LSG vs RCB: ಮುಂದಿನ ಸಲ ಬನ್ನಿ, Rcbians ಜಾತ್ರೆನೆ ಮಾಡ್ತಾರೆ: ಗಂಭೀರ್ ಪಡೆಗೆ ಸಿಂಪಲ್ ಸುನಿ ಸವಾಲ್

Published : May 02, 2023, 10:39 AM ISTUpdated : May 02, 2023, 10:45 AM IST
LSG vs RCB: ಮುಂದಿನ ಸಲ ಬನ್ನಿ, Rcbians ಜಾತ್ರೆನೆ ಮಾಡ್ತಾರೆ: ಗಂಭೀರ್ ಪಡೆಗೆ ಸಿಂಪಲ್ ಸುನಿ ಸವಾಲ್

ಸಾರಾಂಶ

ಮುಂದಿನ ಸಲ ಚಿನ್ನಸ್ವಾಮಿಗೆ ಬನ್ನಿ, Rcbians ಜಾತ್ರೆನೆ ಮಾಡ್ತಾರೆ ಎಂದು ಗಂಭೀರ್ ಪಡೆಗೆ ಸಿಂಪಲ್ ಸುನಿ ಸವಾಲ್ ಹಾಕಿದ್ದಾರೆ.  

ಆರ್‌ಸಿಬಿ ಸಿಡಿಲಬ್ಬರದ ಪ್ರದರ್ಶನಕ್ಕೆ ಲಖನೌ ಮಂಡಿಯೂರಿದೆ. ಟಾರ್ಗೆಟ್ 127 ರನ್. ಆದರೆ ಲಖನೌ ಸ್ಲೋ ಪಿಚ್‌ನಲ್ಲಿ ಈ ಮೊತ್ತ ಬೃಹತ್ ಮೊತ್ತವಾಗಿ ಲಖನೌ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಆರ್‌ಸಿಬಿ ವಿಕೆಟ್ ಮೇಲೆ ವಿಕೆಟ್ ಪಡೆದು ಸಂಭ್ರಮಿಸಿತು. ಇಷ್ಟೇ ಆಗಿದ್ದರೆ ಪ್ರತಿ ಪಂದ್ಯದಲ್ಲೊಂದು ಪಂದ್ಯ ಆಗಿರೋದೇನು. ಆದರೆ ನಿನ್ನೆಯ ಮ್ಯಾಚ್ ಗಂಭೀರ್ ಪಡೆ ವಿರುದ್ಧ ಪಕ್ಕ ರಿವೇಂಜ್ ತೀರಿಸಿಕೊಂಡ ಹಾಗಿತ್ತು. ಪ್ರತಿ ವಿಕೆಟ್ ಪಡೆದಾಗಲು ವಿರಾಟ್ ಕೊಹ್ಲಿ ಅಭಿಮಾನಿಗಳ ತಿರುಗಿ ಈ ಹಿಂದೆ ಗೌತಮ್ ಗಂಭೀರ್ ಮಾಡಿದ್ದ ಆಕ್ಷನ್‌ಗೆ  ರಿಯಾಕ್ಷನ್ ನಾಡುತ್ತಿದ್ದರು. ಕೊಹ್ಲಿಯ ಸಂಭ್ರಮ, ಆರ್‌ಸಿಬಿ ಜೋಶ್, ಲಖನೌ ತಂಡಕ್ಕೆ ದೊಡ್ಡ ಸಂಕಷ್ಟ ತಂದಿಟ್ಟಿತ್ತು. ಪರಿಣಾಮ ಲಖನೌ 19.5 ಓವರ್‌ಗಳಲ್ಲಿ 108ರನ್‌ಗೆ ಆಲೌಟ್ ಆಯಿತು. ಆರ್‌ಸಿಬಿ 18 ರನ್ ರೋಚಕ ಗೆಲುವು ದಾಖಲಿಸಿತು.

