
ಜು.18ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಬಿ.ಎಸ್. ಲಿಂಗದೇವರು ನಿರ್ದೇಶನದ, ಸಂಚಾರಿ ವಿಜಯ್ ನಟನೆಯ ‘ನಾನು ಅವನಲ್ಲ ಅವಳು’ ಚಿತ್ರಕ್ಕೆ ಭಾರಿ ಟಿಆರ್‌ಪಿ ಬಂದಿದೆ. ಒಟ್ಟಾರೆಯಾಗಿ 5.4 ಟಿಆರ್‌ಪಿ ಬಂದಿದ್ದು, ನಗರ ಪ್ರದೇಶದಲ್ಲಿ 6.2 ಟಿಆರ್‌ಪಿ ಸಿಕ್ಕಿದೆ. ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ಈ ಸಿನಿಮಾವನ್ನು ನೋಡಿ, ಇಹಲೋಕ ತ್ಯಜಿಸಿದ ಸಂಚಾರಿ ವಿಜಯ್ ಅವರಿಗೆ ಸಿನಿಮಾ ನಮನ ಸಲ್ಲಿಸಿದ್ದಾರೆ.
ಲಿವಿಂಗ್ ಸ್ಮೈಲ್ ವಿದ್ಯಾ ಅವರ ಆತ್ಮಕಥೆ ಆಧರಿಸಿದ ‘ನಾನು ಅವನಲ್ಲ ಅವಳು’ ಚಿತ್ರದ ನಟನೆಗೆ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರ ಪ್ರಶಸ್ತಿ ಗೌರವ ಸಂದಿತ್ತು. ಮಂಗಳಮುಖಿ ಸಮುದಾಯದ ಸಂಕಷ್ಟ, ಸಂವೇದನೆಯನ್ನು ಜನರಿಗೆ ಕಾಡುವಂತೆ ತೋರಿಸಿದ್ದಕ್ಕೆ ಮಂಗಳಮುಖಿಯರ ಇಡೀ ಸಮುದಾಯ ಸಂಚಾರಿ ವಿಜಯ್ ಅವರಿಗೆ, ಚಿತ್ರತಂಡಕ್ಕೆ ಮೆಚ್ಚುಗೆ ಸಲ್ಲಿಸಿತ್ತು. ಈ ಸಿನಿಮಾ ಯೂಟ್ಯೂಬ್‌ನಲ್ಲಿ ಪ್ರಸಾರವಾಗಿದ್ದರೂ ಜನರು ಈಗ ಟಿವಿಯಲ್ಲೂ ನೋಡಿ ಮೆಚ್ಚುಗೆ ಸಲ್ಲಿಸಿದ್ದಾರೆ. ಈ ಸಿನಿಮಾವನ್ನು ರವಿ ಆರ್ ಗರಣಿ ನಿರ್ಮಿಸಿದ್ದರು.
‘ನಾನು ಅವನಲ್ಲ ಅವಳು’ ಸಿನಿಮಾಗೆ ಹೆಚ್ಚು ಟಿಆರ್‌ಪಿ ಬಂದ ವಿಚಾರ ತಿಳಿದು ಸಂತೋಷವಾಯಿತು. ಜನರು ಸಿನಿಮಾದ ಮೇಲಿನ ಇದೇ ಪ್ರೀತಿಯನ್ನು ಸಂಚಾರಿ ವಿಜಯ್ ಇರುವಾಗಲೇ ತೋರಿಸಿದ್ದಿದ್ದರೆ ಇನ್ನೂ ಜಾಸ್ತಿ ಖುಷಿಯಾಗಿರುತ್ತಿತ್ತು. ಹೆಚ್ಚು ಜನ ಈಗ ಸಿನಿಮಾ ನೋಡಿದ್ದು ಸಂಚಾರ್ ವಿಜಯ್ ಅವರ ಶ್ರದ್ಧೆ, ಪ್ರತಿಭೆ, ವ್ಯಕ್ತಿತ್ವಕ್ಕೆ ಸಂದ ಗೌರವ ಎಂದು ನಾನಂದುಕೊಳ್ಳುತ್ತೇನೆ- ಬಿಎಸ್ ಲಿಂಗದೇವರು, ನಿರ್ದೇಶಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.