ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಕೋವಿಡ್ ನಂತರ ಅಪಾರ ಸಾವು ನೋವು ಹೆಚ್ಚಾಗುತ್ತಿದ್ದು, ಎಚ್ಚರದಿಂದಿರುವಂತೆ ಸಲಹೆ ನೀಡಿದ್ದಾರೆ.
ಬೆಂಗಳೂರು (ಆ.07): ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಕೋವಿಡ್ ನಂತರ ಅಪಾರ ಸಾವು ನೋವು ಹೆಚ್ಚಾಗುತ್ತಿದೆ. ಕೋವಿಡ್ ಎಲ್ಲರ ಮೇಲೂ ಪರಿಣಾಮ ಬೀಡುತ್ತಿದ್ದು, ಎಲ್ಲರೂ ಎಚ್ಚರದಿಂದರಬೇಕು ಎಂದು ಸಲಹೆ ನೀಡಿದ್ದಾರೆ.
ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವಿನ ಹಿನ್ನೆಲೆಯಲ್ಲಿ ಮಾಧ್ಯಮಗಳ ಮೂಲಕ ಸಂತಾಪ ಸೂಚಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ವಿದೇಶ ಪ್ರವಾಸದಲ್ಲಿ ಹೃದಯಾಘಾತ ಆಗಿರುವುದು ಹಾಗೂ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿರೋದು ಎಲ್ಲರಿಗೂ ಆಘಾತವಾಗಿದೆ. ಅವರು ಆರೋಗ್ಯಯುತವಾಗಿ ಇದ್ದರು. ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೋವಿಡ್ ನಂತರ ಅಪಾರ ಸಾವು ನೋವು ಆಗ್ತಾ ಇದೆ. ಅದರಲ್ಲೂ ಕೋವಿಡ್ ನಂತರ ಎಲ್ಲರ ಮೇಲೂ ಪರಿಣಾಮ ಬೀರಿದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದರಿಬೇಕು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿಯನ್ನ ಕೋರುತ್ತೇನೆ ಎಂದು ತಿಳಿಸಿದ್ದಾರೆ.
'ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್ ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಗಿದೆ. ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು' ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ದಂಪತಿಯ ಜೊತೆಗಿರುವ ಚಿತ್ರದೊಂದಿಗೆ ಪೋಸ್ಟ್ ಮಾಡಿದ್ದಾರೆ.
ಪಾರ್ಥಿವ ಶರೀರ ತರಲಿಕ್ಕೆ ಪ್ರಯತ್ನ ನಡೆಯುತ್ತಿದೆ: ಬಹಳ ಚಿಕ್ಕ ವಯಸ್ಸು ಇಷ್ಟು ವಯಸ್ಸಲ್ಲಿ ಹೀಗಾಗಿದ್ದು ಬಹಳ ದುಃಖ ಆಗಿದೆ. ಭಗವಂತ ಯಾಕೆ ಹೀಗೆ ಮಾಡಿದನೋ ಗೊತ್ತಾಗ್ತಿಲ್ಲ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ. ಹಿಂದೆ ಅವರ ಸಹೋದರ ನಮ್ಮ ಕ್ಯಾಂಡಿಡೇಟ್ ಆಗಿದ್ದರು. ಅವರ ತಂದೆಯೂ ಕ್ಯಾಂಡಿಡೇಟ್ ಆಗಿದ್ದರು. ಅವರ ಪಾರ್ಥಿವ ಶರೀರ ತರುವ ವಿಚಾರದಲ್ಲಿ ನೋಡೋಣ ಏನು ಮಾಡಬಹುದು ಅಂತ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸ್ಪಂದನಾ ತುಂಬಾ ಒಳ್ಳೆಯವರು, ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ಸ್ಪಂದನಾ ಮತ್ತು ನಾನು ಕಳೆದ 8 ವರ್ಷದಿಂದ ನನ್ನ ಸ್ನೇಹಿತರಾಗಿದ್ದೇವೆ. ಸ್ಪಂದನಾ ಅವರ ಬಗ್ಗೆ ನೆಗೆಟಿವ್ ಥಿಂಗ್ಸ್ ಯಾವುದು ಇಲ್ಲ. ವಿಜಯ್ ರಾಘವೇಂದ್ರ ಅವರೂ ಅಷ್ಟೆ ಬಹಳ ಒಳ್ಳೆಯವರು. ಮನೆಯಲ್ಲಿ ಮಾಡುತ್ತಿದ್ದ ಎಲ್ಲ ಹಬ್ಬಕ್ಕೆ ಪೂಜೆಗೆ ಎಲ್ಲ ಕರೆಯುತ್ತಿದ್ದರು. ಅವರ ಪುತ್ರ ಶೌರ್ಯ ಮತ್ತು ನನ್ನ ಮಗಳು ಇಬ್ರು ಒಟ್ಟಿಗೆ ಆಟ ಆಡೋರು. ಸ್ಪಂದನಾ ತುಂಬಾ ತುಂಬಾ ಒಳ್ಳೆಯವರು. ನಮಗೆ ಈ ದುಃಖ ತಡೆಯೋದಕ್ಕಡ ಆಗ್ತಾ ಇಲ್ಲ ಇನ್ನು ಶೌರ್ಯ ಹೇಗೆ ನೋವು ತಡೆದುಕೊಳ್ತಾನೆ ಅನ್ನೋದೆ ತಿಳಿಯುತ್ತಿಲ್ಲ. ಇತ್ತೀಚೆಗೆ ಅವರು ಸಣ್ಣ ಆಗಿದದ್ದರು. ಆದರೆ ಬಹಳ ಹೆಲ್ದಿ ಇದ್ದರು. ಅವರು ಬ್ಯಾಂಕಾಕ್ ಹೋಗಿದರ ಬಗ್ಗೆ ತಿಳಿದಿತ್ತು, ಆದ್ರೆ ಯಾವ ಕಾರಣಕ್ಕೆ ಅಂತ ಗೊತ್ತಿಲ್ಲ. ಈಗ ಅವರ ನಿಧನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಸ್ಪಂದನಾ ಸ್ನೇಹಿತೆ ಶಾಂತಿ ಹೇಳಿದರು.
ರಾತ್ರಿಯೇ ಥಾಯ್ಲೆಂಡ್‌ಗೆ ತೆರಳಿದ ವಿಜಯ್ ರಾಘವೇಂದ್ರ: ಪತ್ನಿಗೆ ಹೃದಯಾಘಾತವಾದ ವಿಷಯ ತಿಳಿದ ಬೆನ್ನಲ್ಲಿಯೇ ವಿಜಯ ರಾಘವೇಂದ್ರ ತಡರಾತ್ರಿಯೇ ಬ್ಯಾಂಕಾಂಕ್‌ಗೆ ಪ್ರಯಾಣ ಬೆಳೆಸಿದ್ದಾರೆ. ರಾತ್ರಿ 12.10 ಥಾಯ್ ಏರ್ವೇಸ್ ನಲ್ಲಿ ಸ್ನೇಹಿತನ ಜೊತೆ ಬ್ಯಾಂಕಾಕ್ ಪ್ರಯಾಣ ಮಾಡಿದ್ದಾರೆ.