ನಾಗಶೇಖರ್ ಬರಿ ರೀಲ್ ಬಿಡ್ತಿದ್ದಾರೆ.. ಸಂಜು ವೆಡ್ಸ್ ಗೀತಾ -2 ಸಿನಿಮಾ ನೋಡಿದ ಶಿವಣ್ಣ ಹೀಗಾ ಹೇಳೋದು!

Published : Jun 20, 2025, 08:39 AM IST
Sanju Weds Geetha 2

ಸಾರಾಂಶ

ಸಂಜು ವೆಡ್ಸ್ ಗೀತಾ -2 ಒಂದು ಲವ್ ಮತ್ತು ಎಮೋಷನ್ ಚಿತ್ರ. ಈ ಸಿನಿಮಾವು ಚೆನ್ನಾಗಿ ಮೂಡಿ ಬಂದಿದೆ. ರಚಿತಾ ರಾಮ್ ಮತ್ತು ಕಿಟ್ಟಿ ಇಬ್ಬರು ತುಂಬಾ ಚೆನ್ನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಶಿವಣ್ಣ ಹೇಳಿದ್ದಾರೆ.

ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್‌ ಗೀತಾ-2 ರಿ-ರಿಲೀಸ್‌ ಆಗಿದೆ. ಇದೀಗ ಮೈಸೂರಿನಲ್ಲಿ ಸಂಜು ವೆಡ್ಸ್ ಗೀತಾ-2 ಸಿನಿಮಾ ನೋಡಿದ್ದಾರೆ ನಟ ಶಿವರಾಜ್ ಕುಮಾರ್. ನಂತರ ಮಾತನಾಡಿದ ಶಿವಣ್ಣ, ಸಂಜು ವೆಡ್ಸ್ ಗೀತಾ -2 ಒಂದು ಲವ್ ಮತ್ತು ಎಮೋಷನ್ ಚಿತ್ರ. ಈ ಸಿನಿಮಾವು ಚೆನ್ನಾಗಿ ಮೂಡಿ ಬಂದಿದೆ. ರಚಿತಾ ರಾಮ್ ಮತ್ತು ಕಿಟ್ಟಿ ಇಬ್ಬರು ತುಂಬಾ ಚೆನ್ನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಹಳ ವರ್ಷಗಳ ನಂತರ ವಿಶೇಷತೆ ಮೂಡಿಸುವ ಚಿತ್ರ ಬಂದಿದೆ. ನಾಗಶೇಖರ್ ಸ್ಟೈಲಿಶ್ ಆಗಿ ಹಾಗೂ ಲವ್‌ನಲ್ಲಿ ಮುಳುಗಿರುವ ಆಳು. ಲವ್‌ನಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎರಡು ಸಹ ಇದೆ. ಸಂಜು ವೆಡ್ಸ್ ಗೀತಾ ಸಿನಿಮಾ ತ್ಯಾಗ ಸಂಕೇತದ ಸಿನಿಮಾ. ಚಿತ್ರದಲ್ಲಿ ಸಂಗೀತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾಣಿಯವರ ಪಾತ್ರ ನನಗೆ ತುಂಬಾ ಇಷ್ಟವಾಯ್ತು. ಚಿತ್ರ ಎಲ್ಲಿಯೂ ಬೋರ್ ಹೊಡೆಯುವುದಿಲ್ಲ ಎಂದರು.

