
ಜುಲೈ 21ರಂದು ಶುಭಾ ಪೂಂಜಾ ಅಭಿನಯಿಸಿರುವ ಅಂಬುಜ ಸಿನಿಮಾ ಬಿಡುಗಡೆಯಾಗುತ್ತಿದೆ. ಶ್ರೀನಿ ಹನುಮಂತರಾಜು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣ ಮಾಡುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ಶುಭಾ ಕ್ರೈಂ ರಿಪೋರ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾರರ್, ಥ್ರಿಲ್ಲರ್, ಕಾಮಿಡಿ ಎಲ್ಲಾ ಅಂಶಗಳನ್ನು ಹೊಂದಿರುವ ಈ ಸಿನಿಮಾ ಪ್ರಚಾರದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಪತಿ ಸುಮಂತ್ ಸಪೋರ್ಟ್ ಬಗ್ಗೆ ಹೇಳಿಕೊಂಡಿದ್ದಾರೆ.
'ನನ್ನ ಸಿನಿಮಾಗಳಲ್ಲಿ ನನ್ನ ಪತಿಗೆ ತುಂಬಾ ಇಷ್ಟವಾಗಿರುವುದು ಮೊಗ್ಗಿನ ಮನಸ್ಸು ಏಕೆಂದರೆ ಫ್ಯಾಮಿಲಿ ಜೊತೆ ಅವರು ನೋಡಿರುವ ಮೊದಲ ಸಿನಿಮಾ ಅದು ಬೇರೆನೂ ಇಷ್ಟ ಪಡುತ್ತಾರೆ ಆದರೆ ಟಾಪ್ ಫೇವರೆಟ್ ಅದೇ' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಶುಭಾ ಮಾತನಾಡಿದ್ದಾರೆ.
ನನಗೆ ಹೈಟ್ ಫೋಬಿಯಾ ಇದೆ, ಸಿನಿಮಾ ಬಿಟ್ಟು ದೂರ ಇರಲ್ಲ: ಶುಭಾ ಪೂಂಜಾ
'ಮದ್ವೆ ಆದ್ಮೇಲೆ ನಾನು ಶೂಟಿಂಗ್ ಮುಗಿಸಿ ರಿಲೀಸ್ ಮಾಡುತ್ತಿರುವ ಮೊದಲ ಸಿನಿಮಾ ಅಂಬುಜ. ಮದ್ವೆಯಾದ 5 ದಿನಕ್ಕೆ ಶೂಟಿಂಗ್‌ಗೆ ಕರೆಸಿದರು. ಈಗ ಮದ್ವೆ ಆಗಿರುವೆ ಯಾಕೆ ಶೂಟಿಂಗ್ ಹೋಗಬೇಕು ಎಂದು ಒಂದು ದಿನವೂ ಪ್ರಶ್ನೆ ಮಾಡಿಲ್ಲ ಈ ವಿಚಾರದಲ್ಲಿ ನಾನು ತುಂಬಾನೇ ಲಕ್ಕಿ ಸಿಕ್ಕಾಪಟ್ಟೆ ಸಪೊರ್ಟ್ ಮಾಡುತ್ತಾರೆ. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಬಿಡಲ್ಲ ನಾನು ಮನೆಯಲ್ಲಿದ್ದರೆ ಕಿರಿಕಿರಿ ಅನ್ಸುತ್ತೆ ಯಾವಾಗಲೂ ನಾನು ಶೂಟಿಂಗ್ ಮಾಡುತ್ತಿರಬೇಕು ಹೊರಗಡೆ ಹೋಗು ಕೆಲಸ ಮಾಡು ಎನ್ನುತ್ತಾರೆ. ಇವತ್ತಿಗೂ ನಿರ್ದೇಶಕ ಶ್ರೀನಿ ಮನೆಗೆ ಬಂದ್ರೆ ನನ್ನ ಪತಿ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಪ್ರೊಡಕ್ಷನ್‌ನಲ್ಲಿ ಮುಂದೆ ಬರಬೇಕು ಅನ್ನೋ ಆಸೆ ತುಂಬಾನೇ ಇದೆ. ಸಿನಿಮಾ ಇಂಟ್ರೆಸ್ಟ್ ಹೆಚ್ಚಿರುವ ಕಾರಣ ಕನ್ನಡ, ಹಿಂದಿ, ಇಂಗ್ಲಿಷ್ ಅಥವಾ ಯಾವುದೇ ಭಾಷೆ ಇರಲಿ ಮೊದಲು ಸಿನಿಮಾ ನೋಡುತ್ತಾರೆ ನಾನು ಇಲ್ಲಿದ್ದರೂ ಒಬ್ಬರೆ ಹೋಗಿ ಸಿನಿಮಾ ನೋಡುತ್ತಾರೆ' ಎಂದು ಶುಭಾ ಹೇಳಿದ್ದಾರೆ.
ಹೀಗೆ ಮಾಡಿ ಮಾಡಿ 10 ಕೆಜಿ ಸಣ್ಣಗಾಗಿರುವೆ; ವೇಟ್‌ಲಾಸ್ ಸೀಕ್ರೆಟ್ ಬಿಚ್ಚಿಟ್ಟ ಶುಭಾ ಪೂಂಜಾ
'ಮದುವೆ ಆಗಿ ಮೂರು ದಿನಕ್ಕೆ ಹೊರಗಡೆ ಹೋಗುತ್ತಿರುವೆ ಹಾಗೆ ಹೀಗೆ ಎಂದು ಪ್ರಶ್ನೆ ಮಾಡಿಲ್ಲ ಇವತ್ತಿಗೂ ನೈಟ್ ಶೂಟಿಂಗ್ ಇದೆ ಅಂದ್ರೆ ನಾನು ಆಗಲ್ಲ ಅಂತ ಯೋಚನೆ ಮಾಡುತ್ತಿದ್ದರೂ ಅವನು ಏನಾಗುತ್ತೆ ಹೋಗಿ ಶೂಟಿಂಗ್ ಮಾಡಿಕೊಂಡು ಬಾ ಎನ್ನುತ್ತಾರೆ. ನನ್ನ ವೃತ್ತಿ ಬದುಕಿಗೆ ನನ್ನ ಪತಿ ತುಂಬಾನೇ ಸಪೋರ್ಟ್ ಮಾಡುತ್ತಾರೆ ಹೀಗಾಗಿ ಕೆಲವೊಂದು ಸಲ ನಾನು ಮದುವೆಯಾಗಿರುವೆ ಅನಿಸುವುದಿಲ್ಲ ಮದ್ವೆ ಆದ್ಮೇಲೆ ನಾನ್ ಸ್ಟಾಪ್ ವರ್ಕ್ ಮಾಡುತ್ತಿರುವೆ. ನನ್ನ ಪತಿ ಸ್ನೇಹಿತರು ನಿರ್ಮಾಪಕರಾಗಿರುವ ಕಾರಣ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಹೆಸರು ಮಾಡಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದಾರೆ' ಎಂದಿದ್ದಾರೆ ಶುಭಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.