
ಕನ್ನಡ ಚಿತ್ರರಂಗದಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚಿಗೆ ನಿರ್ದೇಶಕ ಎಎಂಆರ್ ರಮೇಶ್ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದಂತಚೋರ ವೀರಪ್ಪನ್ ಜೀವನದ ಬಗ್ಗೆ ಬಿಡುಗಡೆಯಾದ 'ಅಟ್ಟಹಾಸ' ಸಿನಿಮಾ ನಿರ್ಮಾಪಕ ಮಹೇಶ್ ಹಾಗೂ ಹಾಟ್‌ಸ್ಟಾರ್ App ವಿರುದ್ಧ ಈ ದೂರು ದಾಖಲಿಸಿದ್ದಾರೆ.
2013ರಲ್ಲಿ ಅಟ್ಟಹಾಸ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಸಿನಿಮಾವನ್ನು ಹಾಟ್‌ಸ್ಟಾರ್‌ಗೆ ಮಾರುತ್ತೇನೆ ಎಂದು ಒಪ್ಪಂದ ಮಾಡಲಾಗಿತ್ತಂತೆ. ಚಿತ್ರವನ್ನು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ ಅದರೆ ತಮಗೆ ಬರಬೇಕಾದ ಹಣ ನೀಡಿಲ್ಲ ಎಂದು ದೂರು ನೀಡಿದ್ದಾರೆ.
ಅಟ್ಟಹಾಸ ಸಿನಿಮಾ ನ್ಯಾಷನಲ್ ಅವಾರ್ಡ್‌ಗೆ ಕಳುಹಿಸುವಾಗ ಸಬ್‌ಟೈಟಲ್ ಹಾಕಲು ಸಿನಿಮಾ ಕಾಪಿಯನ್ನು ನೀಡಿದ್ದರು ಅದನ್ನು ದುರ್ಬಳಕೆ ಮಾಡಿಕೊಂಡು ಹಾಟ್‌ಸ್ಟಾರ್‌ಗೆ ಮಾರಿದ್ದಾರೆ ಎಂದಿದ್ದಾರೆ.
'ಅಟ್ಟಹಾಸ' ಸಿನಿಮಾ ಸೂಪರ್ ಹಿಟ್ ಆದ ನಂತರ ಎಎಂಆರ್ ವೆಬ್ ಸರಣಿ ಮಾಡಲು ಕಳೆದ ವರ್ಷವೇ ಮುಂದಾದರು. ಇದಾಗ ನಂತರ ಎಲ್‌ಟಿಟಿಇ ಮುಖ್ಯಸ್ಥ ವಿ.ಪ್ರಭಾಕರನ್ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.