ಗೀತಾ ಅನ್ನೊ ವರ್ಡ್ ಲಕ್ಕಿ: ಪತ್ನಿ ಗೀತಾ ಜೊತೆ ಸಿನಿಮಾ ನೋಡಿದ ವಿಚಾರವಾಗಿ, ಅವರು ಹೆಸರು ಗೀತಾ ಅಲ್ವಾ ಎಂದು ಎಲ್ಲರನ್ನೂ ನಗಿಸಿದರು ಶಿವರಾಜ್ ಕುಮಾರ್. ಯಾವ ಭಾಷೆ ಹಾಗೂ ಯಾರೇ ನಟಿಯವರ ಹೆಸರನ್ನ ಗಮನಿಸಿ ಗೀತಾ ಎಂದೇ ಕರೆಯುತ್ತಾರೆ. ಗೀತಾ ಅನ್ನೊ ವರ್ಡ್ ಲಕ್ಕಿ. ಮಕ್ಕಳು ಸಹ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ನಾಗಶೇಖರ್ ಜೊತೆ ಸಿನಿಮಾ ಮಾಡುವುದೊಂದು ಪೆಂಡಿಂಗ್ ಇದೆ. ಬರಿ ರೀಲ್ ಬಿಡ್ತಿದ್ದಾರೆ ಆದರೆ ಸಿನಿಮಾ ಮಾಡ್ತಿಲ್ಲ. ಬಹಳ ವರ್ಷಗಳ ನಾಗಶೇಖರ್ ತುಂಬಾ ಒಳ್ಳೆಯ ಸಿನಿಮಾ ಕೊಟ್ಟಿದ್ದಾರೆ. ನಾಗಶೇಖರ್‌ಗೆ ಬರವಣಿಗೆ ಹಾಗೂ ಸಂಗೀತದ ಜ್ಞಾನ ತುಂಬಾ ಚೆನ್ನಾಗಿದೆ ಎಂದು ಶಿವಣ್ಣ ಹೇಳಿದರು.

ಮಾಧ್ಯಮದವರು ಮೊದಲು ಫೈಟ್ ಮಾಡಬೇಕು: ಕನ್ನಡ ಚಿತ್ರಗಳಿಗೆ ಚಿತ್ರ ಮಂದಿರ ಸಿಗದ ವಿಚಾರವಾಗಿ, ನೀವು ‌ಮೊದಲು ಗಲಾಟೆ ಮಾಡಬೇಕು, ನಾವು ಗಲಾಟೆ ಮಾಡಿದರೆ ಸಾಕಾಗುವುದಿಲ್ಲ. ಎಲ್ಲವನ್ನೂ ನಮ್ಮ ಮೇಲೆ ಹೊರೆ ಹೊರಸಿದ್ರೆ ಹೇಗೆ? ಇದು ಯಾವ ನ್ಯಾಯ. ಮಾಧ್ಯಮದವರು ಎತ್ತಿ ಕೊಡಬೇಕು ಯಾಕೆ ಚಿತ್ರಮಂದಿರ ಕೊಡುತ್ತಿಲ್ಲ ಅಂಥ. ಮಾಧ್ಯಮದವರು ಮೊದಲು ಫೈಟ್ ಮಾಡಬೇಕು. ಕನ್ನಡ ಭಾಷೆ ಒಬ್ಬರದಲ್ಲ, ಎಲ್ಲರಿಗೂ ಸಂಬಂಧಿಪಟ್ಟಿದ್ದು. ಒಳ್ಳೆ ಸಿನಿಮಾಗಳು ಬಂದು ಚಿತ್ರಮಂದಿರ ಸಿಗದಿದ್ದರೇ ನಿಜವಾಗಲೂ ಬೇಜಾರಾಗುತ್ತೆ. ಪ್ರಭಾಕರ್ ಅವರ ಮಗನ ಸಿನಿಮಾಗೆ ಚಿತ್ರ ಮಂದಿರಲ್ಲ ಸಿಕ್ಕಲ್ಲ ಅನ್ನೊದು ಬೇಸರದ ಸಂಗತಿ ಎಂದು ಶಿವಣ್ಣ ತಿಳಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ಯಧಿಕ ಹಣದ ಆಫರ್​ ಕೊಟ್ರೂ ಯುವತಿಯರ 'ಡ್ರೀಮ್​ ಬಾಯ್'​ ಮುಕೇಶ್​ ಗೌಡ Bigg Bossಗೆ ಹೋಗದ ಕಾರಣ ರಿವೀಲ್​
Actors Death in 2025: ಈ ವರ್ಷ ಇಹಲೋಕ ತ್ಯಜಿಸಿದ ಚಂದನವನದ ತಾರೆಯರು