ಕೇವಲ 3 ಸಿನಿಮಾಗಳಿಂದ ₹1600 ಕೋಟಿ ಕಲೆಕ್ಷನ್ ಮಾಡಿದ ಕನ್ನಡತಿ ಶ್ರೀನಿಧಿ ಶೆಟ್ಟಿ!

Published : Feb 07, 2025, 05:42 PM IST
ಕೇವಲ 3 ಸಿನಿಮಾಗಳಿಂದ ₹1600 ಕೋಟಿ ಕಲೆಕ್ಷನ್ ಮಾಡಿದ ಕನ್ನಡತಿ ಶ್ರೀನಿಧಿ ಶೆಟ್ಟಿ!

ಸಾರಾಂಶ

ಮಂಗಳೂರಿನ ಶ್ರೀನಿಧಿ ಶೆಟ್ಟಿ, ಮಾಡೆಲಿಂಗ್ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮಿಸ್ ಸುಪ್ರಾನೇಷನಲ್ ಇಂಡಿಯಾ 2016 ಪ್ರಶಸ್ತಿ ಗೆದ್ದ ಇವರು, ಕೆಜಿಎಫ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು. ಕೋಬ್ರಾ ಸಿನಿಮಾ ಹಿನ್ನಡೆಯಾದರೂ, 'ತೆಲುಸು ಕಾದ', 'HIT 3', 'ಕಿಚ್ಚ ೪7' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ ಮೂರು ಚಿತ್ರಗಳು ಬಿಡುಗಡೆಯಾಗಿ ₹1600 ಕೋಟಿಗೂ ಹೆಚ್ಚು ಗಳಿಕೆ ಕಂಡಿವೆ.

ಮಾಡೆಲ್ ಆಗಿ ಕೆರಿಯರ್ ಶುರುಮಾಡಿ ಈಗ ಹೀರೋಯಿನ್ ಆಗಿರೋರು ಶ್ರೀನಿಧಿ ಶೆಟ್ಟಿ. ಮಂಗಳೂರಿನವರಾದ ಇವರು ಚಿಕ್ಕವಯಸ್ಸಿಂದಲೂ ಮಾಡೆಲಿಂಗ್ ಮತ್ತು ಫ್ಯಾಷನ್‌ನಲ್ಲಿ ಆಸಕ್ತಿ ಹೊಂದಿದ್ದರು.

2012ರಲ್ಲಿ 'ಕ್ಲೀನ್ ಅಂಡ್ ಕ್ಲಿಯರ್' ಸ್ಪಾನ್ಸರ್ ಮಾಡಿದ್ದ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್ ಸ್ಪರ್ಧಿಗಳಲ್ಲಿ ಒಬ್ಬರಾದರು. 2015ರಲ್ಲಿ ಮಣಪ್ಪುರಂ ಮಿಸ್ ಸೌತ್ ಇಂಡಿಯಾದಲ್ಲಿ ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿಗಳನ್ನು ಗೆದ್ದರು. ಮಣಪ್ಪುರಂ ಕ್ವೀನ್ ಆಫ್ ಇಂಡಿಯಾದಲ್ಲಿ ಫಸ್ಟ್ ರನ್ನರ್ ಅಪ್ ಆದರು.

Watch: ಕುಂಭಮೇಳದಲ್ಲಿ ಅಮೃತಸ್ನಾನ ಮಾಡಿದ ಕನ್ನಡದ ಸ್ಟಾರ್‌ ನಟಿ!

2018ರಲ್ಲಿ ಮಿಸ್ ದಿವಾ ಸ್ಪರ್ಧೆಯಲ್ಲಿ ಫೈನಲ್ ತಲುಪಿದರು. ಮಿಸ್ ಸುಪ್ರಾನೇಷನಲ್ ಇಂಡಿಯಾ 2016 ಪ್ರಶಸ್ತಿ ಗೆದ್ದು ಇಡೀ ಭಾರತ ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಯುಎಇ, ಫ್ರಾನ್ಸ್, ಜಪಾನ್, ಸಿಂಗಾಪುರ್, ಥೈಲ್ಯಾಂಡ್‌ಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಬಹುಮಾನಗಳನ್ನು ಗೆದ್ದಿದ್ದಾರೆ.

2018ರಲ್ಲಿ ಕನ್ನಡದ ಸೂಪರ್ ಹಿಟ್ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಹೀರೋ ಆಗಿದ್ದರು.

