ಗಾಯಕಿ ಶಮಿತಾ ಮಲ್ನಾಡ್ ಪುತ್ರನ ಪ್ರಶ್ನೆಗೆ ಉತ್ತರಿಸಿದ ಕ್ರಿಕೆಟರ್ ವಿರಾಟ್ ಕೊಹ್ಲಿ!

Suvarna News   | Asianet News
Published : Jun 02, 2021, 11:27 AM ISTUpdated : Jun 02, 2021, 11:35 AM IST
ಗಾಯಕಿ ಶಮಿತಾ ಮಲ್ನಾಡ್ ಪುತ್ರನ ಪ್ರಶ್ನೆಗೆ ಉತ್ತರಿಸಿದ ಕ್ರಿಕೆಟರ್ ವಿರಾಟ್ ಕೊಹ್ಲಿ!

ಸಾರಾಂಶ

ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ವಿರಾಟ್. ಶಮಿತಾ ಮಲ್ನಾಡ್ ಪುತ್ರನ ಪ್ರಶ್ನೆ ಏನು ಗೊತ್ತೇ?

ಕನ್ನಡ ಚಿತ್ರರಂಗದ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಪುತ್ರ ಅದ್ವೈತ್ ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ವಿರಾಟ್ ಕೊಟ್ಟ ಉತ್ತರದಿಂದ ಅದ್ವೈತ್ ಫುಲ್ ಖುಷ್ ಆಗಿದ್ದಾನೆ. ಈ ಸಂತೋಷದ ವಿಚಾರನ್ನು ಶಮಿತಾ ಹಂಚಿಕೊಂಡಿದ್ದಾರೆ.

ಬಿಡುವಿನ ಸಮಯದಲ್ಲಿ ಸೆಲೆಬ್ರಿಟಿಗಳು ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಕೇಳುವ ಎಲ್ಲಾ ಪ್ರಶ್ನೆಗಳಿಗೂ ಆದಷ್ಟು ಉತ್ತರಿಸಲು ಪ್ರಯತ್ನವೂ ಮಾಡುತ್ತಾರೆ. ಗಾಯಕಿ ಶಮಿತಾ ಮಲ್ನಾಡ್ ಪುತ್ರ 'ನೀವು ಕನ್ನಡ ಮಾತನಾಡುತ್ತೀರಾ ಹಾಗೇ ಅರ್ಥ ಮಾಡಿಕೊಳ್ಳುತ್ತೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿರಾಟ್ ಉತ್ತರಿಸಿದ್ದಾರೆ. 'ಸ್ವಲ್ಪ ಸ್ವಲ್ಪ ಸರ್ ಆದರೆ ಎಲ್ಲನೂ ಅರ್ಥ ಆಗಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದರ ಸ್ಕ್ರೀನ್ ಶಾಟ್‌ ತೆಗೆದು ಶಮಿತಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 

ಧೋನಿ ಜೊತೆಗಿನ ಸಂಬಂಧವನ್ನು 2 ಪದದಲ್ಲಿ ಹೇಳಿದ ವಿರಾಟ್ ಕೊಹ್ಲಿ! 

ವಿರಾಟ್ RCB ತಂಡದ ಜೊತೆ ಕೈ ಜೋಡಿಸಿದಾಗಿನಿಂದಲೂ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಪತ್ನಿ ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದಿರುವುದರಿಂದ ಸ್ವಲ್ಪ ಸ್ವಲ್ಪ ಗೊತ್ತು ಎಂದು ಹೇಳುತ್ತಾರೆ. ಆದರೀಗ ವಿರಾಟ್ ಬಾಯಲ್ಲಿ ಸ್ವಲ್ಪ ಸ್ವಲ್ಪ ಎಂದು ಕೇಳಿ ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದಾರೆ.  ಕನ್ನಡಿಗರಿಗೆ  ಅಥವಾ ಆರ್‌ಸಿಬಿಗೆ ಸಂಬಂಧಿಸಿದ ಪ್ರಶ್ನೆ ಏನೇ ಕೇಳಿದರೂ ವಿರಾಟ್ ಮತ್ತು ಅನುಷ್ಕಾ ಇಬ್ಬರೂ ತಪ್ಪದೇ ಉತ್ತರ ನೀಡುತ್ತಾರೆ. ಈ ಕಾರಣಕ್ಕೆ ಅವರಿಬ್ಬರನ್ನು ಕನ್ನಡಿಗರು ತುಂಬಾನೇ ಇಷ್ಟ ಪಡುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!