ಇತ್ತೀಚೆಗಷ್ಟೇ ನಟ ದೇವರಕೊಂಡ ಫ್ಯಾಮಿಲಿ ಜತೆ ಹಬ್ಬದಲ್ಲಿ ಕಾಣಿಸಿಕೊಂಡಿದ್ದ ನಟಿ ರಶ್ಮಿಕಾ ಆರೋಗ್ಯವಾಗಿಯೇ ಇದ್ದರಲ್ಲಾ' ಎಂದು ಹಲವರು ಸಂಶಯ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಯಾರೊಬ್ಬರ ಕಾಮೆಂಟ್‌ನಲ್ಲಿ ಕೂಡ ನಟಿ ರಶ್ಮಿಕಾಗೆ ಏನಾಗಿದೆ ಎಂಬುದು ತಿಳಿದುಬರುತ್ತಿಲ್ಲ.
ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣಗೆ ಏನಾಗಿದೆ? ಇತ್ತೇಚೆಗಷ್ಟೇ ನಟ ವಿಜಯ್ ದೇವರಕೊಂಡ ಫ್ಯಾಮಿಲಿ ಜತೆ ದೀಪಾವಳಿ ಹಬ್ಬ ಆಚರಿಸಿಕೊಂಡಿದ್ದು ಸುದ್ದಿಯಾಗಿತ್ತು. ಆದರೆ, ಈಗ ಅವರ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್ ನೋಡಿದರೆ ರಶ್ಮಿಕಾ ಅಭಿಮಾನಿಗಳು ಆತಂಕಪಡುವದು ಗ್ಯಾರಂಟಿ ಎನ್ನಬಹುದು. ಹಾಗಿದ್ರೆ, ರಶ್ಮಿಕಾ ಹಾಕಿರುವ ಪೋಸ್ಟ್ ಏನು?
ಹೌದು, ನಟಿ ರಶ್ಮಿಕಾ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, 'ರಿಕವರಿ ಈಸ್ ಇಂಪಾರ್ಟೆಂಟ್ ಆಸ್ ವೆಲ್' ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ, ನಟಿಗೆ ಏನಾಗಿದೆ? ಯಾಕೆ ಅವರು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ? ಇದಕ್ಕೆಲ್ಲಾ ಸದ್ಯಕ್ಕೆ ಉತ್ತರವಿಲ್ಲದಿದ್ದರೂ ನಟಿ ರಶ್ಮಿಕಾಗೆ ಏನೋ ಅನಾರೋಗ್ಯ ಕಾಡಿದೆ, ಆಸ್ಪತ್ರೆಗೆ ಭೇಟಿ ಕೊಟ್ಟು ಅಲ್ಲಿ ಅಡ್ಮಿಟ್ ಆಗಿದ್ದಾರೆ ಎಂಬುದಂತೂ ಪಕ್ಕಾ ಎನ್ನಬಹುದು. ಏಕೆಂದರೆ ತಮ್ಮ ಆಫೀಸಿಯಲ್ ಇನ್‌ಸ್ಟಾಗ್ರಾಂನಲ್ಲಿ ನಟಿ ರಶ್ಮಿಕಾ ಪೋಸ್ಟ್ ಮಾಡಿ ಹಾಗೆ ಬರೆದುಕೊಂಡಿದ್ದಾರೆ.
ಅವ್ಳನ್ನ ಮನಸ್ಸಲ್ಲಿ ಇಟ್ಕೊಂಡು ನಿನ್ನನ್ನ ಮದ್ವೆಯಾಗೋ ಒತ್ತಡವಿತ್ತು; ವೈಷ್ಣವ್ ಮಾತಿಗೆ ಮೌನವಾದಳೇ ಮಹಾಲಕ್ಷ್ಮೀ!
'ಇತ್ತೀಚೆಗಷ್ಟೇ ನಟ ದೇವರಕೊಂಡ ಫ್ಯಾಮಿಲಿ ಜತೆ ಹಬ್ಬದಲ್ಲಿ ಕಾಣಿಸಿಕೊಂಡಿದ್ದ ನಟಿ ರಶ್ಮಿಕಾ ಆರೋಗ್ಯವಾಗಿಯೇ ಇದ್ದರಲ್ಲಾ' ಎಂದು ಹಲವರು ಸಂಶಯ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಯಾರೊಬ್ಬರ ಕಾಮೆಂಟ್‌ನಲ್ಲಿ ಕೂಡ ನಟಿ ರಶ್ಮಿಕಾಗೆ ಏನಾಗಿದೆ ಎಂಬುದು ತಿಳಿದುಬರುತ್ತಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿರುವ ಫೋಟೋದಲ್ಲಿ ರಶ್ಮಿಕಾ ಸ್ಮೈಲ್ ಮಾಡುತ್ತಿದ್ದು, ನಟಿಗೆ ಸೀರಿಯಸ್ ಏನೂ ಆಗಿಲ್ಲ ಎಂಬುದು ಗ್ಯಾರಂಟಿ ಎನ್ನಬಹುದು.
ಈ ರಾಮಚಾರಿಗೆ ದೇವಸ್ಥಾನದಲ್ಲಿ 'ಹಗ್' ಮಾಡಬಾರದು ಅಂತ ಗೊತ್ತಿಲ್ವಾ, ನೆಟ್ಟಿಗರ ಕಾಮೆಂಟ್ ವೈರಲ್!
ಅಂದಹಾಗೆ, ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ರಣವೀರ್ ಕಪೂರ್ ಜತೆ 'ಅನಿಮಲ್' ಚಿತ್ರದ ಶೂಟಿಂಗ್ ಮುಕ್ತಾಯದ ಹಂತಕ್ಕೆ ಬಂದಿದೆ. ಪೋಸ್ಟರ್ ಹಾಗೂ ಟ್ರೈಲರ್ ರಿಲೀಸ್ ಆಗಿ ಭಾರಿ ಮೆಚ್ಚುಗೆ ಕೂಡ ಗಳಿಸಿದೆ. ಅಲ್ಲು ಅರ್ಜುನ್ ಜತೆಗಿನ ಪುಷ್ಪಾ-2 ಚಿತ್ರ ಸಹ ಶೂಟಿಂಗ್ ಹಂತದಲ್ಲಿದೆ. ಇನ್ನೊಂದು ಬಾಲಿವುಡ್ ಸಿನಿಮಾಗೆ ಸಹ ರಶ್ಮಿಕಾ ಸಹಿ ಹಾಕಿದ್ದಾರೆ. ಒಟ್ಟಿನಲ್ಲಿ ನಟಿ ರಶ್ಮಿಕಾ ಸಖತ್ ಚೂಸಿ ಮತ್ತು ಬ್ಯುಸಿ ಆಗಿದ್ದಾರೆ.