವರು  ತೆಲುಗಿನಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. 86ನೇ ವಯಸ್ಸಿನಲ್ಲಿ ನಿಧನರಾದ ನಟಿಯನ್ನು ನೆನಪಿಸಿಕೊಳ್ಳುತ್ತಲೇ ಸ್ಯಾಂಡಲ್‌ವುಡ್‌ ನಟಿ, ಸಂಸದೆ ಸುಮಲತಾ ಅಂಬರೀಶ್‌ ಅವರು ತಮ್ಮ ಅಪರೂಪದ ಫೋಟೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‍‌ ಮಾಡಿಕೊಂಡಿದ್ದಾರೆ. ಇದರಲ್ಲಿ ನಟಿ ಜಮುನಾ ಅವರು ಸುಮಲತಾ ಅವರಿಗೆ ಬ್ಯೂಟಿಕ್ವೀನ್‌ ಕಿರೀಟ ಹಾಕುತ್ತಿರುವುದನ್ನು ನೋಡಬಹುದಾಗಿದೆ.  43 ವರ್ಷಗಳ ಹಿಂದಿನ ಫೋಟೋ ಇದಾಗಿದ್ದು, ಅಂದು ನಡೆದ ಘಟನೆಯನ್ನು ಸುಮಲತಾ ಅವರು ಈಗ ನೆನಪಿಸಿಕೊಂಡಿದ್ದಾರೆ.

ಆಗ ತಮಗೆ  15 ವರ್ಷ ಇದ್ದು, ಆ ವಯಸ್ಸಿನಲ್ಲಿ ಜಮುನಾ ಅವರು,  ‘ಬ್ಯೂಟಿ ಕ್ವೀನ್’ ಕಿರೀಟ ಧರಿಸಿದ್ದುದಾಗಿ ಸುಮಲತಾ ಅವರು ಹೇಳಿದ್ದಾರೆ. ಅವರು ತಮ್ಮ ಕೈಯಾರೆ ಈ ಕಿರೀಟವನ್ನು ನನಗೆ ಧರಿಸಿ, ನಿನಗೆ ಉತ್ತಮ ಭವಿಷ್ಯವಿದೆ ಎಂದು ನುಡಿದಿದ್ದರು ಎಂದು ಬರೆದುಕೊಂಡಿದ್ದಾರೆ.  ನಿನ್ನೆ ಅಂದರೆ ಡಿಸೆಂಬರ್‍‌ 3ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಶರ್‍‌ ಮಾಡಿಕೊಂಡಿರುವ ನಟಿ, ಇಂದಿಗೆ (ಡಿ.3) 19878ರ ಫೋಟೋ ಇದಾಗಿದೆ ಎಂದಿದ್ದಾರೆ. ಹಿರಿಯ ನಟಿಯ ಅಗಲಿಕೆಯ ಸುದ್ದಿ ತುಂಬಾ ನೋವನ್ನು ಉಂಟು ಮಾಡಿದೆ.   ಕನ್ನಡವೂ ಸೇರಿದಂತೆ ಅವರು ಹಲವು ಭಾಷೆಗಳಲ್ಲಿ ನಟಿಸಿದ ಮೇರುತಾರೆ. ನಟಿಯಾಗಿ, ರಾಜಕಾರಣಿಯಾಗಿ ಅವರು ಈ ನೆಲಕ್ಕೆ ಕೊಟ್ಟಿರುವ ಕೊಡುವೆ ಅಪಾರ ಎಂದು ಸುಮಲತಾ ಹೇಳಿದ್ದಾರೆ. 

Latest Videos

ಮದ್ವೆ ಮುಚ್ಚಿಟ್ಟಿದ್ದ ನಟಿ ತಾಳಿ ಯಾಕೆ ಹಾಕಲ್ಲ? ಲವ್‌ ಸ್ಟೋರಿ ಏನು? ಫ್ಯಾನ್ಸ್ ಪ್ರಶ್ನೆಗಳಿಗೆ ದಂಪತಿ ಉತ್ತರ ಕೇಳಿ...

ತಾಯಿಗುಣದ ಜಮುನಾ ಅವರ ನಿಧನಕ್ಕೆ ನನ್ನ ಸಂತಾಪಗಳು ಎಂದು ಬರೆಯುತ್ತಲೇ, ಹಿರಿಯ ನಟಿಯ ಸಿನಿಮಾ ಮತ್ತು ಸಮಾಜಮುಖಿ ಕೆಲಸಗಳು ಯಾವತ್ತಿಗೂ ಜೀವಂತ. ಜಮುನಾ ಅವರ ಜೊತೆ ನನಗೆ ತೀರಾ ಆತ್ಮೀಯ ಬಾಂಧವ್ಯವಿತ್ತು. 43 ವರ್ಷಗಳ ಹಿಂದೆ ಆಗ ನನಗೆ 15 ವರ್ಷ. ಅವರು ನನಗೆ ಬ್ಯೂಟಿ ಕ್ವೀನ್ ಕಿರೀಟ ತೊಡಿಸಿ ಹಾರೈಸಿದ್ದರು. ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ನನ್ನ ಜೀವನದ ಬಗ್ಗೆ ಭವಿಷ್ಯ ನುಡಿದ ಮೊದಲ ನಟಿ ಅವರಾಗಿದ್ದರು ಎಂದು ತಿಳಿಸಿದ್ದಾರೆ. 
  
ಇನ್ನು ಜಮುನಾ ಅವರ ಕುರಿತು ಹೇಳುವುದಾದರೆ, ಅಂತಿಮ ದಿನಗಳಲ್ಲಿ ಅವರು,  ಹೈದರಾಬಾದ್ ನಲ್ಲಿ ನೆಲೆಸಿದ್ದರು. ಅಲ್ಲಿಯೇ ನಿಧನರಾಗಿದ್ದಾರೆ.  1953ರಲ್ಲಿ ತೆರೆಕಂಡ ಪುಟ್ಟಿಲ್ಲು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಅವರು,  ತೆಲುಗು, ತಮಿಳು, ಹಿಂದಿ, ಕನ್ನಡ ಹೀಗೆ ನಾನಾ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.  ಡಾ.ರಾಜ್ ಕುಮಾರ್ ಜೊತೆ ಭೂ ಕೈಲಾಸ ಮತ್ತು ಸಾಕ್ಷಾತ್ಕಾರ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.   ರಾಜಕಾರಣದಲ್ಲೂ ಇವರು ಛಾಪು ಮೂಡಿಸಿದ್ದರು. 1980ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಅವರು 1989ರಲ್ಲಿ ರಾಜಮಂಡ್ರಿಗೆ ಎಂಪಿ ಆಗಿ ಆಯ್ಕೆಯಾದರು. 1990ರಲ್ಲಿ ಜನತಾ ಪಕ್ಷದ ಪರವಾಗಿಯೂ ಅವರು ಕೆಲಸ ಮಾಡಿದರು. ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಯಶಸ್ಸು ಕಂಡಿದ್ದರು.

undefined

ಆರ್ಯವರ್ಧನ್‌ ಗುರೂಜಿ ಮುಂದಿನ ಜನ್ಮದಲ್ಲಿ ಏನಾಗಿ ಹುಟ್ತಾರೆ? ಅವರ ಬಾಯಲ್ಲೇ ಕೇಳಿ...

click me!