ಐರಾ ಕೈಯಲ್ಲಿ ಐಸ್‌ ಕ್ಯಾಂಡಿ; ರಾಧಿಕಾ ತಯಾರಿಸಿದ ಪಾಪ್‌ಸಿಕಲ್ ಇದು!

Published : Apr 10, 2020, 12:49 PM IST
ಐರಾ ಕೈಯಲ್ಲಿ ಐಸ್‌ ಕ್ಯಾಂಡಿ;  ರಾಧಿಕಾ ತಯಾರಿಸಿದ ಪಾಪ್‌ಸಿಕಲ್ ಇದು!

ಸಾರಾಂಶ

ರಾಕಿಂಗ್‌ ದಂಪತಿ ಮುದ್ದಿನ ಮಗಳ ಕೈಯಲ್ಲಿ ಪಾಪ್‌ಸಿಕಲ್. ಫೋಟೋ ಅಪ್ಲೋಡ್‌ ಆದ ಕೆಲವೇ ಕ್ಷಣಗಳಲ್ಲಿ ಫುಲ್‌ ವೈರಲ್‌...  

ಸ್ಯಾಂಡಲ್‌ವುಡ್‌ ಮಿಸ್ಟರ್ ಆ್ಯಂಡ್‌ ಮಿಸಸ್ ರಾಮಚಾರಿ ಪುತ್ರಿ ಐರಾ ಯಶ್‌ 'ಬೀಟ್‌ ದಿ ಹೀಟ್‌' ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಟೈಂ ಸ್ಪೆಂಡ್‌ ಮಾಡುತ್ತಿರುವ ಸಿನಿ ತಾರೆಯರು ತಮ್ಮ ಮಕ್ಕಳೊಟ್ಟಿಗೆ ಕಾಲ ಕಳೆಯಲು ಇದು ಗುಡ್‌ ಟೈಂ. ಸ್ಯಾಂಡಲ್‌ವುಡ್‌ ಸ್ಟಾರ್‌ ಕಿಡ್‌ ಆಗಿರುವ ಐರಾ ಮನೆಯಲ್ಲಿ ಅಮ್ಮ ರಾಧಿಕಾ ತಯಾರಿಸಿದ ಕಲ್ಲಂಗಡಿ  ಹಣ್ಣಿನ ಐಸ್‌ ಕ್ಯಾಂಡಿ  ಸವಿಯುತ್ತಿದ್ದಾರೆ. 

ಮೋದಿ ಕರೆಗೆ ಲಿಟಲ್‌ ಐರಾ ಸಾಥ್; ರಾಕಿ ಬಾಯ್‌ ಶೇರ್ ಮಾಡಿದ ವಿಡಿಯೋ ಇದು

'ನಾವು ಸಮ್ಮರ್  ಹೀಟ್‌ ಬೀಟ್‌ ಮಾಡುತ್ತಿರುವುದು ಹೀಗೆ, ಅಮ್ಮ ಮಾಡಿದ ಕಲ್ಲಂಗಡಿ  ಹಣ್ಣಿನ ಪಾಪ್‌ಸಿಕಲ್ (ಐಸ್ ಕ್ಯಾಂಡಿ)' . ಇದು  'ಐರಾ ತಿಂದ ನಂತರ ನಾನು ಮನೆಯೆಲ್ಲಾ ಕ್ಲೀನ್‌ ಮಾಡಬೇಕಾಯ್ತು ' ಎಂದು ಹೇಳಿಕೊಂಡಿದ್ದಾರೆ.

ಸದ್ಯ ಕೆಜಿಎಫ್‌2  ಶೂಟಿಂಗ್ ಇಲ್ಲದ ಕಾರಣ ಯಶ್ ಮನೆಯಲ್ಲಿಯೇ ಲಾಕ್ ಡೌನ್ ಆಗಿದ್ದಾರೆ ಹೀಗಾಗಿ ಐರಾ ಅಪ್ಪ-ಅಮ್ಮನ ಜೊತೆ ಹೆಚ್ಚು ಸಮಯ  ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಅಪ್ಪನಿಗೆ ಆಹಾರ ತಿನಿಸುತ್ತಿರುವ ವಿಡಿಯೋ ಫುಲ್‌ ವೈರಲ್‌ ಆಗಿತ್ತು . ಇನ್ನು ಮೋದಿ ಕರೆ ನೀಡಿದ ಅಭಿಯಾನಕ್ಕೆ ಐರಾ ಚಪ್ಪಾಳೆ ಹಾಗೂ ದೀಪ ಬೆಳಗುವ ಮೂಲಕ ಸಾಥ್ ನೀಡಿದ್ದಳು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಣೇಶ್‌ಗೆ ಹೊಸ ಬಿರುದು: ‘ಬೃಂದಾವಿಹಾರಿ’ ರಿಲೀಸ್‌ಗೂ ಮುನ್ನ ಗೋಲ್ಡನ್ ಸ್ಟಾರ್ ಹೇಳಿದ್ದೇನು?
ಮಂಗಳೂರಿನಲ್ಲಿ ‘ಹಲ್ಕಾ ಡಾನ್’ ಅಬ್ಬರ: ಕೊರಗಜ್ಜನ ಆಶೀರ್ವಾದ ಪಡೆದ ಪ್ರಮೋದ್ ಪಂಜು ತಂಡ!