ಡಿ.3ಕ್ಕೆ ಶ್ರೀಮುರಳಿ ಮದಗಜ ಆಗಮನ

By Suvarna News  |  First Published Oct 18, 2021, 10:16 AM IST
  • ಮದಗಜ’ ಡಿಸೆಂಬರ್‌ 3ಕ್ಕೆ ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆ
  • ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಟೀಸರ್‌ ಬಿಡುಗಡೆ

ಶ್ರೀಮುರಳಿ ನಟನೆಯ ‘ಮದಗಜ’ ಡಿಸೆಂಬರ್‌ 3ಕ್ಕೆ ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಿದೆ. ಪ್ರಶಾಂತ್‌ ನೀಲ್‌ ಸೇರಿದಂತೆ ಹಲವರು ಸಿನಿಮಾ ತಂಡಕ್ಕೆ ಶುಭ ಕೋರಿದ್ದಾರೆ. ಮಹೇಶ್‌ ಕುಮಾರ್‌ ನಿರ್ದೇಶನದ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿದ್ದಾರೆ. ಆಶಿಕಾ ರಂಗನಾಥ್‌ ನಾಯಕಿ.

ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ನಿರ್ಮಾಣದ ಮತ್ತು ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀ ಮುರಳಿ (Srii Murali) ಅಭಿನಯದ 'ಮದಗಜ' (Madagaja) ಸಿನಿಮಾ ಈಗಾಗಲೇ ಪೋಸ್ಟರ್ (Poster) ಮತ್ತು ಫಸ್ಟ್ ಲುಕ್‌ನಿಂದ (First look) ಸದ್ದು ಮಾಡುತ್ತಿದೆ. ಅಲ್ಲದೇ  ಚಿತ್ರದ ಮೊದಲ ಟೀಸರ್ (Teaser) ಕೂಡಾ ಬಿಡುಗಡೆಯಾಗಿ ಚಿತ್ರರಸಿಕರ ಗಮನ ಸೆಳೆದಿತ್ತು. ಇದೀಗ ಚಿತ್ರತಂಡ ಚಿತ್ರದ ಎರಡನೇ ಟೀಸರ್ ಅನ್ನು ಆನಂದ್ ಯೂಟ್ಯೂಬ್ ಚಾನೆಲ್‌ನಲ್ಲಿ (YouTube) ಬಿಡುಗಡೆ ಮಾಡಿದೆ.

Tap to resize

Latest Videos

undefined

ಹಾಡಿನ ಶೂಟಿಂಗ್‌ಗೆ 3 ಕೋಟಿ ವೆಚ್ಚದ ಸೆಟ್: ಜು.19ರಿಂದ ಮದಗಜ ಶೂಟಿಂಗ್ ಶುರು

ಇನ್ನು ದುಬಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಟೀಸರ್‌ನಲ್ಲಿ ಮುರಳಿ ಅವರ ಖಡಕ್ ಲುಕ್, ಪಂಚಿಂಗ್ ಡೈಲಾಗ್ಸ್  ಸೇರಿದಂತೆ ಭರ್ಜರಿ ಆಕ್ಷನ್‌ ಕಾಣಬಹುದಾಗಿದೆ. ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು (Jagapati Babu) ಅವರ ಟೆರರ್ ಲುಕ್ ನೋಡುಗರ ಮೈಜುಮ್ಮೆನಿಸುತ್ತದೆ. ಅಲ್ಲದೇ "ರಕ್ತ ಒಳಗಿನಿಂದ ಹರಿದರೆ ಸಂಬಂಧ, ಹೊರಗಿನಿಂದ ಹರಿಸಿದ್ರೆ ಕ್ರೌರ್ಯ' ಎಂದು ಡೈಲಾಗ್ ಹೊಡೆಯುವ ಮೂಲಕ ಆಕ್ಷನ್‌ ಲುಕ್‌ನಲ್ಲಿ ಮುರಳಿ ಅಬ್ಬರಿಸಿದ್ದಾರೆ.

2019ರಲ್ಲಿ ತೆರೆಕಂಡ 'ಭರಾಟೆ' ಚಿತ್ರದ ನಂತರ ಶ್ರೀ ಮುರಳಿ ನಟನೆಯ ಯಾವ ಚಿತ್ರಗಳೂ ಬಿಡುಗಡೆಯಾಗಿಲ್ಲ. ಆದ್ದರಿಂದಲೇ 'ಮದಗಜ' ಚಿತ್ರಕ್ಕೆ ಅಪಾರ ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಅಲ್ಲದೇ ಮೊದಲ ಬಾರಿಗೆ ಮುರಳಿ ಎದುರಿಗೆ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳುವ ಪೋಸ್ಟರನ್ನು ಸಹ ಚಿತ್ರತಂಡ ಹಂಚಿಕೊಂಡಿತ್ತು

click me!