KGF ಬ್ಯೂಟಿಗೆ ಗೋಲ್ಡನ್ ಚಾನ್ಸ್, ಕೂಲಿ ಅಡ್ಡಾದಲ್ಲಿ ಶ್ರೀನಿಧಿ ಶೆಟ್ಟಿ ಝಲಕ್!

₹80 ಕೋಟಿ ಬಜೆಟ್‌ನ ಈ ಚಿತ್ರ ₹250 ಕೋಟಿ ಕಲೆಕ್ಷನ್ ಮಾಡಿತು. ಚಿನ್ನದ ಗಣಿ ಕೆಲಸಗಾರರ ಕಥೆ ಇದಾಗಿತ್ತು. 'ಕೆಜಿಎಫ್ ಚಾಪ್ಟರ್ 2' ರಲ್ಲೂ ಶ್ರೀನಿಧಿ ನಟಿಸಿದರು. ಮೊದಲ ಭಾಗಕ್ಕೆ ₹1 ಕೋಟಿ ಸಂಭಾವನೆ ಪಡೆದಿದ್ದ ಶ್ರೀನಿಧಿ, ಎರಡನೇ ಭಾಗಕ್ಕೆ ₹5 ಕೋಟಿ ಪಡೆದರು ಎನ್ನಲಾಗಿದೆ.

ಈ ಚಿತ್ರ ₹100 ಕೋಟಿ ಬಜೆಟ್‌ನಲ್ಲಿ ತಯಾರಾಗಿ ₹1300 ಕೋಟಿ ಕಲೆಕ್ಷನ್ ಮಾಡಿತು. ನಂತರ ತಮಿಳಿಗೂ ಕಾಲಿಟ್ಟ ಶ್ರೀನಿಧಿ, 2022ರಲ್ಲಿ ವಿಕ್ರಮ್ ಜೊತೆ 'ಕೋಬ್ರಾ' ಚಿತ್ರದಲ್ಲಿ ನಟಿಸಿದರು. ಆದರೆ ಈ ಚಿತ್ರ ನಿರೀಕ್ಷೆ ಹುಸಿಗೊಳಿಸಿತು.

'ಕೋಬ್ರಾ' ₹65-70 ಕೋಟಿ ಮಾತ್ರ ಕಲೆಕ್ಷನ್ ಮಾಡಿತು. ಶ್ರೀನಿಧಿ ಈಗ ತೆಲುಗಿನ 'ತೆಲುಸು ಕಾದ', 'HIT: The Third Case' ಮತ್ತು ಕನ್ನಡದ 'ಕಿಚ್ಚ ೪7' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರ ಮೂರು ಸಿನಿಮಾಗಳು ₹1600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ.

ಸರಳ ಸುಂದರಿ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ… ನಟಿಯ ಅಂದಕ್ಕೆ ಫ್ಯಾನ್ಸ್ ಫಿದಾ

ಶೆಟ್ಟಿ ಅವರನ್ನು 2016 ರಲ್ಲಿ ಬೆಂಗಳೂರು ಟೈಮ್ಸ್ ನ ಅತ್ಯಂತ ಅಪೇಕ್ಷಣೀಯ ಮಹಿಳೆ ಎಂದು ಹೆಸರಿಸಲಾಯಿತು. ಅದೇ ಪಟ್ಟಿಯಲ್ಲಿ, ಅವರು  2018 ಮತ್ತು 2019 ರಲ್ಲಿ 4 ನೇ ಸ್ಥಾನ ಮತ್ತು 2020೦ ರಲ್ಲಿ 5 ನೇ ಸ್ಥಾನ ಪಡೆದರು. ಪ್ರಸ್ತುತ ಒಟ್ಟು ಮೂರು ಸಿನೆಮಾಗಳು ಕನ್ನಡದಲ್ಲಿ ಕೆಜಿಎಫ್‌  ಅಧ್ಯಾಯ 1 ಮತ್ತು ಅಧ್ಯಾಯ ಎರಡು ಮತ್ತು ತಮಿಳಿನ ಕೋಬ್ರಾ ಚಿತ್ರ ಒಟ್ಟು 3 ಮಾತ್ರ ಬಿಡುಗಡೆಯಾಗಿದ್ದು, ತೆಲುಗಿನ 2 ಮತ್ತು ಕನ್ನಡದ 1 ಚಿತ್ರ ಚಿತ್ರೀಕರಣ ಹಂತದಲ್ಲಿದೆ. ವರದಿಯಂತೆ ನಟಿಯ ನಿವ್ವಳ ಮೌಲ್ಯ 50 ಮಿಲಿಯನ್‌ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