ಕನ್ನಡದಲ್ಲಿ ಬರುತ್ತಿದೆ ಅಪರೂಪದ ಸೈನ್ಸ್ ಫಿಕ್ಷನ್ ಚಿತ್ರ | ನಿರ್ದೇಶಕ ವಿಕಾಸ್ ಪುಷ್ಪಗಿರಿ ಹೀಗೊಂದು ವಿಶೇಷವಾದ ಕತೆಯನ್ನು ‘ನ್ಯೂರಾನ್’ ಮೂಲಕ ಹೇಳಲು ಹೊರಟಿದ್ದಾರೆ.
ಕನ್ನಡದ ಮಟ್ಟಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಸಿನಿಮಾಗಳು ಬಹಳ ಅಪರೂಪ. ಹಾರರ್, ಆ್ಯಕ್ಷನ್, ಪ್ರೇಮ, ಥ್ರಿಲ್ಲರ್, ಸಸ್ಪೆನ್ಸ್ .. ಹೀಗೆ ನಾನಾ ಜಾನರ್‌ನ ಕತೆಗಳೇ ತೆರೆ ಮೇಲೆ ರಾರಾಜಿಸುತ್ತವೆ.
ಈ ಹಿನ್ನೆಲೆಯಲ್ಲಿ ‘ನ್ಯೂರಾನ್’ ಅಪರೂಪದ ಚಿತ್ರ ಎನ್ನಬಹುದು. ಇದು ಸೈನ್ಸ್ ಫಿಕ್ಷನ್. ಜೊತೆಗೆ ‘ಲೂಸಿಯಾ’, ‘ಯೂ ಟರ್ನ್’, ‘ರಂಗಿತರಂಗ’ ಮುಂತಾದ ಚಿತ್ರಗಳಂತೆ ಹಾರರ್ ಹಾಗೂ ಸಸ್ಪೆನ್ಸ್ ಅಂಶಗಳೂ ಇವೆ. ನಿರ್ದೇಶಕ ವಿಕಾಸ್ ಪುಷ್ಪಗಿರಿ ಹೀಗೊಂದು ವಿಶೇಷವಾದ ಕತೆಯನ್ನು ‘ನ್ಯೂರಾನ್’ ಮೂಲಕ ಹೇಳಲು ಹೊರಟಿದ್ದಾರೆ.
ಗಾಡಿ ಓಡಿಸುವಾಗ ಜಾಗೃತರಾಗಿರಿ; ಅಭಿಮಾನಿಗಳಲ್ಲಿ ದರ್ಶನ್ ಮನವಿ
‘ಎಲ್ಲರಿಗೂ ತಮ್ಮ ಸಿನಿಮಾದ ಮೇಲೆ ಪ್ರೀತಿ ಇದ್ದೇ ಇರುತ್ತದೆ. ನನಗೆ ‘ನ್ಯೂರಾನ್’ ಮೇಲೆ ಪ್ರೀತಿಯ ಜೊತೆಗೆ ನಂಬಿಕೆಯೂ ಇದೆ. ಇದಕ್ಕೆ ಕಾರಣ ಚಿತ್ರದ ಕಂಟೆಂಟ್ ಮತ್ತು ಮೇಕಿಂಗ್. ಇದೊಂದು ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾ. ನಿರ್ಮಾಪಕರು ಯಾವುದಕ್ಕೂ ಕೊರತೆ ಮಾಡಿಲ್ಲ.
ನ್ಯೂರಾನ್ ಎಂದರೆ ಜೀವಕಣಗಳು. ಇದು ಪ್ರತಿ ಮನುಷ್ಯನಿಗೂ ತುಂಬಾ ಅವಶ್ಯಕ. ಮನುಷ್ಯನ ಪ್ರತಿ ಆ್ಯಕ್ಷನ್ - ರಿಯಾಕ್ಷನ್ ನಿಂತಿರುವುದೇ ನ್ಯೂರಾನ್ ಮೇಲೆ. ಇದು ವಿಜ್ಞಾನಕ್ಕೆ ಸಂಬಂಧಿಸಿದ ಹೆಸರಾದರೂ ನಮ್ಮ ಸಿನಿಮಾದಲ್ಲಿ ಟೈಟಲ್‌ಗೆ ಸರಿಹೊಂದುತ್ತದೆ. ನಾಯಕನಾಗಿ ಯುವ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ನಾಲ್ವರು ನಾಯಕಿಯರಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು.
ವೈಷ್ಣವಿ ಮೆನನ್, ನೇಹಾ ಪಾಟೀಲ್, ಶಿಲ್ಪಾ ಶೆಟ್ಟಿ ಹಾಗೂ ವರ್ಷಾ ಚಿತ್ರದ ನಾಯಕಿಯರು. ಇವರೆಲ್ಲರಿಗೂ ಸಮಾನವಾದ ಪಾತ್ರವಿದೆಯಂತೆ. ಪ್ರತೀ ದೃಶ್ಯದಲ್ಲೂ ಕುತೂಹಲ ಹೆಚ್ಚಿಸುವ ಅಂಶಗಳಿವೆಯಂತೆ. ಮುಖ್ಯವಾಗಿ 2010 ರಲ್ಲಿ ಪಶ್ಚಿಮ ಬಂಗಾಲದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತಾದರೆ ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದು, ಶೋಯೆಬ್ ಅಹ್ಮದ್ ಛಾಯಾಗ್ರಹಣ, ಶ್ರೀಹರ್ಷ ಸಂಭಾಷಣೆ ಇದೆ. ವಿ ಆರ್ ವಿನಯ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.