ಕನ್ನಡ ಚಿತ್ರರಂಗದ ಗಾರ್ಡಿಯನ್ ಏಂಜಲ್‌ ಲಕ್ಷ್ಮಿದೇವಿ ಭೇಟಿ ಮಾಡಿದ 3 ಬೆಸ್ಟ್‌ ಫ್ರೆಂಡ್ಸ್!

Suvarna News   | Asianet News
Published : Sep 24, 2021, 01:26 PM IST
ಕನ್ನಡ ಚಿತ್ರರಂಗದ ಗಾರ್ಡಿಯನ್ ಏಂಜಲ್‌ ಲಕ್ಷ್ಮಿದೇವಿ ಭೇಟಿ ಮಾಡಿದ 3 ಬೆಸ್ಟ್‌ ಫ್ರೆಂಡ್ಸ್!

ಸಾರಾಂಶ

ಹಿರಿಯ ನಟ ಲಕ್ಷ್ಮಿದೇವಿ ಅವರು ನಮ್ಮ ಚಿತ್ರರಂಗದ ಗಾರ್ಡಿಯನ್ ಏಂಜಲ್‌ ಎಂದು ಕರೆದ ಸುಧಾರಾಣಿ. ಪೋಷಕ ನಟಿ ಜೊತೆ ಸಮಯ ಕಳೆದ ಮಾಳವಿಕಾ, ಸುಧಾರಾಣಿ ಮತ್ತು ಶ್ರುತಿ .....

ಕನ್ನಡ ಚಿತ್ರರಂಗದ 3 ಬೆಸ್ಟ್‌ ಫ್ರೆಂಡ್ಸ್‌ - ಮಾಳವಿಕಾ (Malavika), ಶ್ರುತಿ (Shruthi) ಹಾಗೂ ಸುಧಾರಾಣಿ (Sudharani) ಇದೀಗ ಹಿರಿಯ ನಟ ಲಕ್ಷ್ಮಿದೇವಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ, ಕ್ಷೇಮ ವಿಚಾರಿಸಿದ್ದಾರೆ. ಅವರೊಟ್ಟಿಗೆ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡು ಅವರಿಗೆ ಗೌರವ ಸಲ್ಲಿಸಬೇಕು ಎಂದಿದ್ದಾರೆ. 

80ರ ದಶಕದಲ್ಲಿ 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಲಕ್ಷ್ಮಿದೇವಿ ಅವರು ಈಗnt ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಶ್ರಾಂತಿ ಜೀವನದ ನಡುವೆಯೂ ಪ್ರೇಕ್ಷಕರನ್ನು ಮನೋರಂಜಿಸುತ್ತಿರುವ ಈ ನಟಿಗೆ ದೊಡ್ಡ ಗೌರವ ಸಲ್ಲಿಸಬೇಕೆಂಬುವುದು 90ರ ದಶಕದ ನಟಿಯರ ಆಶಯ.

'ಯಾರು ಯಾರು ನೀ ಯಾರು ಎಂದರೆ ನಾನು ಸಾಕ್ಷಾತ್ ಕಲಾ ದೇವತೆ ಸರಸ್ವತಿಯ ವರಪುತ್ರಿ ಎಂದವರೆ ಎಂ.ಎಸ್ ಲಕ್ಷ್ಮಿದೇವಿ ಅಮ್ಮನವರು. ಚಿತ್ರರಂಗದಲ್ಲಿ ಇವರು ಮಾಡಿರುವ ಸಾಧನೆ ಅಸಮಾನ್ಯವಾದದ್ದು. ಪೋಷಕ ಪಾತ್ರಗಳಿಗೆ ಒಂದು ವಿಭಿನ್ನ ರೀತಿಯ ಮೆರಗು, ವೈಭವ, ಗೌರವ ತಂದುಕೊಟ್ಟ ಕಲಾವಿದರ ಪೈಕಿ ಕಲಾವಿದರು ಅಥವಾ ಪೋಪಕ ಪಾತ್ರಗಳು ಅಂದಾಗ ನನ್ನ ಮನಸ್ಸಿಗೆ ಬರುವುದು 'ಪೋಷಕ' ಎನ್ನುವ ಪದದ ಅರ್ಥ, ಅದರ ಅರ್ಥ ನಿಮಗೆಲ್ಲ ಗೊತ್ತೇ ಇದೆ. ಇಂಗ್ಲಿಷ್‌ನಲ್ಲಿ ಈ ಪದಕ್ಕೆ ಗಾರ್ಡಿಯನ್‌ ಎಂದು ಅರ್ಥ. ಗಾರ್ಡಿಯನ್ (Gaurdian) ಎನ್ನುವ ಪದವನ್ನು ಗಾರ್ಡಿಯನ್ ಏಂಜಲ್‌ ಎಂದು ಸಹ ಕರೆಯುತ್ತಾರೆ,' ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ. 

ಎಷ್ಟು ಸಿಂಪಲ್ ಇವ್ರು! ರಾಗಿ ಮುದ್ದೆ ಪಾರ್ಟಿ ಮಾಡಿದ ಸುಧಾರಾಣಿ, ಶ್ರುತಿ ಮತ್ತು ಮಾಳವಿಕಾ!