ಆರ್‌ಸಿಬಿ ಗೆಲುವು Rcbians ಪಾಲಿಗೆ ದೊಡ್ಡ ಸಂಭ್ರಮವಾಗಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅರ್ಭಟ, ರಿಯಾಕ್ಷನ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಮೊದಲು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ವಿರುದ್ಧ ಗಂಭೀರ್ ಪಡೆ ಗೆದ್ದು ಬೀಗಿತ್ತು. ಆಷ್ಟೇ ಆಗಿದ್ದರೆ ನಿನ್ನೆಯ ಮ್ಯಾಚ್ ಅಷ್ಟು ರೋಚಕವಾಗಿ ಇರುತ್ತಿರಲಿಲ್ಲ. ಸಂಭ್ರಮದಲ್ಲಿದ್ದ Rcbians ಬಾಯಿ ಮುಚ್ಚಿಸಿದ್ದರು ಗಂಭೀರ್. ಲಖನೌ ತಂಡದ ವರ್ತನೆ, ಗಂಭೀರ್ ಆಕ್ಷನ್ ಅಭಿಮಾನಿಗಳಿಗೆ ಮಾತ್ರ ವಿರಾಟ್ ಕೊಹ್ಲಿಯ ನಿದ್ದೆಗೆಡಿಸಿತ್ತು. ಆದರೆ ಆರ್ ಸಿ ಬಿ ಲಖೌನ್‌ ಫೀಲ್ಡ್‌ನಲ್ಲೇ ಅವರಿಗೆ ಬಡ್ಡಿ ಸಮೇತ ತೀರಿಸಿದ್ದಾರೆ. ಇದು Rcbians ಪಾಲಿಗೆ ದೊಡ್ಡ ಸಂಭ್ರದ ಕ್ಷಣವಾಗಿದೆ. 

RCB vs CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ; CSK ಫ್ಯಾನ್ಸ್‌ಗೆ ಸಿಂಪಲ್ ಸುನಿ ತಿರುಗೇಟು

ಕೊಹ್ಲಿ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲಲ್ ಸುನಿ ಪ್ರತ್ರಿಕ್ರಿಯೆ ನೀಡಿದ್ದಾರೆ. ಸಿಂಪಲ್ ಸುನಿ ಆರ್‌ಸಿಬಿಯ ಅಪ್ಪಟ ಅಭಿಮಾನಿ. ನಿನ್ನೆಯ ಮ್ಯಾಚ್ ವೀಕ್ಷಿಸಲು ಸುನಿ ಲಖನ್‌ಗೆ ಎಂಟ್ರಿ ಕೊಟ್ಟಿದ್ದರು. ಕೊಹ್ಲಿ ಪಡೆಯ ಅರ್ಭಟವನ್ನು ಕಣ್ಣೇರೆ ನೋಡಿ ಆನಂದಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

'ಅಭಿಮಾನಿಗಳು ಮರೀಬಹುದು. ಆದ್ರೆ ಕೊಹ್ಲಿ ಮರೆಯೋಲ್ಲ. ಚಿನ್ನಸ್ವಾಮಿಲಿ ಅಭಿಮಾನಿಗಳಿಗೆ Shhh ಹೇಳಿದ್ದು ನೋಡಿದರೆ ಲಖನೌ ಅಲ್ಲೇ RCB ಕೊಗಿನ ಹಬ್ಬ ನೆಡಿತಿದೆ. ಮುಂದಿನ ಸಲ ಚಿನ್ನಸ್ವಾಮಿಗೆ ಬನ್ನಿ Rcbians ಜಾತ್ರೆನೇ ಮಾಡ್ತಾರೆ. Aavesh ಖಾನ್ ಅವೇಶ ಇರಲಿ. ನಿಂಗ್ ಮ್ಯಾಚ್ ಅಲ್ಲಿ ಜಾಗನೇ ಇಲ್ವೇಲ್ಲಪ್ಪ' ಎಂದು ಟಾಂಗ್ ನೀಡಿದ್ದಾರೆ. 

IPL 2023 ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್‌ಗೆ ಪಂದ್ಯದ ಶೇ.100 ರಷ್ಟು ದಂಡ!

'ನೀನು ಉರಿಸೋದಾದ್ರೆ ಉರ್ಕೊಳೋಕ್ಕೂ ರೆಡಿ ಇರಬೇಕು' ಎಂದು ಹೇಳಿದ್ದಾರೆ. ತಿರುಗಿ ಕೊಟ್ರೆ ಬಡ್ಡಿ ಸಮೇತಾ ಕೊಡುದು ಇದು ಕಿಂಗ್ ಕೊಹ್ಲಿ ಸ್ಟೈಲ್ ಎಂದು ಹೇಳಿದ್ದಾರೆ. ಸಿಂಪಲ್ ಜೊತೆಗೆ ಕಾಂತಾರ ನಟಿ ಸಪ್ತಮಿ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ರಿಯಾಕ್ಷನ್ ಫೋಟೋ ಶೇರ್ ಮಾಡಿ, 'ಕ್ಷಮಿಸಿ ಎಂದಿಗೂ ಮರೆಯಬೇಡಿ' ಎಂದು ಕ್ಯಾಪ್ಷನ್ ನೀಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!