
ಈ ನಟಿಯರು ಈಗೆಲ್ಲಿದ್ದಾರೆ ನೋಡಿ
ಕನ್ನಡ ಸಿನಿಮಾರಂಗದಲ್ಲಿ (Sandalwood) ನಡೆದ, ನಡೆಯುತ್ತಿರುವ ಹಲವಾರು ಸಂಗತಿಗಳು ಪ್ರೇಕ್ಷಕರಿಗೆ ಗೊತ್ತಿಲ್ಲ. ಅದರಲ್ಲೂ ಹಲವರು ಸೋಷಿಯಲ್ ಮೀಡಿಯಾಗಳನ್ನು ನೋಡೋದಿಲ್ಲ. ಟಿವಿ, ನ್ಯೂಸ್ ಪೇಪರ್, ಮನರಂಜನೆಗಳು ಹೀಗೆ ಇಷ್ಟಕ್ಕೇ ಸೀಮಿತವಾಗಿ ಮಾಹಿತಿ ಪಡೆದುಕೊಳ್ಳುವವರು ಹಲವರು. ಆದರೆ, ಅಂಥವರಿಗೆ ಹಲವು ಮಾಹಿತಿಗಳು ಮಿಸ್ ಆಗಿರುತ್ತವೆ. ಅಂತಹ ಒಂದು ಮಾಹಿತಿ ಇಲ್ಲಿದೆ ನೋಡಿ..
ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಹಲವು ನಟಿಯರು ಈಗ ಇಲ್ಲಿ ಅಥವಾ ಭಾರತ ದೇಶದಲ್ಲಿಯೇ ಇಲ್ಲ. ಹಲವು ವಿದೇಶಗಳಲ್ಲಿ ಅವರೆಲ್ಲರೂ ಜೀವಿಸುತ್ತಿದ್ದಾರೆ. ಹಾಗಿದ್ದರೆ ಯಾರು ಎಲ್ಲಿ ಇದ್ದಾರೆ? ಏನು ಮಾಡ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ ಮಾಹಿತಿ ಪ್ರಕಾರ ಬರೆದ ಸ್ಟೋರಿ ಇಲ್ಲಿದೆ. ಈ ಮಾಹಿತಿ ಪಕ್ಕಾ ಅಂತೇನಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆ, ಸದ್ಯಕ್ಕೆ ಈ ನಟಿಯರು ಈ ದೇಶಗಳಲ್ಲಿ ಇದ್ದಾರೆ ನೋಡಿ..
ರಂಭಾ- ಕೆನಡಾ
ಮಾಧವಿ-ಅಮೆರಿಕಾ
ದೀಪಿಕಾ ಕಾಮಯ್ಯ- ಆಸ್ಟ್ರೇಲಿಯಾ
ಮಾನ್ಯ ನಾಯ್ಡು- ಅಮೆರಿಕಾ
ಸಿಂಧೂ ಮೆನನ್- ಇಂಗ್ಲೆಂಡ್
ನಯನಾ ಪುಟ್ಟಸ್ವಾಮಿ- ಅಮೆರಿಕಾ
ಪ್ರಿಯಾ ಎಸ್ ಛಾಬ್ರಿಯಾ- ಅಮೆರಿಕಾ
ಈ ನಟಿಯರಲ್ಲಿ ಅನೇಕರು ಈಗ ಸಿನಿಮಾಗಳಲ್ಲಿ ನಟನೆ ಮಾಡುತ್ತಿಲ್ಲ. ಈ ಮೊದಲು ಕನ್ನಡದ ಹಲವು ಸಿನಿಮಾಗಳಲ್ಲಿ ಈ ನಟಿಯರು ನಟಿಸಿದ್ದರು. ಆದರೆ, ತಮ್ಮತಮ್ಮ ಮದುವೆ ಬಳಿಕ ಈ ಎಲ್ಲಾ ನಟಿಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಕೆಲವರು ಮತ್ತೆ ಭಾರತಕ್ಕೆ ವಾಪಸ್ ಕೂಡ ಆಗಿದ್ದಾರೆ. ಈ ಬಗ್ಗೆ ಹಲವು ಪ್ರೇಕ್ಷಕರಿಗೆ, ಸಿನಿಪ್ರೇಮಿಗಳಿಗೆ ಹಾಗೂ ಫ್ಯಾನ್ಸ್‌ಗಳಿಗೆ ಭಾರೀ ಕುತೂಹಲ ಇರುತ್ತದೆ. ಅಂಥವರಿಗೆ ಇಲ್ಲಿದೆ ಅವರಿಷ್ಟದ ಮಾಹಿತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.