ಮದುವೆ, ಖಿನ್ನತೆ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗೆ ಬ್ರೇಕ್ ಹಾಕಿದ ನಟಿ ಪ್ರೇಮಾ!

Suvarna News   | Asianet News
Published : Jun 02, 2021, 11:06 AM ISTUpdated : Jun 02, 2021, 11:15 AM IST
ಮದುವೆ, ಖಿನ್ನತೆ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗೆ ಬ್ರೇಕ್ ಹಾಕಿದ ನಟಿ ಪ್ರೇಮಾ!

ಸಾರಾಂಶ

ಮದುವೆ ಮುರಿದು ಬಿದ್ದ ನಂತರ ಪ್ರೇಮಾ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಹರಿದಾಡುತ್ತಿದೆ. ಸ್ವತಃ ಪ್ರೇಮಾ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ 'ಓಂ' ಚೆಲುವೆ ಪ್ರೇಮಾ ಮೊದಲ ಮದುವೆ ಮುರಿದು ಬಿದ್ದ ನಂತರ ತಂದೆ ನಿಧನರಾದರು. ಮಂಕಾಗಿದ್ದ ಪ್ರೇಮಾಗೆ ಎರಡನೇ ಮದುವೆ ಮಾಡಿಕೊಳ್ಳಲು ಕುಟುಂಬದವರಿಂದ ಒತ್ತಡ ಹೆಚ್ಚಾಗಿದೆ ಈ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುವ ಪ್ರೇಮಾ ಫೇಕ್‌ ನ್ಯೂಸ್‌ ಫೋಟೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ನಟಿ ಪ್ರೇಮಾ 44ನೇ ವಯಸ್ಸಿಗೆ ಮದುವೆಯಾಗುತ್ತಿದ್ದಾರೆ. ಹುಡುಗನ್ಯಾರು ಗೊತ್ತಾ? ಪ್ರೇಮಾ ಖಿನ್ನತೆ ಎದುರಿಸಲು ಕಾರಣವೇನು ಎಂದೆಲ್ಲಾ ಹರಿದಾಡುತ್ತಿತ್ತು. 'ನನ್ನ ಬಗ್ಗೆ ಹರಿದಾಡುತ್ತಿರುವ ಫೇಕ್ ನ್ಯೂಸ್ ಇದು. ಇದನ್ನು ನಂಬಿ ನನಗೆ ಮೆಸೇಜ್ ಮಾಡಬೇಡಿ' ಎಂದು ಬರೆದುಕೊಂಡಿದ್ದಾರೆ. ಪ್ರೇಮಾ ತಮ್ಮ ಖಾಸಗಿ ಬದುಕಿನ ಬಗ್ಗೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಜನರು ಒಂದಲ್ಲಾ ಒಂದು ರೀತಿ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಪ್ರೇಮಾ ಅಭಿಮಾನಿಗಳಿಗೂ ಬೇಸರವಿದೆ. 

ಸ್ಯಾಂಡಲ್‌ವುಡ್ ‘ಚಂದ್ರಮುಖಿ’ಗೆ ಟಾರ್ಚರ್ ಕೊಟ್ರಾ ಉಪೇಂದ್ರ? 

ಈ ಹಿಂದೆ ವೀಕೆಂಡ್ ವಿತ್ ರಮೇಶ್ ಸಾಧಕರ ಕಾರ್ಯಕ್ರಮದಲ್ಲಿ ಪ್ರೇಮಾ ತಮ್ಮ ಬದುಕಿನ ಬಗ್ಗೆ ಮಾತನಾಡಿದ್ದರು. 'ಮದುವೆ ವಿಚಾರ ಏನಾಯ್ತು ಅಂತ ಹೇಳಲು ಇಷ್ಟವಿಲ್ಲ. ನಾನು ಆರೋಗ್ಯವಾಗಿದ್ದೇನೆ ಹಾಗೂ ನನಗೆ ಮಕ್ಕಳಿಲ್ಲ' ಎಂದು ಹೇಳಿದ್ದರು. 2009ರಲ್ಲಿ 'ಶಿಶಿರ' ಚಿತ್ರದಲ್ಲಿ ಅಭಿನಯಿಸಿದ ನಂತರ ಪ್ರೇಮಾ ಚಿತ್ರರಂಗಕ್ಕೆ ಬೈ ಹೇಳಿದ್ದರು, 2017ರಲ್ಲಿ 'ಉಪೇಂದ್ರ ಮತ್ತೆ ಬಾ' ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮ್ಮನಿಂದ ವಿಲನ್ ವರೆಗೆ ಎಲ್ಲ ಪಾತ್ರಕ್ಕೂ ಸೈ, ಹೊಸ ವರ್ಷ ಹೊಸ ನಿರೀಕ್ಷೆಯಲ್ಲಿ ನಟಿ ಶ್ರುತಿ
2026 ರಲ್ಲಿ ಥಿಯೇಟರಲ್ಲಿ ಧೂಳೆಬ್ಬಿಸಲು ರೆಡಿಯಾಗಿರುವ ಕನ್ನಡ ಸಿನಿಮಾಗಳು