
ಕನ್ನಡ ಚಿತ್ರರಂಗದ ಹೆಸರಾಂತ ನಟ ಸಿಹಿ ಕಹಿ ಚಂದ್ರು ಮುದ್ದಿನ ಪುತ್ರಿ ಹಿತಾ ಚಂದ್ರ ಶೇಖರ್ ಇನ್‌ಸ್ಟಾಗ್ರಾಂನಲ್ಲಿ ಟ್ರಿಗರಿಂಗ್ ವಾರ್ನಿಂಗ್ ಅಥವಾ ಅಲರ್ಟ್ ಕೊಟ್ಟು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. collaboration ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ವಿಡಿಯೋ ಆರಂಭ ಮಾಡುವ ಮುನ್ನ ನನ್ನ ಮುಖ ನೋಡಿ ಹೆದರಿಕೊಳ್ಳಬೇಡಿ ಎಂದು ಹೇಳಿ ಮಾತನಾಡಿದ್ದಾರೆ. ಒಂದು ಬರವಸೆ ಮೇಲೆ ಹಿತಾ ಪ್ರತಿಷ್ಠಿತ ಸಲೂನ್ ಜೊತೆ collaboration ಮಾಡಿಕೊಂಡು ಹೇರ್ ಕಲರ್ ಮಾಡಿಸಿಕೊಂಡಿದ್ದಾರೆ. ಕಲರ್ ಮಾಡಿಸಿಕೊಂಡು ಮನೆಗೆ ಬಂದಿದ್ದಾರೆ. ಸ್ವಲ್ಪ ಹೊತ್ತಲ್ಲಿ ತಲೆ ಕೆರೆತ ಶುರುವಾಗಿದೆ. ಬಹುಷು ಸ್ವಲ್ಪ ಸಮಯ ಹೀಗೆ ಇರುತ್ತದೆ ಎಂದುಕೊಂಡು ಸುಮ್ಮನಾಗಿದ್ದಾರೆ. ರಾತ್ರಿ ಮಲಗಿ ಎದ್ದೇಳುವಷ್ಟರಲ್ಲಿ ಮುಖ ಊದಿಕೊಂಡಿದೆ. ಹಣೆ ಫುಲ್ ಊದಿದೆ ಹಾಗೂ ಕಣ್ಣಿನ ಹುಬ್ಬುಗಳು ಊದಿದೆ. ಮೊದಲ ಸಲ ಹೀಗಾಗುತ್ತಿರುವ ಕಾರಣ ತಕ್ಷಣವೇ ತಮ್ಮ ವೈದ್ಯರನ್ನು ಸಂಪರ್ಕ ಮಾಡಿದ್ದಾರೆ.
ತ್ವಚೆ ಚೆನ್ನಾಗಿ ಕಾಣಿಸಲು ಚಿಕಿತ್ಸೆ ಪಡೆಯುತ್ತಿರುವ ದೀಪಿಕಾ ದಾಸ್; ವಿಡಿಯೋ ವೈರಲ್!
ಹೇರ್ ಕಲರ್‌ಗಳಲ್ಲಿ PPD ಎನ್ನು ಅಂಶ ಇದ್ದ ಕಾರಣ ಈ ರೀತಿ ರಿವರ್ಸ್ ಎಫೆಕ್ಟ್ ಆಗಿದೆ ಎನ್ನಲಾಗಿದೆ. PPD ಇದ್ದರೆ ಕೂದಲ ಕಲರ್ ಹೆಚ್ಚಿನ ದಿನಗಳ ಕಾಲ ಉಳಿಯುತ್ತದೆ ಅನ್ನೋದು ಸತ್ಯ. ಇದನ್ನು ಬಳಸಿ ಹಿತಾ ಕೂದಲಿಗೆ ಬಣ್ಣ ಹಾಕಿದ್ದಾರೆ. ಮುಖದ ಊತ ಕಡಿಮೆ ಆಗಲು ವೈದ್ಯರು ಮೊದಲು ಮಾತ್ರ ಕೊಟ್ಟಿದ್ದಾರೆ.. ಆದರೂ ದಿನದಿಂದ ದಿನಕ್ಕೆ ಊತ ಹೆಚ್ಚಾಗುತ್ತಿರುವ ಕಾರಣ ಈಗ ವೈದ್ಯರು steroids ನೀಡಲು ಶುರು ಮಾಡಿದ್ದಾರೆ. ಮುಖದಲ್ಲಿ ಆಗುತ್ತಿರುವ ಬದಲಾವಣೆ ಒಂದಾದರೆ ಮಾನಸಿಕವಾಗಿ ಆಗುತ್ತಿರುವ ಒತ್ತಡವೂ ಹೆಚ್ಚಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮಾಡಿಸಿಕೊಂಡಿರುವುದನ್ನು ನೋಡಿ ನಂಬಿ ಹೋಗಿದ್ದೆ ಆದರೆ ಹೀಗೆ ಆಗಿರುವುದು ಬೇಸರ ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.