'ಇವರು ನಮ್ಮ ಚಿತ್ರಗಳಿಗೆ ಅಥವಾ ಮುಖ್ಯ ಭೂಮಿಕೆ ನಿಭಾಯಿಸುವಂತಹ ನಟ, ನಟಿಯರಿಗೆ ನಿಜವಾಗಲೂ Guardian Angels ಹಾಗೆಯೇ ಇರುತ್ತಾರೆ. ಯಾಕಂದ್ರೆ ಪೋಷಕ ಕಲಾವಿದರು ತಮ್ಮ ಸರ್ವಸ್ವವನ್ನು ಅರ್ಪಿಸಿ, ಮುಖ್ಯ ಭೂಮಿಕೆ ನಿರ್ವಹಿಸುವ ಪಾತ್ರಗಳಿಗೆ ಅಥವಾ ಇಡೀ ಚಿತ್ರಕ್ಕೆ  ಬೆನ್ನೆಲುಬಾಗಿರುತ್ತಾರೆ ಅಥವಾ ಚಿತ್ರದ ಆಧಾರ ಸ್ತಂಭದಂತೆ ಕೆಲಸ ಮಾಡುತ್ತಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಸತ್ಯವನ್ನು ಮರೆತು, ಪೋಷಕ ಪಾತ್ರದ ಮಹತ್ವವನ್ನು ಸರಿಯಾಗಿ ಅರಿಯದೇ, ಆ ಪಾತ್ರಗಳನ್ನು ಹಿಂದಕ್ಕೆ ತಳ್ಳಿ, ಪೋಷಕ ಕಲಾವಿದರಿಗೆ ಸಲ್ಲಬೇಕಾದ ಗೌರವ, ಮರ್ಯಾದೆ, ಸ್ಥಾನಮಾನ ಇವೆಲ್ಲವನ್ನೂ ಅವರಿಗೆ ಸಂಪೂರ್ಣವಾಗಿ ಕೊಡುವುದನ್ನು ಮರೆತಿದ್ದೇವೆ, ಎಂದು ಹೇಳಬಹುದು. ನಮ್ಮ ಚಿತ್ರರಂಗದ ಈ Guardian Angels ಅಥವಾ ನಮ್ಮ ಪೋಷಕರನ್ನ ಎಂದಿಗೂ ಮರೆಯದೆ ಅವರನ್ನು ಗೌರವದಿಂದ ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಧರ್ಮ,' ಎಂದಿದ್ದಾರೆ.

ಶ್ರುತಿ, ಸುಧರಾಣಿ ಹಾಗೂ ಮಾಳಿವಿಕಾ ಆಗಾಗ ಭೇಟಿಯಾಗುತ್ತಾರೆ. ಈ ಮೂವರೇ ರಾಗಿ ಮುದ್ದಿ ಪಾರ್ಟಿಯಿಂದ ಹಿಡಿದು, ಹುಟ್ಟು ಹಬ್ಬದ ಪಾರ್ಟಿಗಳನ್ನೂ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಬಚ್ಚಲು ಮನೆಯಲ್ಲಿ ಬಿದ್ದು ಅಸ್ವಸ್ಥರಾಗಿದ್ದ Sandalwood ಹಿರಿಯ ನಟಿ ಲೀಲಾವತಿ ಅಮ್ಮನವರನ್ನೂ ಭೇಟಿಯಾಗಿ, ಸಾಂತ್ವಾನ ಹೇಳಿ ಬಂದಿದ್ದರು. ಈ ಮೂವರು ಜೊತೆಯಾಗಿಯೇ ಮಾಡುವ ಕೆಲಸಗಳನ್ನು ತಮ್ಮಮ್ಮ ಸೋಷಿಯಲು ಮೀಡಿಯಾ ಪೇಜ್‌ಗಳಲ್ಲಿಯೂ ಹಂಚಿ ಕೊಳ್ಳುತ್ತಾರೆ. ಒಟ್ಟಿನಲ್ಲಿ ಈ ಮೂವರ ಸ್ನೇಹವೂ ಅಭಿಮಾನಿಗಳಿಗೆ ಬಹಳ ಖುಷಿ ನೀಡುತ್ತದೆ. ಇವರ ಕೆಲಸಕ್ಕೆ ನೆಟ್ಟಿಗರಿಂದ ಅಪಾರ ಮೆಚ್ಚುಗೆಯೂ ವ್ಯಕ್ತವಾಗುತ್ತಲೇ ಇರುತ್ತವೆ. ಶ್ರುತಿ ಮಗಳು ಹಾಗೂ ಸುಧಾರಾಣಿ ಮಗಳು ಬಹುತೇಕ ಒಂದೇ ವಯಸ್ಸಿನವರಾಗಿದ್ದು, ಅಮ್ಮಂದಿರು ಸೇರುವಲ್ಲಿ ಮಕ್ಕಳೂ ಇರುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?